ಬೈಲಹೊಂಗಲ 01: ಸಹಕಾರಿ ಸಂಸ್ಥೆಗಳಲ್ಲಿ ಸಾಮಾಜಿಕ ಕಳಕಳಿ, ಸದಸ್ಯರ ಸಹಭಾಗಿತ್ವ ಹಾಗೂ ಸಿಬ್ಬಂದಿಗಳ ಸೇವಾ ಮನೋಭಾವನೆ ಬಹುಮುಖ್ಯವಾಗಿದೆ ಎಂದು ಕಿತ್ತೂರ ರಾಣಿ ಚನ್ನಮ್ಮ ಸೌಹಾರ್ದ ಸಹಕಾರ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ.ವಿ.ಎಸ್.ಸಾಧುನವರ ಹೇಳಿದರು.
ಪಟ್ಟಣದ ಪ್ರೇರಣಾ ಶಾಲೆ ಆವರಣದಲ್ಲಿ ಶುಕ್ರವಾರ ನಡೆದ ಸಂಸ್ಥೆಯ 27 ವಾಷರ್ಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಹಕಾರಿ ಸಂಸ್ಥೆ ಬೆಳೆಸುವ ಮೂಲಕ ಯುವಜನರಿಗೆ ಉದ್ಯೋಗ ನೀಡಿ ಸಾಮಾಜಿಕ ಸೇವೆ ಮಾಡಲು ಯಾವಾಗಲು ಬದ್ಧವಿರುವದಾಗಿ ತಿಳಿಸಿದರು.
ನಿದರ್ೇಶಕ ಬೊಮ್ಮನಾಯ್ಕ ಪಾಟೀಲ ಪ್ರ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯು ಉತ್ತರ ಕನರ್ಾಟಕದ ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಬಾಗಲಕೋಟ್ ಹಾಗೂ ಬೆಂಗಳೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ 119 ಶಾಖೆಗಳನ್ನು ತೆರೆದು, ವಾಷರ್ಿಕ 1630 ಕೋಟಿ ರೂಪಾಯಿಗಳ ವಹಿವಾಟು ಹೊಂದಿದೆ. 4.39 ಕೋಟಿ ಶೇರು ಭಂಡವಾಳ, 466.89 ಕೋಟಿ ಠೇವಣಿ, ಸದಸ್ಯರ ಆಥರ್ಿಕ ಅಭಿವೃದ್ದಿಗಾಗಿ ನೀಡಿದ ಸಾಲಗಳು 425.61 ಕೋಟಿ, ವರದಿ ವರ್ಷದಲ್ಲಿ 1.37 ಕೋಟಿ ರೂ. ನಿವ್ವಳ ಲಾಭ ಹೊಂದಿ 502.33 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ ಎಂದರು.
ಕೊಡಗು ಸಂತ್ರಸ್ತರಿಗೆ ಸಂಗ್ರಹಿಸಿದ 1,50,000 ರೂ.ಮೊತ್ತದ ಚಕ್ಕನ್ನು ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಅವರ ಮೂಲಕ ಸಂತ್ರಸ್ತರಿಗೆ ವಿತರಿಸಲಾಯಿತು.
ನಿದರ್ೇಶಕರಾದ ಬಾಳಪ್ಪ ಚೌಡನ್ನವರ, ಅರವಿಂದ ಕಲಕುಟಕರ, ನಿಂಗನಗೌಡ ಪಾಟೀಲ, ಶಿವಪುತ್ರಪ್ಪಾ ತಟವಟಿ, ಸುನೀಲಗೌಡ ಪಾಟೀಲ, ವಿಶ್ವನಾಥ ದೇಶನೂರ, ಬಾಬು ಹರಕುಣಿ, ಪರಪ್ಪ ತಟವಟಿ ಇದ್ದರು. ವಿಷೇಶ ಅಥಿತಿಗಳಾಗಿ ಮಹಾರಾಷ್ಟ್ರದ ದತ್ತ ಸಕ್ಕರೆ ಕಾಖರ್ಾನೆ ಉಪಾಧ್ಯಕ್ಷ ಸಿದ್ದಗೌಡ ಪಾಟೀಲ, ಕೆಎಲ್ಇ ಮಾಜಿ ಉಪಾಧ್ಯಕ್ಷ ಬಸವರಾಜ ತಟವಟಿ, ಬಸವಪ್ರಭು ಬೆಳಗಾವಿ ಆಗಮಿಸಿದ್ದರು. ಗೀತಾ ಪಾಟೀಲ, ರಾಜೇಶ್ವರಿ ಬಾಗೇವಾಡಿ ಪ್ರಾಥರ್ಿಸಿದರು. ಬಸವರಾಜ ಅರಳಿಕಟ್ಟಿ ವರದಿ ಮಂಡಿಸಿದರು.
ನಾರಾಯಣ ನಲವಡೆ ಲಾಭ ಹಾನಿ ಪತ್ರಿಕೆ ಓದಿದರು. ಆರ್.ಎಸ್.ಪಟ್ಟಣಶೆಟಿ ಬಜೆಟ ಮಂಡಿಸಿದರು. ಸಿಇಒ ಮಲ್ಲಿಕಾಜರ್ುನ ಸಾಲಿಮಠ ಅಡಾವೆ ಪತ್ರಿಕೆ ಮಂಡಿಸಿದರು. ಮಲ್ಲಪ್ಪ ಹರಕುಣಿ ಲಾಭ ತಿಳಿಸಿದರು. ಗಣೇಶಗೌಡ ಪಾಟೀಲ ಲೆಕ್ಕ ಪರಿಶೋಧನಾ ವರದಿ ಮಂಡಿಸಿದರು. ಸತೀಶ ಪಾಟೀಲ ವಿಷಯ ಮಂಡಿಸಿದರು.
ಹೆಚ್ಚು ಸಾಧನೆ ಮಾಡಿದ ಶಾಖೆಗಳ ಸಿಬ್ಬಂದಿ, ಪಿಗ್ಮಿ ಸಂಗ್ರಹಕಾರರಿಗೆ ಪ್ರಶಸ್ತಿ, ಪಾರಿತೋಷಕ ವಿತರಿಸಲಾಯಿತು. ನವ ದಂಪತಿಗಳಿಗೆ ಕಾಣಿಕೆ ನೀಡಲಾಯಿತು. ಎಂ.ಜಿ.ಪಾಟೀಲ ಸ್ವಾಗತಿಸಿದರು. ಅಶ್ವಿನಿ ತಡಕೋಡ ನಿರೂಪಿಸಿದರು. ಅಭಿವೃದ್ಧಿ ಅಧಿಕಾರಿ ಈರಪ್ಪ ನಾನನ್ನವರ ವಂದಿಸಿದರು.