ಲೋಕದರ್ಶನ ವರದಿ
ಗದಗ 22: ದೇಶಕ್ಕಾಗಿ ಮಡಿದ ರಾಜ್ಯದ ವೀರಯೋಧರಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಶೌರ್ಯ ಪ್ರಶಸ್ತಿಯನ್ನು ಸರಕಾರವೇ ನೀಡುವಂತಾಗಬೇಕು ಎಂದು ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಜರುಗಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಹುಟ್ಟು ಮತ್ತು ಸಾವು ಸ್ಮರಣೀಯ ದಿನಗಳಾಗಿರುವದರಿಂದ ರಾಯಣ್ಣ ಹುಟ್ಟಿದ ದಿನವಾದ ಅಗಷ್ಟ 15ರಂದು ಸ್ವಾತಂತ್ರ್ಯೋತ್ಸವ ಮತ್ತು ರಾಯಣ್ಣೋತ್ಸವ ಹಾಗೂ ಜನವರಿ 26 ರಂದು ಹುತಾತ್ಮನಾದ ದಿನದಂದು ಗಣರಾಜ್ಯೋತ್ಸವ ಮತ್ತು ರಾಯಣ್ಣನ ಬಲಿದಾನ ದಿವಸ ಎಂದು ಆಚರಿಸಿಬೇಕು ಎಂದು ಮಾಜಿಮುಖ್ಯಮಂತ್ರಿ ಸಿದ್ದರಾಮಯ್ಯ, ಎಚ್.ಡಿ.ಕುಮಾಸ್ವಾಮಿ ಹಾಗು ಪ್ರಸ್ತುತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸರಕಾರಕ್ಕೆ ಮನವಿ ಸಲ್ಲಿಸುತ್ತ ಬಂದಿದ್ದು, ಇದೇ ಜನವರಿ 26ರಂದು ರಾಜ್ಯ ಸರಕಾರ ಮಹತ್ವದ ಎರಡು ದಿನಗಳನ್ನು ರಾಯಣ್ಣೋತ್ಸವ ಹಾಗೂ ರಾಯಣ್ಣ ಬಲಿದಾನ ದಿವಸ ಎಂದು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಹಾಲುಮತ ಮಹಾಸಭಾವು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಬಲಿದಾನ ದಿವಸವನ್ನು ದೇಶದ ಸ್ವಾತಂತ್ರಕ್ಕಾಗಿ ಮಡಿದ ಮಹನಿಯರಿಗೆ ಗೌರವ ನೀಡುವ ನಿಟ್ಟಿನಲ್ಲಿ ನಿರಂತರವಾಗಿ ಆಚರಣೆ ಮಾಡಿಕೊಂಡು ಬರುತ್ತಿದ್ದೆವೆ. ಅಲ್ಲದೇ, ಬೆಳಗಾವಿಯ ರೈಲು ನಿಲ್ದಾಣಕ್ಕೆ ವೀರರಾಣಿ ಚನ್ನಮ್ಮ, ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಾಮಕರಣ ಮಾಡಲು ರಾಜ್ಯ ಸರಕಾರದಿಂದ ಕೇಂದ್ರ ಸರಕಾರಕ್ಕೆ ಶಿಪಾರಸ್ಸು ಮಾಡಲಾಗಿದ್ದು ಹಾಗೂ ಹುಬ್ಬಳ್ಳಿಯ ರೈಲ್ವೆ ನಿಲ್ದಾಣಕ್ಕೆ ಸಿದ್ದಾರೂಡರು ರೈಲು ನಿಲ್ದಾಣ ಎಂದು ನಾಮಕರಣ ಮಾಡಲು ಈ ಭಾಗದ ಸಂಸದರು ಒತ್ತಾಯಿಸಬೇಕು ಎಂದು ಹೇಳಿದ ಅವರು ತಾಲ್ಲೂಕಿನ ಬಳಗಾನೂರಿನಲ್ಲಿ ಎಲ್ಲ ಅಧಿಕೃತ ದಾಖಲೆಗಳಿದ್ದರೂ ಸಂಗೊಳ್ಳಿ ರಾಯಣ್ಣನ ಪ್ರತಿಮೆಯ ತೆರವುಗೊಳಿಸಿರುವ ಸಮಸ್ಯೆಯನ್ನು ಬಗೆಹರಿಸಲು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲರು ಮುಂದಾಗಬೇಕು ಎಂದು ಹೇಳಿದರು.
ಜಿಲ್ಲಾಧ್ಯಕ್ಷ ಪ್ರಲ್ಹಾದ ಹೊಸಳ್ಳಿ ಅವರು ಮಾತನಾಡಿ, ಇದೇ ಜ. 26 ರಂದು ಸಂಗೊಳ್ಳಿ ರಾಯಣ್ಣರ ಬಲಿದಾನ ದಿವಸವನ್ನಾಗಿ ಆಚರಿಸಲಾಗುತ್ತಿದೆ. ಅದರ ಅಂಗವಾಗಿ ಜಿಲ್ಲೆಯ ಆಯಾ ತಾಲ್ಲೂಕಿನ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ ಹಾಗೂ ನರಗುಂದದಲ್ಲಿ 5 ಯೋಧರಿಗೆ ಗೌರವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಗರದ ಐಎಂಎ ಬ್ಲಡ್ ಬ್ಯಾಂಕಿನಲ್ಲಿ ರಕ್ತದಾನ ಶಿಬಿರ ಜರುಗಿಸಲಾಗುತ್ತಿದೆ ರಕ್ತದಾನ ಶಿಬಿರದಲ್ಲಿ ಪಾಲ್ಗೊಳ್ಳುವರು ಪ್ರಲ್ಹಾದ ಹೊಸಳ್ಳಿ- 9448563318, ಸತೀಶ ಗಿಡ್ಡಹನುಮಣ್ಣವರ-9980367552, ಆನಂದ ಹಂಡಿ-7899412273, ಮುಂಡರಗಿಯ ಸುರೇಶ ಹಲವಾಗಲಿ-9449252565, ವೆಂಕಣ್ಣ ಎಕ್ಲಾಸಪೂರ-9945413071, ನರಗುಂದದ ಉಮಾ ದೇವನೂರ-9980025378, ಮಂಜುಳಾ ತಡಸದ-9008589548, ಲಕ್ಷ್ಮೇಶ್ವರದ ಶಿವರಾಜ ಹೆಗ್ಗೆನ್ನವರ-7022464472, ಶಿರಹಟ್ಟಿ-ಸುರೇಶಕುಮಾರ ತಳಹಳ್ಳಿ-9535082085, ರೋಣದ ಬಸವರಾಜ ನೀಲಗಾರ-8970974959 ಅವರನ್ನು ಸಂಪರ್ಕಿಸಬಹುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಗೌರವಾಧ್ಯಕ್ಷ ನಾಗರಾಜ ಮೆಣಸಗಿ, ಉಪಾಧ್ಯಕ್ಷ ಸೋಮನಗೌಡ್ರ ಪಾಟೀಲ, ಕಾರ್ಯದಶರ್ಿ ಮುತ್ತು ಜಡಿ, ಉಮಾ ದ್ಯಾವನೂರ, ಸುರೇಶ ಹಲವಾಗಲಿ, ಬಸವರಾಜ ನೀಲಗಾರ, ಆನಂದ ಹಂಡಿ, ಚಂದ್ರಹಾಸ ಕಟಿಗ್ಗಾರ, ವಿನಯಕುಮಾರ ಮಾಯನ್ನವರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು