ಕರಡಿಮಜಲು ಕಲಾವಿದ ಗಂಗಪ್ಪ ಕರಡಿಗೆ ಜಾನಪದ ಅಕಾಡೆಮಿ ಪ್ರಶಸ್ತಿ
ವರದಿ: ಹನಮಂತ ನಾವಿ
ಮಹಾಲಿಂಗಪುರ 02: ಬೆಲ್ಲಕ್ಕೆ ಪ್ರಸಿದ್ಧಿ ಹೊಂದಿ ಬೆಲ್ಲದ ನಾಡು, ಕಲೆಗಳ ತವರೂರಿನ ಬೀಡು ಎಂದೆನಿಸಿಕೊಂಡ ಮಹಾಲಿಂಗಪುರ ಪಟ್ಟಣದ ಕಲಾಜ್ಯೋತಿ ಕರಡಿಮಜಲು ಕಲಾತಂಡದ ಹಿರಿಯ ಕಲಾವಿದ ಗಂಗಪ್ಪ ಕರಡಿಗೆ ಜಾನಪದ ಅಕಾಡೆಮಿಯ 2024ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ ಲಭಿಸಿದೆ.
ಮೊದಲೇ ಬಡ ನೇಕಾರ ಕುಟುಂಬದಲ್ಲಿ 1945ರಲ್ಲಿ ಜನಿಸಿದ ಗಂಗಪ್ಪ ಕರಡಿ ಕೇವಲ 5ನೇ ತರಗತಿ ಕಲಿತು 15ನೇ ವರ್ಷದಲ್ಲಿ ಕಲಾ ಕ್ಷೇತ್ರಕ್ಕೆ ಪ್ರವೇಶ ಪಡೆದು ಇಳಕಲ್ಲ ಶ್ರೀ ಮಹಾಂತ ಶಿವಯೋಗಿಗಳಿಂದ ದೀಕ್ಷೆ ಪಡೆದವರು. ದೊಡ್ಡಪ್ಪ ಕಲಾಜ್ಯೋತಿ ವೀರಭದ್ರ್ಪ, ಚನ್ನಪ್ಪ, ಗುರುಲಿಂಗಪ್ಪ ಹಾಗೂ ಮುರಗಯ್ಯ ಮಠಪತಿಯಿಂದ ತಾಳ, ವಾದ್ಯ ಕಲೆ ಕರಗತ ಮಾಡಿಕೊಂಡವರು.
ವಠಪಾರಠರ್ಯವಾಗಿ 500 ವರ್ಷಗಳ ಹಿಂದಿನಿಠ ಶ್ರೀ ಮಹಾಲಿಂಗೇಶ್ವರ ದಯಪಾಲಿಸಿದ ಕರಡಿ ವಾದ್ಯ ಪಡೆದು ನಿತ್ಯ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾದ್ಯ ಸೇವೆಯೊಂದಿಗೆ ಮನೆತನದ ಹೆಸರನ್ನೇ ಹುಣಶ್ಯಾಳದಿಂದ ಕರಡಿ ಎಂದು ಬದಲಿಸಿಕೊಂಡ ಪರಿವಾರ ಇವರದು. ಲಿಮ್ಕಾ ದಾಖಲೆ ಕೂಡ ಇವರ ತಂಡದ ಮುಡಿಗೇರಿದೆ.
ಮಾಜಿ ರಾಷ್ಟ್ರಪತಿ ಶಂಕರ ದಯಾಳ್ ಶರ್ಮಾ, ಮಾಜಿ ಪ್ರಧಾನಿ ನೆಹರು, ಇಂದಿರಾಗಾಠ, ರಾಜೀವಗಾಂಧಿ, ಸೋನಿಯಾ ಗಾಂಧಿ, ಬಿ. ಡಿ. ಜತ್ತಿ, ಎಸ್. ಆರ್. ಕಂಠಿ ಮತ್ತು ಮೈಸೂರು ರಾಜ್ಯ ಮಹಾರಾಜ ಜಯಚಾಮರಾಜೇಂದ್ರ ಒಡೆಯರ ಸೇರಿದಂತೆ ಹಲವು ಗಣ್ಯರ ಸಮ್ಮುಖದಲ್ಲಿ ಕರಡಿಮಜಲು ಕಲೆ ಪ್ರದರ್ಶಿಸಿ ಪ್ರಶಂಸೆ ಪಡೆದ ಹೆಗ್ಗಳಿಕೆ ಇವರ ತಂಡದ್ದು. ಇತ್ತೀಚೆಗೆ ದೆಹಲಿಯ ಗಣರಾಜ್ಯೋತ್ಸದ ಪರೇಡ್‌ಗೆ ಆಯ್ಕೆಯಾಗುವ ಮೂಲಕ ಮತ್ತೊಮ್ಮೆ ಹೆಮ್ಮೆಯ ಸಾಧನೆ ಮಾಡಿತ್ತು. ಇದೀಗ ಅದೇ ತಂಡ ಗಂಗಪ್ಪ ಕರಡಿಗೆ ಜಾನಪದ ಅಕಾಡೆಮಿ ಪ್ರಶಸ್ತಿ ಲಭಿಸಿದ್ದು ಕೀರ್ತಿಯ ಕೀರೀಟಕ್ಕೆ ಮತ್ತೊಂದು ಗರಿ ಸಿಕ್ಕಂತಾಗಿದೆ.