ಲೋಕದರ್ಶನ ವರದಿ
ಗೋಕಾಕ: ರಸ್ತೆ ಅಪಘಾತದಲ್ಲಿ ಗಾಯಗೊಂಡು ನಿಧನ ಹೊಂದಿದ ಪತ್ರಕರ್ತ ಶಾನೂಲ ಸುಭಾಸ ಮಾವರಕರ ಅವರ ಮನೆಗೆ ಕನರ್ಾಟಕ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಮುರುಗೇಶ ಶಿವಪೂಜಿ ಅವರು ಬುಧವಾರದಂದು ಭೇಟಿ ನೀಡಿ ಮಾವರಕರ ಮನೆಯವರಿಗೆ ಸಾಂತ್ವನ ಹೇಳಿದರು.
ಶಾನೂಲ ಮಾವರಕರ ಸಣ್ಣ ವಯಸ್ಸಿನಲ್ಲಿಯೇ ನಿಧನರಾಗಿದ್ದು ನಮಗೆಲ್ಲರಿಗೂ ದುಃಖವಾಗಿದೆ ಎಂದು ಹೇಳಿದರಲ್ಲದೆ ಕನರ್ಾಟಕ ಪತ್ರಕರ್ತರ ಸಂಘದಿಂದ ಸಹಾಯಧನವೆಂದು 10,000 ರೂ.ಗಳನ್ನು ನೀಡಿ ಅವರ ದುಃಖದಲ್ಲಿ ತಾನೂ ಸಹಭಾಗಿ ಇರುವದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಪತ್ರಕರ್ತರಾದ ಎಸ್.ಬಿ.ಧಾರವಾಡಕರ, ಮಲ್ಲಪ್ಪ ದಾಸಪ್ಪಗೋಳ, ಅಡಿವೆಪ್ಪ ಪಾಟೀಲ, ಮಹಾದೇವ ಗುದಗಗೋಳ, ಹಣಮಂತ ತಾಶೀಲ್ದಾರ ಸೇರಿದಂತೆ ಅನೇಕರು ಇದ್ದರು.
ಗಾಯಗೊಂಡ ಪತ್ರಕರ್ತ ಎಲ್.ಸಿ. ಗಾಡವಿ ಅವರಿಗೂ ಸಹಾಯ:
ಇದೇ ಸಂದರ್ಭದಲ್ಲಿ ಇತ್ತೀಚೆಗೆ ಕಡಬಗಟ್ಟಿ ರಸ್ತೆ ಅಪಘಾತದಲ್ಲಿ ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೂಡಲಗಿಯ ಪತ್ರಕರ್ತ ಎಲ್.ಸಿ. ಗಾಡವಿ ಅವರ ಆರೋಗ್ಯವನ್ನು ಕನರ್ಾಟಕ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಮುರುಗೇಶ ಶಿವಪೂಜಿ ಅವರು ವಿಚಾರಿಸಿ ಬೇಗನೆ ಸ್ವಾಸ್ಥರಾಗುವಂತೆ ಕೋರಿದರು. ಅಲ್ಲದೆ ಕನರ್ಾಟಕ ಪತ್ರಕರ್ತರ ಸಂಘದಿಂದ 5000ರೂ.ಗಳ ಸಹಾಯಧನವನ್ನು ನೀಡಿದರು.