ವಾಷರ್ಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ

ಲೋಕದರ್ಶನ ವರದಿ

ಬೆಳಗಾವಿ 19:  2018-19ನೇ ಸಾಲಿನ ವಾಷರ್ಿಕ ಸ್ನೇಹ ಸಮ್ಮೇಳನವು ಗುರುವಾರ ದಿ.17ರಂದು ಎಸ್.ಎಸ್.ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ನಿರಂಜನ ಜಗದ್ಗುರು ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, ಎಡೆಯೂರು ತೋಂಟದಾರ್ಯ ಸಂಸ್ಥಾನಮಠ, ಗದಗ-ಡಂಬಳ ಹಾಗೂ ರುದ್ರಾಕ್ಷಿಮಠ ನಾಗನೂರು-ಬೆಳಗಾವಿ ಇವರ ಪಾವನ ಸಾನಿಧ್ಯದಲ್ಲಿ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಸ್ಥಾನಿಕ ಆಡಳಿತ ಮಂಡಳಿಯ ಅಧ್ಯಕ್ಷ ಆರ್.ಉಳ್ಳೇಗಡ್ಡಿಯವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೆ.ಎಸ್.ನಂದೇರ ಜಿಲ್ಲಾ ಉಪ ಸಮನ್ವಯ ಯೋಜನಾಧಿಕಾರಿಗಳು, ಉಪನಿದರ್ೇಶಕರ ಕಚೇರಿ, ಸಾ.ಶಿ.ಇಲಾಖೆ, ಬೆಳಗಾವಿ(ದ) ಹಾಗೂ ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ ಪ್ರಾಧ್ಯಾಪಕರು, ಕನ್ನಡ ವಿಭಾಗ, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ ಇವರು ಆಗಮಿಸಿದ್ದರು. ಸಂಸ್ಥೆಯ ಕಾರ್ಯದಶರ್ಿ ಬಿ.ಎಫ್.ಕಲ್ಲಣ್ಣವರ ಇವರು ಉಪಸ್ಥಿತರಿದ್ದರು. 

ಮುಖ್ಯ ಅತಿಥಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉಪಪ್ರಾಚಾರ್ಯರಾದ ಕೆ.ಬಿ.ಹಿರೇಮಠ ಇವರು ಸ್ವಾಗತಿಸಿದರು. ಎಸ್.ಬಿ.ತಲ್ಲೂರ ಹಾಗೂ ಎಸ್.ಎಸ್.ಮಾನೆಯವರು ಅತಿಥಿಗಳನ್ನು ಪರಿಚಯಿಸಿದರು. ಮುಖ್ಯ ಅತಿಥಿ ಕೆ.ಎಸ್.ನಂದೇರ ಇವರು ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯನ್ನು ಸೂಕ್ತವಾಗಿ ಹೊರತೆಗೆಯುವ ಕಾರ್ಯ ಶಿಕ್ಷಕರಿಂದ ಆಗಬೇಕು ಎಂದು ಅತಿಥಿಪರ ಭಾಷಣದಲ್ಲಿ ಕರೆಕೊಟ್ಟರು. ಇನ್ನೊಬ್ಬ ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ ಡಾ ಮೈತ್ರೇಯಿಣಿ ಗದಿಗೆಪ್ಪಗೌಡರ ಇವರು ವಿದ್ಯಾಥರ್ಿಗಳು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಜಿ.ಸಿ.ಕಕರ್ಿಯವರು ಕಾರ್ಯಕ್ರಮ ನಿರೂಪಿಸಿದರು. ಜೆ.ಆರ್.ಕೇಳ್ಕರ ವಂದನಾರ್ಪನೆ ಮಾಡಿದರು. ಕಾರ್ಯಕ್ರಮದಲ್ಲಿ ಎಲ್ಲ ಆಡಳಿತ ಮಂಡಳಿ ಸದಸ್ಯರು, ಶಾಲಾ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾಥರ್ಿಗಳು ಪಾಲ್ಗೊಂಡಿದ್ದರು.