ಶ್ರೀನಗರ, ಅ 17: ಮಾರುಕಟ್ಟೆಗೆ ಕಾಶ್ಮೀರದ ತಾಜಾ ಸೇಬು ಹಣ್ಣುಗಳು ಬಂದಿವೆ. ವ್ಯಾಪಾರಿಗಳು ಸಂತಸದಿಂದಲೇ ಸೇಬು ಖರೀದಿಸಿದರು, ಹಣ್ಣಿನ ಪೆಟ್ಟಿಗೆ ತೆರೆದು ನೋಡಿ... ದಿಗ್ಬ್ರಮೆಗೊಳಗಾಗಿದ್ದಾರೆ...!
ಸೇಬಿನ ಹಣ್ಣುಗಳ ಮೇಲೆ ಭಾರತ ವಿರೋಧಿ ಘೋಷಣೆಗಳನ್ನು ಕಪ್ಪು ಸ್ಕೆಚ್ ಪೆನ್ನಲ್ಲಿ ಬರೆದಿರುವುದೇ ಇದಕ್ಕೆ ಕಾರಣ. ಕಾಶ್ಮೀರದ ಕತುವಾ ಸಗಟು ಮಾರುಕಟ್ಟೆಯಲ್ಲಿ ಈ ಘಟನೆ ನಡೆದಿದೆ.
ಈ ಕೃತ್ಯವನ್ನು ವಿರೋಧಿಸಿ ವ್ಯಾಪಾರಿಗಳು ಕೂಡಲೇ ಮಾರುಕಟ್ಟೆಯ ಮುಂದೆ ಪ್ರತಿಭಟನೆ ನಡೆಸಿದರು. ಸೇಬು ಹಣ್ಣುಗಳ ಮೇಲೆ 'ಬುರ್ಹಾನ್ ವನಿ', 'ಪಾಕಿಸ್ತಾನ್ ಜಿಂದಾಬಾದ್' ಹಾಗೂ 'ಗೋ ಬ್ಯಾಂಕ್ ಇಂಡಿಯಾ' ಘೋಷಣೆಗಳನ್ನು ಬರೆದಿರುವ ಬಗ್ಗೆ ವ್ಯಾಪಾರಿಗಳು ತೀವ್ರ ಆಕ್ರೋಶಗೊಂಡಿದ್ದಾರೆ.
ಈ ಸಂಬಂಧ ಪೊಲೀಸರಿಗೆ ದೂರು ಸಲ್ಲಿಸಿರುವ ಮಾರುಕಟ್ಟೆ ಅಧ್ಯಕ್ಷ ರೋಹಿತ್ ಗುಪ್ತಾ, ದುಷ್ಕೃತ್ಯ ನಡೆಸಿದವರನ್ನು ಕೂಡಲೇ ಗುರುತಿಸಿ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಕೇಸು ದಾಖಲಿಸಿಕೊಂಡಿರುವ ಪೊಲೀಸರು ಕಿಡಿಗೇಡಿಗಳ ಪತ್ತೆಗೆ ಮುಂದಾಗಿದ್ದಾರೆ.