ಎಲಿಮುನ್ನೋಳಿ ಗ್ರಾಮ ದೇವತೆಯ ತ್ರೈವಾರ್ಷಿಕ ಜಾತ್ರಾ ಮಹೋತ್ಸವ

ಲೋಕದರ್ಶನ ವರದಿ

ಹುಕ್ಕೇರಿ 28:   ತಾಲೂಕಿನ ಎಲಿಮುನ್ನೋಳಿ ಗ್ರಾಮದ ಗ್ರಾಮ ದೇವತೆ ಮಹಾಲಕ್ಷ್ಮೀ (ದ್ಯಾಮವ್ವ) ತ್ರೈ ವಾರ್ಷಿಕ ಜಾತ್ರಾ ಮಹೋತ್ಸವ ಪಾರಂಪಾರಿಕ ಪದ್ಧತಿಯಂತೆ ಈ ವರ್ಷ ದಿ. 31 ಜನೇವರಿಯಿಂದ 3 ಫೆಬ್ರುವರಿ ವರೆಗೆ ಅದ್ಧೂರಿಯಾಗಿ ಜರುಗಲಿದೆ. ಜಾತ್ರೆಯ ಅಂಗವಾಗಿ ಧಾಮರ್ಿಕ, ವಿಧಿ ವಿಧಾನಗಳೊಂದಿಗೆ ಪೂಜೆ, ಶರ್ಯತ್ತುಗಳು ಹಾಗೂ ಮನರಂಜನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಜಾತ್ರೆಗೆ ಸಾವಿರಾರು ಜನ ಪಾಲ್ಗೊಳ್ಳುತ್ತಾರೆ.

           ಶುಕ್ರವಾರ ದಿ. 31 ಜನೇವರಿಯಂದು ಮುಂಜಾನೆ 9 ಗಂಟೆಗೆ ಬಸವಪ್ರಭು ಹಾಗೂ ಶಂಕರಗೌಡ ಸರದೇಸಾಯಿ ಬಂಧುಗಳನ್ನು ಮುತೈದೆಯರು ಆರತಿ ಬೆಳಗಿ ಸ್ವಾಗತ ಕೋರಿ ವಾದ್ಯ ಮೇಳದೊಂದಿಗೆ ಗ್ರಾಮಕ್ಕೆ ಬರಮಾಡಿಕೊಳ್ಳುವದರೊಂದಿಗೆ ಜಾತ್ರೆ ಪ್ರಾರಂಭಗೊಳ್ಳುವದು. ಸರದೇಸಾಯಿ ಬಂಧುಗಳು ಹಾಗೂ ಗ್ರಾಮದ ಹಿರಿಯರ ಉಪಸ್ಥಿತಿಯಲ್ಲಿ ದೇವಿಗೆ ಪೂಜೆ ಸಲ್ಲಿಸಿದ ನಂತರ ದೇವಿಯ ಹೊನ್ನಾಟದೊಂದಿಗೆ ರಾಮಲಿಂಗೇಶ್ವರ ದೇವಸ್ಥಾನಕ್ಕೆ ತರಲಾಗುವದು ತದನಂತರ ದೇವಿಯನ್ನು ಹುದ್ದಾರ ಅವರ ಮನೆ ಬಳಿಗೆ ಕೂಡ್ರಿಸಲಾಗುವದು. ಅಲ್ಲಿ ಭಕ್ತಾದಿಗಳಿಂದ ಪೂಜೆ ಹಾಗೂ ನೈವದ್ಯ ಅರ್ಪಿಸಿದ ನಂತರ ಬೊರಗಲ್ಲಿ ಹತ್ತಿರ ಶಸ್ರ್ತ ಚುಚ್ಚಿದ ನಂತರ ದೇವಿಯನ್ನು ಆಡಿಸುತ್ತ ಲಕ್ಷ್ಮೀ ದೇವಸ್ತಾನದ ಬಳಿಗೆ ತರಲಾಗುವದು. ದೇವಿಯ ಅರ್ಚಕ ದೇವಿಗೆ ಸೀರೆ ತೊಡಿಸಿದ ನಂತರ ಸರದೇಸಾಯಿಯವರು ಶಾಲು ಏರಿಸಿ ದೇವಿಗೆ ಪೂಜೆ ಸಲ್ಲಿಸಿದ ನಂತರ ಹಕ್ಕದಾರರಾದ ನಾಡಗೌಡರ ಮನೆ ಮುಂದೆ ಉಡಿ ತುಂಬಿಸಿಕೊಂಡು  ಲಕ್ಷ್ಮೀ ದೇವಿಯ ಪಲ್ಲಕ್ಕಿಯೊಂದಿಗೆ ದೇವಿಯ ಅರ್ಚಕ ಸೀರೆ ತೊಡಿಸಿದ ನಂತರ ದೇವಿಯನ್ನು ಎಬ್ಬಿಸಲಾಗುವದು.ಇಡೀ ರಾತ್ರಿ ಚಿತ್ತಾರಕ ಮದ್ದು ಹಾರಿಸುವದರೊಂದಿಗೆ ದೇವಿಯ ಹೊನ್ನಾಟ ನಡೆಸಿ ಬೆಳಿಗ್ಗೆ 6 ಗಂಟೆಗೆ  ತುರಮಂದಿಯ ಪಾದಗಟ್ಟೆ ಮಂಟಪದಲ್ಲಿ ಹುದ್ದಾರ ಅವರು ದೇವಿಯ ಪ್ರತಿಷ್ಠಾಪನೆ ಮಾಡುವರು.

          ಶನಿವಾರ ದಿ 1 ಫೆಭ್ರುವರಿಯಂದು ಬೆಳಿಗ್ಗೆ ಗೌಡರಿಂದ ರಂಗಪೂಜೆ ಹಾಗೂ ಮಹಿಳೆಯರ ಕುಂಭಗಳ ಆಗಮನ, ಕೋಣದ ಮೆರವಣಿಗೆ ಹಾಗೂ ರಾತ್ರಿ ಶಾಹೀರಿ ಕಾರ್ಯಕ್ರಮ.

          ರವಿವಾರ ದಿ. 2 ರಂದು ಬೆಳಿಗ್ಗೆ ಭಕ್ತಾದಿಗಳಿಂದ ದೇವಿಗೆ ದಂಡವತ್ತ ಹಾಗೂ ನೈವದ್ಯ ಸಮರ್ಪಣೆ ಕಾರ್ಯಕ್ರಮ. 9 ಗಂಟೆಗೆ ಎಲಿಮನ್ನೋಳಿಯಿಂದ ಯಾದಗೂಡ ಗೇಟ ವರೆಗೆ ಹೋಗಿ ಮರಳುವ ಜೋಡೆತ್ತಿನ ಗಾಡಿ ಶರ್ಯತ್ತು ಬಿಡಲಾಗುವದು. ಪ್ರವೇಶ ಫೀ ರೂ. 3001 ಇಡಲಾಗಿದ್ದು ಪ್ರಥಮ ಬಹುಮಾನ ರೂ. 55001  ದ್ವಿತೀಯ ಬಹುಮಾನ ರೂ. 31001 ತೃತೀಯ ಬಹುಮಾನ ರೂ. 21001 ಹಾಗೂ ನಾಲ್ಕನೇ ಬಹುಮಾನ ರೂ. 11001 ಇಡಲಾಗಿದೆ. 10 ಗಂಟೆಗೆ ಎಲಿಮನ್ನೋಳಿಯಿಂದ ಯಾದಗೂಡ ಗೇಟ ವರೆಗೆ ಹೋಗಿ ಮರಳುವ ಕುದುರೆ ಗಾಡಿ ಶರ್ಯತ್ತು ಬಿಡಲಾಗುವದು. ಪ್ರವೇಶ ಫೀ ರೂ. 1501 ಇಡಲಾಗಿದ್ದು ಪ್ರಥಮ ಬಹುಮಾನ ರೂ. 20001  ದ್ವಿತೀಯ ಬಹುಮಾನ ರೂ. 15001 ತೃತೀಯ ಬಹುಮಾನ ರೂ. 10001 ಇಡಲಾಗಿದೆ. ಮಧ್ಯಾನ್ಹ 4 ಗಂಟೆಗೆ ಜಂಗೀ ಕುಸ್ತಿಗಳು ನಡೆಯಲಿದ್ದು  ಸ್ಪರ್ಧೆಯಲ್ಲಿ ಭಾಗವಹಿಸುವವರು ಪ್ರವೇಶ ಶುಲ್ಕದೊಂದಿಗೆ ಗ್ರಾಮದ ತುರಮಂದಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಹೆಸರು ನೊಂದಾಯಿಸಬೇಕು. ರಾತ್ರಿ 10 ಗಂಟೆಗೆ ಶ್ರೀ ಕೃಷ್ಣ ಪಾರಿಜಾತ ಬೈಲಾಟ ಪ್ರದರ್ಶನ.

           ಸೋಮವಾರ ದಿ. 3 ರಂದು ಮುಂಜಾನೆ 9 ಗಂಟೆಗೆ  ಎಲಿಮನ್ನೋಳಿಯಿಂದ ಯಾದಗೂಡ ಗೇಟ ವರೆಗೆ ಹೋಗಿ ಮರಳುವ ಸಾಯಕಲ್ ಶರ್ಯತ್ತು ಹಾಗೂ ಕುದುರೆ ಮೇಲೆ ಕುಳಿತು ಓಡಿಸುವ ಶರ್ಯತ್ತು. ನಡೆಯಲಿವೆ. ಮಧ್ಯಾನ್ಹ 11 ಗಂಟೆಗೆ ಸರದೇಸಾಯಿ ಬಂಧುಗಳಿಂದ ದೇವಿಗೆ ಪೂಜೆ ಸಲ್ಲಿಸಿದ ನಂತರ ದೇವಿಯನ್ನು  ಮಂಟಪದಿಂದ ಹೊರ ತಂದು ಹೊನ್ನಾಟದೊಂದಿಗೆ ರಾತ್ರಿ 11 ಗಂಟೆಗೆ ದೇವಿಯನ್ನು ಸೀಮೆಗೆ ಕಳುಹಿಸುವದರೊಂದಿಗೆ ಜಾತ್ರೆಗೆ ತೆರೆ ಬೀಳಲಿರುವದಾಗಿ   ಲಕ್ಷ್ಮೀದೇವಿ ಜಾತ್ರಾ ಕಮೀಟಿ ತಿಳಿಸಿದೆ.