ಲೋಕದರ್ಶನವರದಿ
ಧಾರವಾಡ, 07 : ಬೆಳಗಾವಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಸರಕಾರಿ ಪ್ರೌಢ ಶಾಲಾ ಸಹ ಶಿಕ್ಷಕರು ಗ್ರೇಡ್-2 ವೃಂದದ ಬೋಧಕ ಸಿಬ್ಬಂದಿಯ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಧಾರವಾಡ ಆಯುಕ್ತರ ಕಛೇರಿಯ ಜಾಲತಾಣ(ವೆಬ್ ಸೈಟ್)ದಲ್ಲಿ ಪ್ರಕಟಿಸಲಾಗಿದೆ.
ದಿ. 01-01-1978 ರಿಂದ 31-12-2000ರವರೆಗಿನ ಮೆರಿಟ್ ಆಧಾರಿತ ಅಂತಿಮ ಜೇಷ್ಠತಾ ಪಟ್ಟಿ ಭಾಗ-1 ಮತ್ತು ದಿ. 01-01-2001 ರಿಂದ 31-12-2018ರವರೆಗಿನ ತಾತ್ಕಾಲಿಕ ಆಯ್ಕೆ ಪಟ್ಟಿ ಭಾಗ-2ನ್ನು ಪ್ರಕಟಿಸಲಾಗಿದೆ.
ತಾತ್ಕಾಲಿಕ ಆಯ್ಕೆ ಪಟ್ಟಿ ಭಾಗ-2ಕ್ಕೆ ಸಂಬಂಧಿಸಿದಂತೆ ಶಿಕ್ಷಕರು ತಮ್ಮ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಜೂನ್-12ರ ಒಳಗಾಗಿ ತಮ್ಮ ಜಿಲ್ಲೆಯ ಡಿಡಿಪಿಐ ಅವರ ಮೂಲಕ ಎಲ್ಲ ಪೂರಕ ದಾಖಲೆಗಳೊಂದಿಗೆ ಕಾರ್ಯದಶರ್ಿ, ಕನರ್ಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಹಾಗೂ ಪದನಿಮಿತ್ತ ಸಹನಿದರ್ೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಳಗಾವಿ ವಿಭಾಗ, ಬೆಳಗಾವಿ ಇವರಿಗೆ ಸಲ್ಲಿಸಬೇಕು.
ಬೆಳಗಾವಿ ವಿಭಾಗದ ವ್ಯಾಪ್ತಿಯ ಬಾಗಲಕೋಟ, ವಿಜಯಪೂರ, ಬೆಳಗಾವಿ, ಉತ್ತರಕನ್ನಡ, ಗದಗ, ಧಾರವಾಡ, ಹಾವೇರಿ ಕಂದಾಯ ಜಿಲ್ಲೆಗಳು, ಶಿರಸಿ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸರಕಾರಿ ಪ್ರೌಢ ಶಾಲಾ ಸಹ ಶಿಕ್ಷಕರು ಗ್ರೇಡ್-2 ವೃಂದದ ಬೋಧಕ ಸಿಬ್ಬಂದಿ ಧಾರವಾಡ ಆಯುಕ್ತರ ಕಛೇರಿಯ ಜಾಲತಾಣಕ್ಕೆ ಭೇಟಿ ನೀಡಿ ತಮ್ಮ ಸೇವಾ ವಿವರಗಳನ್ನು ಕೂಲಂಕುಷವಾಗಿ ಪರಿಶೀಲಿಸಬೇಕು.
ಜೂನ್-12ರ ನಂತರ ಬರುವ ಆಕ್ಷೇಪಣೆಗಳನ್ನು ಪರಿಗಣಿಸುವದಿಲ್ಲವೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.