ವಾಷರ್ಿಕ ಸ್ನೇಹ ಸಮ್ಮೇಳನ, ಬಹುಮಾನ ವಿತರಣೆ

ಲೋಕದರ್ಶನ ವರದಿ

ರಾಯಬಾಗ 15: ಇಂದಿನ ಮಕ್ಕಳು ಪಾಠದಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಗಳನ್ನು ಪ್ರದಶರ್ಿಸಬೇಕೆಂದು ಯುವಧುರೀಣತ್ರಿಕಾಲ ಪಾಟೀಲ ಹೇಳಿದರು.

ಶನಿವಾರದಂದು ಜಿಲ್ಲೆಯ ರಾಯಬಾಗ ಪಟ್ಟಣದ ಎಸ್ಪಿಎಮ್ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ವಸಂತರಾವ್ ಪಾಟೀಲ ಆಂಗ್ಲ ಮಾಧ್ಯಮ ಶಾಲೆ ವಾಷರ್ಿಕ ಸ್ನೇಹ ಸಮ್ಮೇಳ ಹಾಗೂ ಬಹುಮಾನ ವಿತರಣೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಾಲಕರು ಮತ್ತು ಶಿಕ್ಷಕರು ಮಕ್ಕಳನ್ನು ಮೊಬೈಲ್ ಗೀಳಿನಿಂದ ದೂರ ಮಾಡಿ, ಅವರನ್ನು ಒಳ್ಳೆ ಪ್ರಜೆಗಳನ್ನಾಗಿ ರೂಪಿಸಿ, ಅವರಲ್ಲಿದೇಶ ಪ್ರೇಮವನ್ನು ಬೆಳೆಸಬೇಕೆಂದರು. 

ಅತಿಥಿಗಳಾಗಿ ಆಗಮಿಸಿದ್ದ ಘಟಪ್ರಭಾದ ಎಸ್ಡಿಟಿ ಪಿಯು ಕಾಲೇಜ್ ಪ್ರಾಚಾರ್ಯ ಶೋಭಾ ನಾಯಿಕ ಮಾತನಾಡಿ, ಮಕ್ಕಳ ಭವಿಷ್ಯವನ್ನುರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮಕ್ಕಳಿಗೆ ನಮ್ಮ ನಾಡಿನ ಭಾಷೆ, ಸಂಸ್ಕೃತಿ, ಆಚಾರ, ವಿಚಾರಗಳ ಬಗ್ಗೆ ಬೋಧಿಸಿ, ಅವರನ್ನು ಸತ್ಪಪ್ರಜೆಗಳನ್ನಾಗಿ ಮಾಡುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ.ಮಕ್ಕಳಲ್ಲಿ ಮಹಾತ್ಮರ ಜೀವನ ಆದರ್ಶಗಳನ್ನು ತುಂಬಬೇಕೆಂದುಕರೆ ನೀಡಿದರು. ಎಸ್ಪಿಎಮ್ ನಿದರ್ೇಶಕಿ ಭಾಗ್ಯಶ್ರೀ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಕಾರ್ಯಕ್ರಮದಲ್ಲಿ ಎಸ್ಪಿಎಮ್ ನಿದರ್ೇಶಕಿ ಪೂಣರ್ಿಮಾ ಪಾಟೀಲ, ಕಾರ್ಯದಶರ್ಿ ಎಸ್.ಎಸ್.ಶಿಂಗಾಡಿ, ರಾಯಬಾಗ ಗ್ರಾಮೀಣ ಸಿಆರ್ಸಿ ಎಚ್.ಎಫ್.ಆಯಟ್ಟಿ, ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಪಿ.ಬಿ.ಮುನ್ಯಾಳ, ರಾ.ವಿ.ಸಂ.ಪ. ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ  ಎಲ್.ಎನ್.ಮರಾಠೆ, ವಿವೇಕಾನಂದ ಕಲಾ ಮಂದಿರದ ಪ್ರಾಚಾರ್ಯ ವಿ.ಡಿ.ಸಾಲಿ, ಬಿಪಿಇಡ್ಕಾಲೇಜ ಪ್ರಾಚಾರ್ಯ ಆರ್.ಕೆ.ಪಾಟೀಲ, ಡಿ.ಎಚ್.ದೇಶಪಾಂಡೆ, ಆಕಾಶ ನಿಡಗುಂದಿ, ಕುಮಾರ ನಾನಾಪ್ಪಗೋಳ, ವಿನಯ ಚೌಗಲೆ ಹಾಗೂ ಶಿಕ್ಷಕರು ಮತ್ತು ವಿದ್ಯಾಥರ್ಿಗಳು ಉಪಸ್ಥಿತರಿದ್ದರು.

ಮುಖ್ಯೋಪಾಧ್ಯಾಯನಿ ಅಶ್ವಿನಿ ಹೊನ್ನವಾಡೆ ಸ್ವಾಗತಿಸಿ, ನಿರೂಪಿಸಿದರು. ವಾಷರ್ಿಕ ಕ್ರೀಡಾಕೂಟದಲ್ಲಿ ವಿಜೇತರಾದ ವಿದ್ಯಾಥರ್ಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.