ಅಮರನಾಥ ಯಾತ್ರೆಗೆ ಹೊರಟ 2723 ಯಾತ್ರಾರ್ಥಿಗಳ ಮತ್ತೊಂದು ತಂಡ

    ಜಮ್ಮು, ಜು ೨೫  ಇಲ್ಲಿನ ಭಗವತಿ ನಗರ ಮೂಲ ಶಿಬಿರದ ಯಾತ್ರಿ ನಿವಾಸ್ನಿಂದ "ಬಾಮ್ ಬಾಮ್ ಭೋಲೆ" ಪಠಣಗಳು ಮತ್ತು ಮಳೆಯ ಮಧ್ಯೆ 2,723 ಯಾತ್ರಾರ್ಥಿಗಳ ಹೊಸ ತಂಡ ಬುಧವಾರ ಹಿಮಾಲಯದ ದಕ್ಷಿಣದಲ್ಲಿರುವ ಅಮರನಾಥ ಗುಹಾ ದೇಗುಲಕ್ಕೆ ತೆರಳಿದೆ. 

    ಯಾತ್ರಾರ್ಥಿಗಳನ್ನು  ಕರೆದೊಯ್ಯುವ 100 ವಾಹನಗಳಿಗೆ ಸಿಆರ್ ಪಿ ಎಫ್ ಸಿಬ್ಬಂದಿ, ಜೀಪ್ ಮತ್ತು ಮೋಟಾರು ಬೈಕ್ಗಳಲ್ಲಿ ಬೆಂಗಾವಲು ನೀಡಿದ್ದಾರೆ. 

    ಆದಾಗ್ಯೂ,  ಪಹಲ್ಗಾಮ್ ಮಾರ್ಗದ ಮೂಲಕ, 11 ವಾಹನಗಳಲ್ಲಿ 1,114 ಪುರುಷರು, 220 ಮಹಿಳೆಯರು, ಒಂದು ಮಗು,  141 ಸಾಧುಗಳು 51 ವಾಹನಗಳಲ್ಲಿ ಮೂಲ ಶಿಬಿರದಿಂದ ಹೊರಟಿದ್ದಾರೆ. ಬಾಲ್ತಾಲ್ಗೆ 837  ಪುರುಷರು, 406 ಮಹಿಳೆಯರು ಮತ್ತು ನಾಲ್ಕು ಮಕ್ಕಳನ್ನು ಒಳಗೊಂಡ ತಂಡ, ಬಸ್ ಮತ್ತು ಲಘು ವಾಹನಗಳು ಸೇರಿ 49 ವಾಹನಗಳಲ್ಲಿ ತೆರಳಿದೆ. 

    52 ಬೃಹತ್ ವಾಹನಗಳು, 46 ಲಘು ವಾಹನಗಳು ಮತ್ತು ಎರಡು ಮೋಟಾರ್ ಸೈಕಲ್ಗಳು ಸೇರಿದಂತೆ ಎರಡೂ ಮಾರ್ಗಗಳ ಮೂಲಕ ಒಟ್ಟು  100 ವಾಹನಗಳು ಮೂಲ ಶಿಬಿರದಿಂದ ಹೊರಟಿವೆ. 

    ಅಮರನಾಥ ಯಾತ್ರೆಯ ಮೊದಲ ತಂಡಕ್ಕೆ ಜೂನ್ 29ರಂದು ರಾಜ್ಯಪಾಲ ಅವರ ಸಲಹೆಗಾರ ಕೆ ಕೆ ಶರ್ಮಾ ಚಾಲನೆ ನೀಡಿದ್ದರು. 

    ಶರಣನ್ ಪೂರ್ಣಿಮಾ (ರಕ್ಷಾಬಂಧನ್) ರ ಸಂದರ್ಭದಲ್ಲಿ ಆಗಸ್ಟ್ 15 ರಂದು ಮುಕ್ತಾಯಗೊಳ್ಳುವ 46 ದಿನಗಳ ಯಾತ್ರೆಯನ್ನು ಸುಗಮವಾಗಿ ಮತ್ತು ಯಶಸ್ವಿಯಾಗಿ ನಡೆಸಲು ಬಹು ಹಂತದ ಭದ್ರತೆಯನ್ನು ಒದಗಿಸಲಾಗಿದೆ.