ವಾರ್ಷಿಕ ಸ್ನೇಹ ಸಮ್ಮೇಳನ: ಪರಿಶ್ರಮದಿಂದ ಅದ್ಯಯನ ಮಾಡಿದರೆ ಗುರಿ ಸಾಧ್ಯ
ಚಿಕ್ಕೋಡಿ 01: ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಅದ್ಯಯನ ಮಾಡಿದರೆ ನಿರ್ದಿಷ್ಟ ಗುರಿ ತಲುಪಲು ಸಾಧ್ಯವಾಗುತ್ತದೆ. ಜೀವನದಲ್ಲಿ ಉತ್ಸಾಹ ಮತ್ತು ದೃಢ ಸಂಕಲ್ಪ ಇಟ್ಟುಕೊಂಡಾಗ ಮಾತ್ರ ಗುರಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಚಿಕ್ಕೋಡಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೆಶಕ ಪಿ.ಐ.ಭಂಡಾರಿ ಹೇಳಿದರು.ಇಲ್ಲಿನ ಚಿಂಚಣಿ ಶ್ರೀ ಸಿದ್ಧಪ್ರಭು ಪದವಿ ಪೂರ್ವ ಕಾಲೇಜಿನ 2024-25 ನೆಯ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ದ್ವಿತೀಯಯ ಪಿಯುವಿದ್ಯಾರ್ಥಿಗಳ ಬೀಳ್ಕೋಡುವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು .ಮಾತನಾಡಿದರು. ಚಿಕ್ಕೋಡಿ ಭಾಗದಲ್ಲಿ ಭಾರತೀ ಕಾಲೇಜುವೆಂದು ಹೆಸರುವಾಸಿಯಾದ ಚಿಂಚಣಿ ಶ್ರೀ ಸಿದ್ಧಪ್ರಭು ಕಾಲೇಜು ಪಿಯು ವಿಭಾಗದಲ್ಲಿ ಉತ್ತಮ ಶಿಕ್ಷಣ ನೀಡುತ್ತದೆ. ಈ ಕಾಲೇಜದಿಂದ ಉತ್ತಮ ಫಲಿತಾಂಶ ಬರುತ್ತದೆ. ವಿದ್ಯಾರ್ಥಿಗಳು ಪರಿಸರ ಸ್ನೇಹಿ ವಾತಾವರಣ ಹೊಂದಿರುವ ಇಂತಹ ಕಾಲೇಜಿನಲ್ಲಿ ಉತ್ತಮ ಫಲಿತಾಂಶ ದಾಖಲಿಸಿ ಜೀವನ ರೂಪಿಸಿಕೊಳ್ಳಬೇಕೆಂದು ಸಲಹೆ ನೀಡಿದರು.ಅಥಿತಿಗಳಾಗಿ ಆಗಮೀಸಿದ ನೌಕರ ಸಂಘದ ಜಿಲ್ಲಾ ಸಂಚಾಲಕ ಮಹಾದೇವ ತಳವಾರ.ನಾಗರಮುನ್ನೋಳ್ಳಿ ಶಾಲೆಯ ಮುಖ್ಯೋಪಾಧ್ಯಾಯ ಎ..ಕೆ.ಖೋತ. ಬೆಳಕೂಡ ಶಾಲೆಯ ಶ್ರೀಮತಿ ಸುರೇಖಾ ಕುಲಕರ್ಣಿ.ಜೋಡಕುರಳಿಯ ಶ್ರೀಮತಿ ಸುರೇಖಾ ಕಾಂಬಳೆ.ಬಂಬಲವಾಡದ ಸರೋಜನಿ ಕುಂದರಗಿ.ಉಮರಾಣಿಯ ವಂದನಾ ಹುಲ್ಲೋಳಿ.ತೋರಣಹಳ್ಳಿಯ ಎಸ್.ವೈ.ಪವಾರ.ಕೆಂಪಟ್ಟಿ ರಾಜಕುಮಾರ ಲೋಕನ್ನವರ.ದಂಡಾಪೂರದ ಎಸ್.ಎ..ಕವಣಿ.ನಾಯಿಂಗ್ಲಜದ ಕೆ.ಡಿ.ಪಾಟೀಲ.ಶ್ರೀಧರ ಕಿಚಡೆ ಅವರನ್ನು ಸನ್ಮಾನಿಸಿ ಗೌರವಿಸಿದರು.ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ವೈ.ಎ.ಫಠಾಣ ವಹಿಸಿದ್ದರು.ಈ ಸಂದರ್ಭದಲ್ಲಿ ಉಪನ್ಯಾಸಕರಾದ ಎ.ಎಂ.ಕಾಮತ. ರಮೇಶ ಕವಟಕೊಪ್ಪ. ಆನಂದ ಫಠಾಯತ್. ವಿ.ಬಿ.ಹಿರೇಮಠ. ಎಂ.ಜಿ.ನಾಯಿಕ. ಸವಿತಾ ಪೋಮಾಯಿ. ಸ್ಮೀತಾ ಪೂಜೇರಿ. ರೂಪಾ ಗುಡೋಡಗಿ ಮುಂತಾದವರು ಇದ್ದರು.ಉಪನ್ಯಾಸಕ ಎಸ್.ಬಿ.ಪಾಟೀಲ ಸ್ವಾಗತಿಸಿದರು. ವಿದ್ಯಾರ್ಥಿನಿ ಯಶೋಧಾ ಹಿರೇಮನಿ ನಿರೂಪಿಸಿದರು. ವಿ.ಸಿ.ಕೋರಿ ವಂದಿಸಿದರು.ಪೋಟೋ: ಚಿಕ್ಕೋಡಿ: ಸಿಎಸ್ ಎಸ್ ಪಿಯು ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಪಿಯು ಡಿಡಿಪಿಐ ಪಿ.ಐ.ಭಂಡಾರಿ ಉದ್ಘಾಟಿಸಿದರು.