ಎನ್‌.ಎಸ್‌.ಎಸ್ ಘಟಕಗಳ ವಾರ್ಷಿಕ ವಿಶೇಷ ಶಿಬಿರ

Annual special camp of NSS units

ಎನ್‌.ಎಸ್‌.ಎಸ್ ಘಟಕಗಳ ವಾರ್ಷಿಕ ವಿಶೇಷ ಶಿಬಿರ 

ರಾಣಿಬೆನ್ನೂರ:15 ಸರ್ಕಾರದ ಯುವನಿಧಿ ಯೋಜನೆಯ ಸಫಲತೆಯ ಕುರಿತು ಮಾಹಿತಿ ನೀಡುವುದರ ಜೊತೆಗೆ ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಅರ್ಜಿ ಸಲ್ಲಿಸಲು ಯಾವ ಅರ್ಹತೆಗಳನ್ನು ಹೊಂದಿರಬೇಕು ಹಣವನ್ನು ಪಡೆಯಲು ಪ್ರತಿತಿಂಗಳು 25 ನೇ ದಿನಾಂಕದಂದು ಸ್ವಯಂ ಘೋಷಣಾ ಪತ್ರವನ್ನು ಸಲ್ಲಿಸುವುದು ಹಾಗೂ 2 ವರ್ಷದವರಗೆ ಮಾತ್ರ ಈ ಯೋಜನೆಯ ಸಫಲತೆಯನ್ನು ಪಡೆಯಬಹುದು ಎಂದು ಪ್ರೊ. ಸೋಮಶೇಖರ ಹೊನ್ನಾಳಿ ಹೇಳಿದರು.   ತಾಲೂಕಿನ ಗಂಗಾಪುರ ದತ್ತು ಗ್ರಾಮದಲ್ಲಿ ನಗರದ ರಾಜ-ರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ಎನ್‌.ಎಸ್‌.ಎಸ್ ಘಟಕಗಳ ವಾರ್ಷಿಕ ವಿಶೇಷ ಶಿಬಿರದಲ್ಲಿ ಮಾತನಾಡಿದರು. 

   ಪ್ರೊ. ರತ್ನವ್ವ ಹಾದಿಮನಿ ಮಾತನಾಡಿ, ಅಂಬೇಡ್ಕರ್ ಅವರ ಜೀವನ ವಿಧಿ ವಿಧಾನಗಳ ಬಗ್ಗೆ ಸಂವಿಧಾನ ರಚನೆಯಲ್ಲಿ ಅವರ ಪಾತ್ರ ಹಾಗೂ ಮಹಿಳಾ ಸಬಲೀಕರಣಕ್ಕೆ ಹಲವಾರು ರೀತಿಯ ಯೋಜನೆಗಳನ್ನು ಜಾರಿಗೆ ತಂದು ಮಹಿಳೆಯರ ಕಲ್ಯಾಣಕ್ಕಾಗಿ ಸಾಕಷ್ಟು ಶ್ರಮಿಸಿದ್ದಾರೆ ವಿದ್ಯಾರ್ಥಿಗಳು ಇವರ ಆದರ್ಶ ಗುಣಗಳನ್ನು ಬೆಳಸಿಕೊಂಡು ಸಮಾಜಕ್ಕೆ ಕೊಡುಗೆ ನೀಡಬೇಕೆಂದು ತಿಳಿಸಿದರು. 

   ಕೃಷ್ಣಪ್ಪ ದುರ್ಗದ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಜಾನಪದ ಸಾಂಸ್ಕೃತಿಕ ಕಲೆಗಳ ಬಗ್ಗೆ ಹಳ್ಳಿಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಎನ್ ಎಸ್ ಎಸ್ ಮೂಲಕ ಹಮ್ಮಿಕೊಂಡು ಜನರಿಗೆ ಮನವರಿಕೆ ಮಾಡಿಕೊಡಬೇಕೆಂದು ತಿಳಿಸಿದರು.   

   ಪ್ರೊ. ಶೋಭಾ ದೊಡ್ಡನಾಗಳ್ಳಿ, ಗಂಗಾಪುರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಎಸ್‌.ಎನ್‌. ದೊಡ್ಡಬೂದಿಹಾಳ, ನಿವೃತ್ತ ಶಿಕ್ಷಕ ಗಂಗಾಧರ​‍್ಪ ಗಂಗಣ್ಣನವರ,  ಪ್ರಭು ಹಲವಾಗಲು, ಮಂಜಪ್ಪ ದುರ್ಗದ, ಕುಭೇರ ಗಂಗಣ್ಣನವರ, ಸೋಮಲಿಂಗಪ್ಪ ನಂದ್ಯಾಲ, ಗುಡ್ಡಪ್ಪ ಸಿದ್ದಪ್ಪಳವರ, ದಾನಪ್ಪ ಚಕ್ರಸಾಲಿ, ಗೋವಿಂದಪ್ಪ ಮತ್ತೂರ, ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಪ್ರೊ :ಕೃಷ್ಣ ಎಲ್ ಹೆಚ್,  ವಾಣಿ ಪಾಟೀಲ, ಪ್ರೊ. ಮಂಜಪ್ಪ ಸಣಬಸಪ್ಪನವರ  ಉಪಸ್ಥಿತರಿದ್ದರು.