ರಸ್ತೆ ಮಧೆ್ಯೆಯ ಅಪಾಯಕರ ಗುಂಡಿ ಮುಚ್ಚಲು ಒತ್ತಾಯ

ಬೈಲಹೊಂಗಲ 01: ತಾಲೂಕಿನ ದೊಡವಾಡ ಹಾಗೂ ಗುಡಿಕಟ್ಟಿ ಗ್ರಾಮಗಳಿಗೆ ತೆರಳುವ ರಸ್ತೆ ಮದ್ಯದ ಕಿರು ಸೇತುವೆ ಕುಸಿದು ಗುಂಡಿ ನಿಮರ್ಾಣವಾಗಿದೆ. ಲೋಕೋಪಯೋಗಿ ಇಲಾಖೆಯವರು ಕೂಡಲೇ ಗುಂಡಿ ಮುಚ್ಚಿ ಆಗುವ ಅಪಘಾತವನ್ನು ತಪ್ಪಿಸಬೇಕು ಎಂದು ವಾಹನ ಸವಾರರು, ಗ್ರಾಮಸ್ಥರು ಒತ್ತಾಯಿಸಿದ್ದಾರೆ.

 

           ಗುಡಿಕಟ್ಟಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮಧ್ಯೆ  ಹಿರೇಮಡ್ಡಿಯಿಂದ ನನಗುಂಡಿಕೊಪ್ಪದ ಕೆರೆ ಕಡೆಗೆ ನೀರು ಹರಿದು ಹೋಗಲು ಕುದರಿಯವರ ಜಮೀನು ಬಳಿ ನಿಮರ್ಿಸಲಾಗಿರುವ ಕಿರು ಸೇತುವೆ ಪೈಪ್ಗಳು ಕಳಪೆ ಕಾಮಗಾರಿಯಿಂದ ಒಡೆದು ಕುಸಿದಿದ್ದರಿಂದ ರಸ್ತೆಯಲ್ಲಿ ಬೃಹತ್ ಗುಂಡಿ ಬಿದ್ದಿವೆ. ಇದರಿಂದ ಈ ರಸ್ತೆಯಲ್ಲಿ ದಿನ ನಿತ್ಯ ಚಕ್ಕಡಿ ಸಮೇತ ಸಂಚರಿಸುವ ರೈತರು, ವಾಹನ ಸವಾರರರು ಜೀವ ಭಯದಲ್ಲಿ ಸಾಗುವಂತಾಗಿದೆ. 

     ಕೆಲದಿನಗಳ ಹಿಂದೆ ಈ ರಸ್ತೆ ಮೂಲಕ ಗುಡಿಕಟ್ಟಿ ಗ್ರಾಮಕ್ಕೆ ರಾತ್ರಿ ವೇಳೆ ಸಂಚರಿಸುತ್ತಿದ್ದ ಬೈಕ್ ಸವಾರರಿಬ್ಬರು ಗುಂಡಿ ಬಿದ್ದಿದ್ದರ ಬಗ್ಗೆ ಗೊತ್ತಿರದೆ ಬಿದ್ದು ಗಾಯಗೊಂಡಿದ್ದರು. ಈ ಮಾರ್ಗದ ರಸ್ತೆ ಕಾಮಗಾರಿಯೂ ಕಳಪೆಯಾಗಿದ್ದು ಮಳೆಯಿಂದ ಸಂಪೂರ್ಣ ಹದಗೆಟ್ಟಿದೆ. ಈ ಕುರಿತು ಸಂಬಂಧಪಟ್ಟ ಇಲಾಖೆಗೆ  ಹಲವು ಬಾರಿ ಗಮನಕ್ಕೆ ತಂದರೂ ಅಧಿಕಾರಿಗಳು ಗಮನ ಹರಿಸಿಲ್ಲ. ಕೂಡಲೇ ಹದಗೆಟ್ಟ ರಸ್ತೆ ದುರಸ್ತಿಗೊಳಿಸಬೇಕು. ಮುಂದಾಗುವ ಅಪಘಾತವನ್ನು ತಡೆ ಹಿಡಿಯಬೇಕು. ಇಲ್ಲವಾದರೆ ಲೋಕೋಪಯೋಗಿ ಇಲಾಖೆಗೆ ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು  ಸಚಿನ್ ಪಟಾತ, ಚನ್ನಯ್ಯ ದಾಭಿಮಠ, ಶಿವಾನಂದ ಪಟಾತ, ಬಸು ಸಣ್ಣಕ್ಕಿ, ವಿಠ್ಠಲ ತಳವಾರ, ಶಂಕ್ರೆಪ್ಪ ಲಾಗಲಟ್ಟಿ, ಶಿವಾನಂದ ಅಮಾಶಿ, ಸೋಮೇಶ ಕರೀಕಟ್ಟಿ ಎಚ್ಚರಿಸಿದ್ದಾರೆ. 

    ರಸ್ತೆ ಮಧ್ಯೆ ನಿಮರ್ಿಸಿರುವ  ಕಿರು ಸೇತುವೆಯಲ್ಲಿನ ಪೈಪ್ಗಳು ಒಡೆದು ರಸ್ತ್ತೆ ಕುಸಿದು ಗುಂಡಿ ಬಿದ್ದಿರುವ ಬಗ್ಗೆ ಗೊತ್ತಾಗಿದೆ. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮರು ರಸ್ತೆ ಡಾಂಬರೀಕರಣ ಮಾಡಲಾಗುವದು 

ಎಂ.ಬಿ.ಗಣಾಚಾರಿ ಲೋಕೋಪಯೋಗಿ ಇಲಾಖೆ ಎಇಇ