ಲೋಕದರ್ಶನ ವರದಿ
ಯಮಕನಮರಡಿ 19: ವಿದ್ಯಾರ್ಥಿಗಳಿಂದು ಮಾನವಿಯ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಜೀವನದಲ್ಲಿ ಸಾರ್ಥಕತೆಯನ್ನು ಕಾಣಲು ಸಾಧ್ಯಾ ನಿಟ್ಟಿನಲ್ಲಿ ವಿದ್ಯಾಥರ್ಿಗಳಿಂದ ತಮ್ಮ ಬದುಕನ್ನು ರೂಪಿಸಿಕೊಳ್ಳುವ ಕಲೆಯನ್ನು ರೂಢಿಸಿಕೊಂಡು ತಂತ್ರಜ್ಞಾನ ಯುಗದಲ್ಲಿ ಸ್ಪಧರ್ಾತ್ಮಕ ಮನೋಭವನೆಯಿಂದ ಸ್ಫರ್ಧೆಗಿಳಿದಾಗ ಮಾತ್ರ ಜೀವನ ಪಾವನವಾಗುತ್ತದೆ ಎಂದು ಶ್ರೀಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಅವರು ಸಮೀಪದ ಉಳ್ಳಾಗಡ್ಡಿ-ಖಾನಾಪೂರದ ಸರಕಾರಿ ಪಬ್ಲಿಕ್ ಶಾಲೆಯ ವಾಷರ್ಿಕ ಸ್ನೇಹ ಸಮ್ಮೆಳನದ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತ ಒಂದೆ ಸೂರಿನಡಿಯಲ್ಲಿ ಸರಕಾರ 1 ರಿಂದ ದ್ವಿತಿಯ ಪಿ,ಯುಸಿ, ವರೆಗೆ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಮಾಡುವ ಸೌಲಭ್ಯವನ್ನು ಸರಕಾರ ಒದಗಿಸಿದ್ದು ಇದರ ಸದುಪಯೋಗ ಪಡೆಯುವಂತೆ ತಿಳಿಸಿದರು, ಡಿ.ಬಿ.ಹೆಬ್ಬಾಳಿ ಸರಕಾರಿ ಶಾಲೆಯಲ್ಲಿ ಎಲ್ಲ ಸೌಲಭ್ಯಗಳಿದ್ದು ಮಕ್ಕಳು ಉತ್ತಮ ಶಿಕ್ಷಣ ಪಡೆದು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವಂತೆ ತಿಳಿಸಿದರು,
ವೇದಿಕೆಯಲ್ಲಿದ್ದ ಗ್ರಾಮ ಪಂಚಾಯತನ ಅಧ್ಯಕ್ಷರಾದ ಸುಧೀರ ಗಿರಿಗೌಡರ ಮಾತನಾಡಿ ಶಾಲೆಗೆ ಅಗತ್ಯವಿರುವ ಮೈದಾನ ಸಮತಟ್ಟು ಕಾರ್ಯವನ್ನು ಉದ್ಯೋಗ ಖಾತ್ರಿಯೊಜನೆಯಡಿಯಲ್ಲಿ ಕೈಗೊಳ್ಳುತ್ತಿದ್ದು ಕಾಲೇಜು ವಿಭಾಗಕ್ಕೆ ಅಗತ್ಯವಿರುವ ಶಾಲಾ ಕೊಠಡಿಗಳು ಹಾಗೂ ಉತ್ತಮ ಉಪನ್ಯಾಸಕರ ವೃಂದ ಕಲಾ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಪ್ರೌಢಶಾಲಾ ವಿಭಾಗದಲ್ಲಿಯೂ ಉತ್ತಮವಾದ ಶಿಕ್ಷಕರಿದ್ದು ಈ ಬಾರಿ ಉತ್ತಮ ಫಲಿತಾಂಶ ಹೋರಬರಲಿದೆ ಆ ದಿಸೆಯಲ್ಲಿ ಸೌಲಭ್ಯಗಳನ್ನು ಒದಗಿಸಲು ಗ್ರಾಮಸ್ತರು ಬದ್ದರಾಗಿದ್ದೆವೆ ಎಂದರು.
ವೇದಿಕೆಯಲ್ಲಿ ಪ್ರಾಚಾರ್ಯರಾದ ಜಿಡ್ಡಿಮನಿ, ಮುಖ್ಯೊಪಧ್ಯಾಯರಾದ ವ್ಹಿ.ಎಸ್.ಒಡೆಯರ, ಸುಭಾಷ ಹೆಬ್ಬಾಳಿ, ತಾ,ಪಂ, ಸದಸ್ಯೆ ಶೋಭಾ ಜರಳಿ, ಶಾಲಾ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಬಾಳಗೌಡಾ ಪಾಟೀಲ, ಅಶೋಕ ಹಟ್ಟಿ, ಬಾಳೇಶ ಕಮನೂರಿ, ಶಾಂತಿನಾಥ ಪಾಟೀಲ, ಸಿಬಿಸಿ ಉಪಧ್ಯಕ್ಷ ಬಾಬು ಕಡಲಗಿ, ಸಚಿನ ಹೆಬ್ಬಾಳಿ, ಪಿ,ಡಿ ಪಾಟೀಲ, ಶಿವರಾಯಿ ಜರಳಿ, ಮುಂತಾದವರು ಮತ್ತು ಶಾಲಾ ಮೇಲುಸ್ತುವಾರಿ ಸಮಿತಿಯವರು ಹಾಗೂ ಶಾಲೆಯ ಶಿಕ್ಷಕ ಸಿಬ್ಬಂದಿ ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶಾಲೆಯ ಮಕ್ಕಳು ನಡೆಸಿಕೊಟ್ಟ್ರು, ಇದೆ ವೇದಿಕೆಯಲ್ಲಿ ಸಾಧನೆಗೈದ ಮಕ್ಕಳನ್ನು ಸನ್ಮಾನಿಸಲಾಯಿತು, ಕಾರ್ಯಕ್ರಮದಲ್ಲಿ ಎಮ್,ಎ,ಬಡಕುಂದ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವ್ಹಿ.ಎಸ್.ಒಡೆಯರ ಸ್ವಾಗತಿಸಿದರು, ಬಿ.ಎ.ಮಠಪತಿ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ಪಿ.ಎ.ಪ್ರಸಾದಿ ವಂದಿಸಿದರು.