ನವದೆಹಲಿ, ಜೂನ್ 11,ಕೆಲ ದಿನಗಳ ಹಿಂದೆ ರೈತ ಸಮುದಾಯಕ್ಕೆ ಆತಂಕ ತಂದಿದ್ದ ಮಿಡತೆಗಳ ಹಾವಳಿ ಮತ್ತೊಮ್ಮೆ ಮಹಾರಾಷ್ಟ್ರ, ಉತ್ತರ ಪ್ರದೇಶ ಹಾಗೂ ರಾಜಸ್ಥಾನ ರಾಜ್ಯಗಳಲ್ಲಿ ಕಾಣಿಸಿಕೊಂಡಿದೆ. ಕಳೆದ ಎರಡು ಮೂರು ದಿನಗಳಿಂದ ಉತ್ತರ ಪ್ರದೇಶದ ಪ್ರಯಾಗ್ ರಾಜ್, ಮಹಾರಾಷ್ಟ್ರದ ನಾಗ್ಪುರ ಹಾಗೂ ರಾಜಸ್ಥಾನದ ಕೆಲವು ಭಾಗಗಳಲ್ಲಿ ಮಿಡತೆಗಳು ಹಾವಳಿ ಮತ್ತೆ ಶುರುವಾಗಿದೆ. ರೈತರಿಗೆ ಹೊಸ ಸಂಕಷ್ಟ ತಂದೊಡ್ಡಿದ್ದು, ಕಳೆದ ಎರಡು ಮೂರು ದಿನಗಳಿಂದ ಬೀಸುತ್ತಿರುವ ಗಾಳಿಯಿಂದ ಮಿಡತೆಗಳು ಮತ್ತೊಮ್ಮೆ ದಾಳಿ ಮಾಡುತ್ತಿವೆ ಎಂದು ಮಿಡತೆ ಎಚ್ಚರಿಕೆ ಸಂಸ್ಥೆ ಮಾಹಿತಿ ನೀಡಿದೆ.ಇನ್ನು ಜುಲೈ ಮಾಹೆಯಲ್ಲೂ ಮತ್ತೊಮ್ಮೆ ಮಿಡತೆಗಳು ದಾಳಿಯಿಡುವ ಸಾಧ್ಯತೆಯಿದೆ ಎಂದು ಹೇಳಲಾಗಿದ್ದು, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಎಲ್ಲ ರಾಜ್ಯ ಸರ್ಕಾರಗಳಿಗೆ ಎಚ್ಚರಿಕೆ ನೀಡಲಾಗಿದೆ.