ಟೀಂ ಇಂಡಿಯಾ ಜತೆ ಫೋಟೋಗೆ ಪೋಸ್ ಕೊಟ್ಟ ಅನುಷ್ಕಾ ಶಮರ್ಾ


ಲಂಡನ್ 08: ಲಂಡನ್ ನಲ್ಲಿರುವ ಭಾರತೀಯ ಹೈಕಮಿಷನರ್ ಕಛೇರಿಯು ಮಂಗಳವಾರ ಬಾರತೀಯ ಕ್ರಿಕೆಟ್ ತಂಡದ ಸದಸ್ಯರಿಗಾಗಿ ಔತಣಕುಟ ಏರ್ಪಡಿಸಿತ್ತು. ಈ ಕೂಟಕ್ಕೆ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶಮರ್ಾ ಸಹ ತೆರಳಿರುವುದು ಇದೀಗ ಅಚ್ಚರಿ ಹಾಗೂ ಟಿಕೆಗೆ ಕಾರಣವಾಗಿದೆ. 

ಇಂಗ್ಲೆಂಡ್-ಭಾರತ ನಡುವೆ ನಡೆಯುತ್ತಿರುವ ಟೆಸ್ಟ್ ಕ್ರಿಕೆಟ್ ಪಂದ್ಯದ ವೇಳೆ ಆಟಗಾರರು ತಮ್ಮ ಪತ್ನಿ, ಕುಟುಂಬದವರಿಂದ ದೂರ ಉಳಿಯಬೇಕೆಂದು ಬಿಸಿಸಿಐ ಕಟ್ಟುನಿತ್ತಿನ ಆದೇಶ ಮಾಡಿದೆ, ಹಾಗಿದ್ದೂ ಸಹ ಬಾಲಿವುಡ್ ನಟಿ, ವಿರಾಟ್ ಕೊಹ್ಲಿ ಪತ್ನಿಯಾದ ಅನುಷ್ಕಾ ಶಮರ್ಾ ಈ ಔತಣ ಕೂಟದಲ್ಲಿ ಹೇಗೆ ಭಾಗವಹಿಸಿದ್ದಾರೆ ಎನ್ನುಉದು ಇದೀಗ ಪ್ರಶ್ನೆಯಾಗಿದೆ. 

ಬಿಸಿಸಿಐ ಮಾಡಿದ್ದ ಟ್ವೀಟ್ ನಲ್ಲಿ ಔತಣಕೂಟಕ್ಕೆ ಆಹ್ವಾನಿತವಾದ ಭಾರತ ಕ್ರಿಕೆಟ್ ತಂಡದ ಸದಸ್ಯರೊಡನೆ ಅನುಷ್ಕಾ ಶಮರ್ಾ ನಿಂತಿರುವ ಚಿತ್ರವಿದೆ. ಅಷ್ಟೇ ಅಲ್ಲ ನಾಯಕ ಬಳಿಕ ಇರಬೇಕಾದ ಉಪನಾಯಕನನ್ನು ಹಿಂದೆ ಸರಿಸಿ ತಾನು ಮುಂದೆ ನಿಂತು ಫೋಟೋಗೆ ಪೋಸ್ ಕೊತ್ಟಿರುವ ನಟಿಯ ವಿರುದ್ಧ ಸಾಮಾಜಿಕ ತಾಣದಲ್ಲಿ ಕ್ರಿಕೆಟ್ ಅಭಿಮಾನಿಗಳಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇದೇ ವೇಳೆ ಬಿಸಿಸಿಐ ಇಬ್ಬಗೆ ನೀತಿ ಅಳವಡಿಸಿಕೊಂಡಿದೆ ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ. 

ಆಗಸ್ಟ್ 9ರಿಂದ ಲಾಡ್ರ್ಸ ನಲ್ಲಿ ಭಾರತ-ಇಂಗ್ಲೆಂಡ್ ನಡುವೆ ಎರಡನೇ ಟೆಸ್ಟ್ ಪಂದ್ಯ ಪ್ರಾರಂಭವಾಗಲಿದ್ದು ಈ ಸಲುವಾಗಿ ಭಾರತ ತಂಡ ಇದೀಗ ಲಂಡನ್ ನಲ್ಲಿ ಬೀಡು ಬಿತ್ಟಿದೆ. 

ಈ ಚಿತ್ರವನ್ನು ಇಂಡಿಯನ್ ಕ್ರಿಕೆಟ್ ಟೀಮ್ ಇನ್ಸ್ಟಾಗ್ರ್ಯಾಮ್ ಪುಟದಲ್ಲಿ ಅಪ್ಲೋಡ್ ಮಾಡಲಾಗಿದೆ ಮತ್ತು ಅಲ್ಲಿ ಸಹ ಅಭಿಮಾನಿಗಳು ಇದರ ವಿರುದ್ಧ ಭಾರೀ ಟೀಕೆಗಳ ಪ್ರತಿಕ್ರಿಯೆ ನಿಡಿದ್ದಾರೆ.