ರಾಣೇಬೆನ್ನೂರು01: ಸಮಾಜದಲ್ಲಿ ಸಮಾನತೆ ಸಾಧಿಸಬೇಕಾದರೆ, ಭವಿಷ್ಯದ ವಿದ್ಯಾರ್ಥಿಗಳು ಬಾಲ್ಯದಲ್ಲಿಯೇ ತಮ್ಮ ಶಿಕ್ಷಣವನ್ನು ಪರಿಪೂರ್ಣತೆಯತ್ತ ಕೊಂಡ್ಯೊಯಬೇಕಾಗಿದೆ. ಅದಕ್ಕಾಗಿ ಗುರುಗಳ ಮಾರ್ಗದರ್ಶನದಲ್ಲಿ ಗುರಿಯನ್ನಿಟ್ಟುಕೊಂಡು ಅಧ್ಯಯನ ನಡೆಸಲು ಮುಂದಾಗಬೇಕು ಎಂದು ಚನ್ನೈನ ಡಾ|| ಎ.ಪಿ.ಜೆ. ಅಬ್ದುಲ್ಕಲಾಂ ಮೆಮೊರಿ ಗುರು ಆಫ್ ಇಂಡಿಯಾದ ಕೌಶಲ್ಯ ತರಬೇತುದಾರ ಡಾ|| ಜಿ. ಫ್ಯಾನ್ಸಿಸ್ ಕ್ಸಾವಿಯರ್ ಹೇಳಿದರು.
ಅವರು ಶನಿವಾರ ಸಂಜೆ ನಗರ ಹೊರವಲಯದ ದೆಹಲಿ ಸಂಟ್ರಲ್ ಶಾಲೆಯ 2019-20ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಇಂದಿನ ಆಧುನಿಕ ತಂತ್ರಜ್ಞಾನದ ಶಿಕ್ಷಣ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ಕಾಣುತ್ತಿದ್ದೇವೆ. ಎಲ್ಲ ಹಂತದಲ್ಲಿಯೂ ಪರಿಪೂರ್ಣ ಶಿಕ್ಷಣಕ್ಕೆ ಪೂರಕವಾದ ವಾತಾವರಣ ನಿರ್ಮಾಣ ವಾಗಿದೆ. ಇದರಿಂದ ಸ್ಪರ್ಧಾತ್ಮಕವಾಗಿ ಅಂಕ ಗಳಿಸುವುದರ ಮೂಲಕ ಪ್ರತಿಭಾಸಂಪನ್ನತೆಯನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಮೆರೆಯುತ್ತಿರುವುದು ಈ ದೇಶದ ಮತ್ತು ನಾಡಿನ ಶೈಕ್ಷಣಿಕ ಪ್ರಗತಿಯ ಸಂಕೇತವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ವೆಂಕಟೇಶ್ ತೊಗಟವೀರ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಯಾವುದೇ ಲಾಭದ ಆಸೆಗಾಗಿ ಸಂಸ್ಥೆಯನ್ನು ಪ್ರಾರಂಭ ಮಾಡಿಲ್ಲ. ತಂದೆಯವರ ಶಿಕ್ಷಣ ಸೇವೆಯ ಆಸೆಯಂತೆ ತಾವು ಈ ಸಂಸ್ಥೆಯನ್ನು ಪ್ರಗತಿಪಥದತ್ತ ಸಾಗಿಸಲು ಮುಂದಾಗಿದ್ದೇವೆ. ವಿದ್ಯಾರ್ಥಿಗಳಿಗೆ ಉತ್ತಮ ಮತ್ತು ಗುಣಮಟ್ಟದ ಶಿಕ್ಷಣ ನೀಡುವ ಏಕೈಕ ಮಹದುದ್ದೇಶ ಸಂಸ್ಥೆಯ ಆಡಳಿತ ಮಂಡಳಿ ಹೊಂದಿರುವುದಾಗಿ ಹೇಳಿದರು.
ಮುಖ್ಯಅತಿಥಿಗಳಾಗಿ ತಂತ್ರಜ್ಞಾನದ ವ್ಯವಸ್ಥೆಯ ಸಂಸ್ಥಾಪಕ ಪ್ರದೀಪ ಆಚಾರ್ಯ, ಕಾರ್ಯದರ್ಶಿ ಮಂಜುನಾಥ ತೊಗಟವೀರ, ಆಡಳಿತಾಧಿಕಾರಿ ಶಾಲಿನಿ ತೊಗಟವೀರ, ಪ್ರಾಚಾರ್ಯ ಪ್ರಮೋದ ಮಾಳೇಕರ, ಸದಸ್ಯರಾದ ವಿಜಯಲಕ್ಷ್ಮೀ ಪೂಜಾರ, ಶಿಲ್ಪಾ ಪೂಜಾರ, ಸುಶೀಲಾ ತೊಗಟವೀರ, ರಂಗಪ್ಪ ಶಿರೂರ, ಸೇರಿದಂತೆ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.
ಮಮತಾ ಅಂಬಿಗೇರ ಸಂಗಡಿಗರು ಪ್ರಾಥರ್ಿಸಿದರು, ಅಮೃತಾ ಮತ್ತು ನಿತಿನ್ ಸ್ವಾಗತಿಸಿದರು, ಭೂಮಿಕಾ ನಿರೂಪಿಸಿದರು, ತೇಜಶ್ವಿನಿ ವಂದಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ವಿಜೇತರಾದ ನೂರಾರು ವಿದ್ಯಾಥರ್ಿಗಳಿಗೆ ಬಹುಮಾನ, ಪಾರಿತೋಷಕ, ಪ್ರಮಾಣ ಪತ್ರ ವಿತರಿಸಿ ಗೌರವಿಸಲಾಯಿತು. ನಂತರ ನಡೆದ ನೂರಾರು ಮಕ್ಕಳ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮವು ಸಾರ್ವಜನಿಕರ ಗಮನ ಸೆಳೆದವು.