ಶಿವ ಶರಣ ಹಡಪದ ಅಪ್ಪಣ್ಣನವರ ಜಯಂತಿ ಆಚರಣೆ

ಲೋಕದರ್ಶನ ವರದಿ

ಶಿರಹಟ್ಟಿ 16: ತಾತ್ವಿಕ ಚಿಂತನೆ ಒಳಗೊಂಡ ವಚನಗಳನ್ನು ರಚಿಸಿ ಸಮಾಜಕ್ಕೆ ಕೊಡುಗೆಯಾಗಿ ನೀಡಿದ ಶಿವಶರಣ ಹಡಪದ ಅಪ್ಪಣ್ಣನವರು ಬಸವಣ್ಣನವರ ಸಮಾಜ ಬದಲಾವಣೆ ಮೂಲಕ ಅಸ್ಪುರ್ಷತಾ ನಿವಾರಣೆಯ ಆಂದೊಲನದಲ್ಲಿ ತಮ್ಮದೆಯಾದ ಸೇವೆಯ ಮೂಲಕ ಪ್ರಸಿದ್ದರಾಗಿದ್ದರು ಎಂದು ತಹಶೀಲ್ದಾರ ಯಲ್ಲಪ್ಪ ಗೋಣೆಣ್ಣನವರ ಹೇಳಿದರು.

ಅವರು ಪಟ್ಟಣದ ತಾಲೂಕ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಶಿವಶರಣ ಹಡಪದ ಅಪ್ಪಣ್ಣನವರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜ್ಯ ಸರಕಾರ ಬಿಡುಗಡೆಗೊಳಿಸಿರುವ ಸಮಗ್ರ ವಚನ ಸಾಹಿತ್ಯ ಸಂಪುಟದಲ್ಲಿ ಅಪ್ಪಣ್ಣನವರ 246 ವಚನಗಳನ್ನು ಪ್ರಕಟಿಸಲಾಗಿದೆ. ಶಿಕ್ಷಣದಿಂದ ಮಾತ್ರ ಸಾಮಜಿಕ ಮತ್ತು ಆರ್ಥಿಕ  ಪ್ರಗತಿ ಸಾಧ್ಯ. ಹೀಗಾಗಿ ಹಡಪದ ಸಮುದಾಯದ ಹಿರಿಯರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಹೇಳಿದರು.

ನಂತರ ಸಮಾಜದ ಅಧ್ಯಕ್ಷರಾದ ನಾಗರಾಜ ಡಂಬಳ ಮಾತನಾಡಿ ರಾಜ ಮಹರಾಜರ ಕಾಲದಲ್ಲಿ ಹಾಗೂ ಇತಿಹಾಸದಲ್ಲಿ ಹಡಪದ ಸಮುದಾಯದ ಹಿರಿಮೆ ಗರಿಮೆಗಳ ಕುರಿತು ಇನ್ನು ಹೆಚ್ಚಿನ ಸಂಶೋಧನೆಗಳು ನಡೆಯಬೇಕು. 12ನೇ ಶತಮಾನದಲ್ಲಿ ಬಸವಣ್ಣನವರ ಅನುಭವ ಮಂಟಪದಲ್ಲಿ ಸ್ಥಾನ ಪಡೆದಿದ್ದ ಹಡಪದ ಅಪ್ಪಣ್ಣನವರು ತಮ್ಮ ಕಾಯಕ ನಿಷ್ಠೆ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದರು ಎಂದು ಹೇಳಿದರು.

ಕೆ.ಎ.ಬಳಿಗಾರ, ಚನ್ನವೀರಪ್ಪ ನಾವಿ, ಚನ್ನಪ್ಪ ನಾವಿ, ರಮೇಶ ಮಾಗಡಿ, ಯಲ್ಲಪ್ಪ ಮಾಗಡಿ, ಪ್ರಕಾಶ ನಾವಿ, ಬಸವರಾಜ ನಾವಿ, ಫಕ್ಕೀರೇಶ ನಾವಿ, ಫಕ್ಕೀರೇಶ ಮಾಗಡಿ, ಹಡಪದ ಸಮಾಜದ ಗುರು-ಹಿರಿಯರು ಮತ್ತು ತಾಲೂಕ ಕಚೇರಿ ಸಿಬ್ಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಎಮ್.ಕೆ.ಲಮಾಣಿ ಕಾರ್ಯಕ್ರಮ ನಿರೂಪಣೆ ಮಾಡಿದರು.