ಮುಧೋಳ೨೫: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ, ಸೋರಗಾಂವ ಇದರ ವಾಷರ್ಿಕ ಸರ್ವ ಸಾಧಾರಣ ಸಭೆ ಸೆ. 23ರಂದು ನಡೆದಿದ್ದು ಈ ಸಭೆಯಲ್ಲಿ ಸಂಸ್ಥಾಪಕ ಅಧ್ಯಕ್ಷರಾದ ನಂದಕುಮಾರ ವೆಂ. ಪಾಟೀಲ ಮಾತನಾಡಿ ಸಂಘವು ನಡೆದು ಬಂದ ದಾರಿ ಮತ್ತು ಸಂಘದ ಅಭಿವೃದ್ದಿ ಬಗ್ಗೆ ಮಾತನಾಡಿ ಸಂಘವು ಮಾ.31 ಕ್ಕೆ 926.92 ಲಕ್ಷ ದುಡಿಯುವ ಬಂಡವಾಳ ಹೊಂದಿದ್ದು ಮತ್ತು 1247 ಸದಸ್ಯರಿಂದ 89.99 ಲಕ್ಷ ಶೇರು ಬಂಡವಾಳ ಹೊಂದಿದ್ದು ಮತ್ತು 527 ಜನ ಸದಸ್ಯರಿಗೆ 0% ಬಡ್ಡಿ ದರದಲ್ಲಿ 414.80 ಲಕ್ಷ ಬೆಳೆಸಾಲ ನೀಡಿದ್ದು 3215 ಜನ ಸದಸ್ಯರಿಗೆ ಸ್ವಂತ ಬಂಡವಾಳದಲ್ಲಿ 107.35 ಲಕ್ಷ ಸಾಲ ನೀಡಿ ಮಾ.31 ಕ್ಕೆ ಸಂಘವು 21.52 ಲಕ್ಷ ಲಾಭ ಗಳಿಸಿದೆ ಮತ್ತು ಅಡಿಟ್ ವಗರ್ಿಕರಣವು "ಅ" ವರ್ಗದಲ್ಲಿದೆ. ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ವೆಂಕಟೇಶ ಹಗಳಗಾರ, ಸಿದ್ದಪ್ಪ ಲೋಕಾಪೂರ, ಮಾಯಪ್ಪ ಗೋಲಭಾವಿ ಹಾಗೂ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.