ಕಾರ್ಮಿಕರಿಗೆ ಇಎಸ್ ಐ ಯೋಜನೆ ಘೋಷಿಸಿ; ಕೇಂದ್ರಕ್ಕೆ ಕೇರಳ ಸಚಿವರ ಮನವಿ

ತಿರುವನಂತಪುರಂ, ಏ 8,ಲಾಕ್ ಡೌನ್ ಅವಧಿಯಲ್ಲಿ ಕಾರ್ಮಿಕರಿಗೆ ಇಎಸ್ ಐ ಯೋಜನೆಯಡಿ ಪರಿಹಾರ ಯೋಜನೆ ಘೋಷಿಸಬೇಕು ಎಂದು ಕೇರಳದ ಕಾರ್ಮಿಕ ಸಚಿವ ಟಿ.ಪಿ ರಾಮಕೃಷ್ಣನ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇದಕ್ಕಾಗಿ ಸರ್ಕಾರ ಕೇವಲ ಶೇ.4ರಷ್ಟು ವೆಚ್ಚ ಭರಿಸಬೇಕಿದ್ದು, 3.5 ಕೋಟಿ ಕಾರ್ಮಿಕರಿಗೆ ನೆರವಾಗಲಿದೆ ಎಂದು ಅವರು ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಕುಮಾರ್ ಗಂಗಾವರ್ ಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿದ್ದಾರೆ.