ಬೆಳಗಾವಿ : ಬಾಣಂತಿಯರ ಬಾಳಿಗೆ ಸದಾ ಸಾವಿನ ಮನೆಯಂತಾದ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಸಾವೊಪ್ಪಿರುವ ಘಟನೆ ನಡೆದಿದೆ.
ಬೆಳಗಾವಿ ಬೀಮ್ಸ್ ಆಸ್ಪತ್ರೆಯಲ್ಲಿ ಗುರುವಾರ ಈ ಘಟನೆ ನಡೆದಿದ್ದು, ತುಮ್ಮರಗುದ್ದಿ ಗ್ರಾಮದ ಬಾಣಂತಿ ಕೀರ್ತಿ ಮೃತಪಟ್ಟಿದ್ದಾರೆ. ಮೃತ ಬಾಣಂತಿ ಕೀರ್ತಿ ಕಳೆದ ಮೂರು ದಿನಗಳಿಂದ ಬಿಮ್ಸ್ ಆಸ್ಪತ್ರೆಯ ವೆಂಟಿಲೆಟರನಲ್ಲಿ ಇರಿಸಲಾಗಿತ್ತು. ಆದರೆ ಇವತ್ತು ಬಾಣಂತಿ ಕೀರ್ತಿ ಮೃತಪಟ್ಟಿದ್ದಾರೆ.
ಎಪಿಎಂಸಿ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆಸಿದೆ. ಬಾಣಂತಿ ಯರ ಕುಟುಂಬಸ್ಥರು ಬಿಮ್ಸ ಆಸ್ಪತ್ರೆಯ ವಿರುದ್ದ ಧರಣಿ ನಡೆಸಿದ್ದಾರೆ.