ಕೋವಿಡ್-19 ಆಸ್ಪತ್ರೆಯಿಂದ ಮತ್ತೋರ್ವ ಡಿಸ್ಚಾರ್ಜ್

ಬಳ್ಳಾರಿ,ಮೇ.12: ಕೋವಿಡ್ನನಿಂದ ಜಿಲ್ಲೆಯ ಮತ್ತೊರ್ವ ಇಂದು ಗುಣಮುಖರಾದ ಹಿನ್ನಲೆಯಲ್ಲಿ ಕೋವಿಡ್ ಜಿಲ್ಲಾಸ್ಪತ್ರೆಯಿಂದ ಮಂಗಳವಾರ ಸಂಜೆ ಬಿಡುಗಡೆ ಮಾಡಲಾಯಿತು. ಇದರಿಂದಾಗಿ ಗುಣಮುಖರಾಗಿ ಬಿಡುಗಡೆಯಾದವರ ಸಂಖ್ಯೆ 12ಕ್ಕೇರಿದ್ದು, ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 4ಕ್ಕೇ ಇಳಿದಿದೆ.

ಸೋಮವಾರದಂದು ಕಂಪ್ಲಿ ತಾಲೂಕಿನಲ್ಲಿ ಮತ್ತೊಂದು ಪಾಸಿಟಿವ್ ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಇದುವರೆಗೆ 16 ಜನ ಈ ಕೊರೊನಾ ಸೋಂಕಿತರಾದಂತಾಗಿದೆ. ಅವರಲ್ಲಿ ಈ ಮೊದಲು ಗುಣಮುಖರಾದ ಪಿ-89, ಪಿ-91 ಮತ್ತು ಪಿ-141 ನಂತರ ಪಿ-90 & ಪಿ-151 ಅವರನ್ನು ಬಿಡುಗಡೆ ಮಾಡಲಾಗಿತ್ತು. ಮತ್ತೆ ಇನ್ನಿಬ್ಬರನ್ನು 21 ವರ್ಷ ವಯಸ್ಸಿನ ಪಿ-333 & 24 ವರ್ಷದ ಪಿ- 337 ಮತ್ತು ಹೊಸಪೇಟೆಯ ಪಿ-336 ಅವರು ಗುಣಮುಖರಾಗಿದ್ದರು, ಕೆಲ ದಿನಗಳ ಹಿಂದೆ ಹೊಸಪೇಟೆಯ 72 ವರ್ಷದ ಪಿ-332 ಮತ್ತು ಇನ್ನಿಬ್ಬರಾದ 48 ವರ್ಷದ ಪಿ-334 ಮತ್ತು 10ವರ್ಷದ ಪಿ-335 ಬಿಡುಗಡೆ ಮಾಡಲಾಗಿತ್ತು. ಇಂದು ಸಿರುಗುಪ್ಪ ತಾಲೂಕಿನ ಎಚ್.ಹೊಸಳ್ಳಿ ಗ್ರಾಮದ 14 ವರ್ಷದ ಪಿ-113 ಬಾಲಕ ಗುಣಮುಖರಾದ ಹಿನ್ನಲೆ ಅವರನ್ನು ಬಿಡುಗಡೆ ಮಾಡಲಾಯಿತು. ಈ ಪಿ-113 ಬಾಲಕ ಮೈಸೂರಿನ ನಂಜನಗೂಡಿನಿಂದ ಬಳ್ಳಾರಿಯ ಸಿರಗುಪ್ಪಕ್ಕೆ ಬಂದಿರುವ ಟ್ರಾವೆಲ್ ಹಿಸ್ಟರಿ ಇದೆ.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ಅವರು ಗುಣಮುಖರಾಗಿ ಮನೆಯತ್ತ ತೆರಳಲು ಸಿದ್ದರಾಗಿ ನಿಂತಿದ್ದ ಪಿ-113 ಅವರಿಗೆ ಹೂಗುಚ್ಛ ನೀಡಿ, ಹಣ್ಣು-ಹಂಪಲು ನೀಡಿ ಚಪ್ಪಾಳೆ ತಟ್ಟಿ ಅಭಿನಂದಿಸಿದರು. ನಂತರ ಅವರಿಗೆ ಕಂದಾಯ ಇಲಾಖೆ ವತಿಯಿಂದ ನೀಡಲಾಗುವ ಪಡಿತರ ಕಿಟ್ ಕಳುಹಿಸಿಕೊಡಲಾಯಿತು.

  ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಎನ್.ಬಸರೆಡ್ಡಿ ಅವರು ಮಾತನಾಡಿ, ಇವರು ಬಂದಾಗ ಸಾಕಷ್ಟು ಭಯಭೀತರಾಗಿದ್ದರು, ಇವರಿಗೆ ಆಪ್ತ ಸಮಾಲೋಚನೆ ಮಾಡಿ ಅವರಲ್ಲಿದ್ದ ಭಯ ಹೋಗಲಾಡಿಸಿದೆವು. 

  ಈ ಬಾಲಕ ಮಾನಿಸಕ ಖಿನ್ನತೆಗೊಳಗಾಗರಬಾರದು ಎಂಬ ದೃಷ್ಟಿಯಿಂದ ಇಡೀ ವೈದ್ಯರ ತಂಡವೇ ವಿಶೇಷ ಗಮನಹರಿಸಿತ್ತು. ಇಷ್ಟೊತ್ತಿಗೆ ಬಿಡುಗಡೆಯಾಗಬೇಕಿತ್ತು; ಎರಡ್ಮೂರು ಬಾರಿ ಪಾಸಿಟಿವ್ ಬಂದ ಕಾರಣ ಬಿಡುಗಡೆಯಾಗುವುದು ತಡವಾಯಿತು.ಕೊನೆಗೂ ಬಿಡುಗಡೆಯಾಗುತ್ತಿರುವುದು ಸಂತಸ ತಂದಿದೆ ಎಂದರು.ಇವರನ್ನು 14 ದಿನಗಳವರೆಗೆ ಹೋಮ್ ಕ್ವಾರಂಟೈನ್ ಮತ್ತು 14 ದಿನಗಳ ಕಾಲ ಸೆಲ್ಪ್ ರಿಪೋಟಿರ್ಂಗ್ ಮಾಡಲಾಗುವುದು ಹಾಗೂ ಜಿಲ್ಲಾ ಕಂಟ್ರೋಲ್ ರೂಂ ಮತ್ತು ನಮ್ಮ ಯರ್ಾಪಿಡ್ ರಿಸ್ಪಾನ್ಸ್ ತಂಡದಿಂದ 28 ದಿನಗಳ ಕಾಲ ನಿಗಾವಹಿಸಲಾಗುವುದು ಎಂದು ತಿಳಿಸಿದ ಅವರು, ಈ ಆರ್ಆರ್ಟಿ ತಂಡಗಳು ಗುಣಮುಖರಾಗಿರುವ ಇವರ ಮನೆಗಳ ಸುತ್ತಮುತ್ತಲಿನ ಮನೆಯವರಿಗೆ ಕೊರೊನಾ ಕುರಿತು ಜಾಗೃತಿ ಮೂಡಿಸಲಾಗುತ್ತದೆ ಎಂದರು.ಗುಣಮುಖರಾಗಿ ಹೊರಬಂದ ಪಿ- 113 ಅವರು ಮಾತನಾಡಿ, ಆಸ್ಪತ್ರೆಗೆ ದಾಖಲಾಗಿ ಬಂದಾಗಿನಿಂದ ಇಲ್ಲಿಯವರೆಗೆ ಚೆನ್ನಾಗಿ ನೋಡಿಕೊಂಡರು. ಸಮರ್ಪಕ ಚಿಕಿತ್ಸೆ ಕೊಟ್ಟರು & ಸ್ಥೈರ್ಯ ಜನನ ಕಳೆದುಕೊಂಡಿದ್ದ ನಮ್ಮನ್ನು ಮಾನಸಿಕವಾಗಿಯೂ ಸಜ್ಜುಗೊಳಿಸಿದರು ಮತ್ತು ಗುಣಮಟ್ಟ ಆಹಾರ ಒದಗಿಸಿದರು. ವೈದ್ಯರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಯ ಋಣ ನಾನೆಂದು ಮರೆಯುವುದಿಲ್ಲ ಎಂದರು.ಕೋವಿಡ್ ನೋಡಲ್ ಅಧಿಕಾರಿ ಡಾ. ಯೋಗನಂದಾ ರೆಡ್ಡಿ, ಆರ್.ಎಂ.ಓ.ಡಾ.ಮಲ್ಲಿಕಾರ್ಜನ್, ಡಾ.ಅನಿಲ್, ಡಾ.ಲಿಂಗರಾಜು, ಡಾ.ವಿಶ್ವನಾಥ್, ಡಾ.ಚಂದ್ರಬಾಬು, ಡಾ.ಹುಗ್ಲಿ ವಿಶ್ವನಾಥ್, ಡಾ.ಭಾವನ, ಗುಮಾಸ್ತೆ ದೇಸಾಯಿ, ಡಾ.ಸುನೀಲ್, ಶುಶ್ರೂಷಾ ಅಧೀಕ್ಷಕಿ ಶಾಂತಾಬಾಯಿ, ಡಾ.ಉಮಾಮಹೇಶ್ವರಿ, ಡಾ.ಚಿತ್ರಶೇಖರ,ಲ್ಯಾಬ್ ಟೆಕ್ನಿಷಿಯನ್ಸ್, ಎಕ್ಸ್-ರೇ ಸಿಬ್ಬಂದಿ, ಡಿ- ಗ್ರೂ ಪ್ ಸಿಬ್ಬಂದಿ ಸೇರಿದಂತೆ ಆಸ್ಪತ್ರೆಯ ಇತರ ಸಿಬ್ಬಂದಿಗಳು ಇದ್ದರು