ಲೋಕದರ್ಶನ ವರದಿ
ಹೊನ್ನಾವರ,14:.ಯಾರಿಗೂ ಬೇಡದವರಾದ ಮಾನಸಿಕ ರೋಗಿಗಳಾಗಿ ಗೊತ್ತು ಗುರಿ ಇಲ್ಲದೇ ರಾಷ್ಟ್ರೀಯ ಹೆದ್ದಾರಿಯಗಲಕ್ಕು ಅಲೆಯುತ್ತಿದ್ದ ಇಬ್ಬರನ್ನು ಜೀವನಧಾರಾ ಟ್ರಸ್ಟಿನಿಂದ ಹೊನ್ನಾವರದಿಂದ ದಾರವಾಡದಲ್ಲಿರುವ ಮಾನಸಿಕ ಆಸ್ಪತ್ರೆಗೆ ರವಾನಿಸಲಾಯಿತು.
ಕಳೆದ 8-10 ದಿನಗಳಿಂದ ಹೊನ್ನಾವರದಿಂದ ಕಾಸರಕೋಡಿನವರೆಗೆ ತಿಂಡಿ ಹಾಗೂ ಆಶ್ರಯಕ್ಕಾಗಿ ಹುಚ್ಚಾಪಟ್ಟೆ ತಿರುಗಾಡುತ್ತಿದ್ದ ಇವರನ್ನು ಸಂಘದ ಅಧ್ಯಕ್ಷರಾದ ಜೆ.ಜೆ.ಡಿಸೋಜಾ ಹಾಗೂ ಸದಸ್ಯರಾದ ಎಸ್.ಜೆ.ಕೈರನ್ನ ಹಾಗೂ ಮಹೇಶ ಕಲ್ಯಾಣಪುರ ಗುರುತಿಸಿ, ಹೊನ್ನಾವರ ಪೋಲಿಸ್ ಠಾಣಾ ಅಧಿಕಾರಗಳ ಸಹಕಾರದೊಂದಿಗೆ ಠಾಣೆಗೆ ತಂದು ನಂತರ ಸೇಂಟ್ ಇಗ್ನೇಶಿಯಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ನ್ಯಾಯಾಲಯದ ಮೂಲಕ ಧಾರವಾಡ ಮಾನಸಿಕ ರೋಗಿಗಳ ಆಸ್ಪತ್ರೆಗೆ ಜೀವನಧಾರಾ ಟ್ರಿಸ್ಟಿನ ಸದಸ್ಯರಾದ ಡಾ. ರಂಗನಾಥ ಪೂಜಾರಿ ಹಾಗೂ ಮಹೇಶ ಕಲ್ಯಾಣಪುರ ಮತ್ತು ಪೋಲಿಸರಾದ ಓಮು ನಾಯ್ಕ ಹಾಗೂ ಹೋಮ್ಗಾಡರ್್ನಾದ ಶಶಿಹಿತ್ತಲ್ ರವರು ಸುರಕ್ಷಿತವಾಗಿ
ಮುಟ್ಟಿಸಿರುತ್ತಾರೆ.
ಈ ಕಾರ್ಯದಲ್ಲಿ ಹೆಚ್ಚಿನ ಮುತವಜರ್ಿ ಸಹಕರಿಸಿದ ಹೊನ್ನಾವರದ ಪಿ.ಎಸ್.ಆಯ್. ಸಂತೋಷ್ ಕಾಯ್ಕಿಣಿಯವರಿಗೆ ಹಾಗೂ ಇಗ್ನೇಷಿಯಸ್ ಆಸ್ಪತ್ರೆಯ ಸಿಬ್ಬಂದಿಗಳಿಗೆ ಜೀವನಧಾರ ಟ್ರಸ್ಟಿನ ಸರ್ವ ಸದಸ್ಯರು ವಂದನೆ ಸಲ್ಲಿಸಿರುತ್ತಾರೆ.