ಅತೀವೃಷ್ಟಿಯ ಮಧ್ಯೆಯೂ ಸಂಪ್ರದಾಯ ಬಿಡದ ಅನ್ನದಾತ

ಲೋಕದರ್ಶನವರದಿ

ಶಿಗ್ಗಾವಿ12 : ಪ್ರಸಕ್ತ ಸಾಲಿನಲ್ಲಿ ಒಂದೆಡೆ ಅತಿವೃಷ್ಟಿಯಿಂದ ರೈತ ಬೆಳೆ ಕಳೆದುಕೊಂಡರೆ ಮತ್ತೊಂದೆಡೆ ಹಲವಾರು ರೈತರು ಸೂರನ್ನೆ ಕಳೆದುಕೊಂಡು ಸಂತ್ರಸ್ಥರಾಗಿದ್ದಾರೆ ಇಂತಹ ಸಂದಿಗ್ದ  ಪರಿಸ್ಥಿತಿಯಲ್ಲೂ ಸಂಪ್ರದಾಯ ಕೈ ಬಿಡಬಾರದೆಂಬ ಉದ್ದೇಶದಿಂದ ನೋವಿನ  ನಡುವೆಯೂ ಶುಭ ಶುಕ್ರವಾರ ಸೀಗಿ ಹುಣ್ಣಿಮೆ ಆಚರಿಸಲು ತಾಲೂಕಿನ ಜನತೆ ಮುಂದಾಗಿದ್ದರು.

 ಅನ್ನದಾತರು ಬೆಳೆಯುವ ಬೆಳೆಯನ್ನು ಭೂತಾಯಿಯ ಮಕ್ಕಳಂತೆ ಗೌರವಿಸಲಾಗುತ್ತದೆ ಆದರಿಂದ ತಾಲೂಕಿನ ರೈತರ ಮೊಗದಲ್ಲಿ ಹುಣ್ಣಿಮೆಯ ಸಂಭ್ರಮ ಎದ್ದು ಕಾಣುತ್ತಿತ್ತು ಸತತ ಸುರಿದ ಮಳೆಗೆ ಚೇತರಸಿಕೊಂಡ ಬೆಳೆಗಳನ್ನು ಕಂಡು ಹಷರ್ಿತನಾದ ರೈತ ಸಂಭ್ರಮದಿಂದ ಸೀಗಿ ಹುಣ್ಣೀಮೆ ಆಚರಿಸಲು ಮುಂದಾಗಿರುವದು ಕಂಡು ಬಂದಿತು.

       ಚಕ್ಕಡಿ, ಟಾಟಾಎಸ್, ಕಟ್ಮಾ, ಟ್ಯಾಕ್ಟರ್, ಬೈಕ್ಗಳಮೂಲಕ ಸಹ ಕುಟುಂಬ ಪರಿವಾರದೊಂದಿಗೆ ತಮ್ಮ ತಮ್ಮ ಹೊಲಗಳಿಗೆ ಆಗಮಿಸಿ ಭಕ್ತಿ ಭಾವಗಳಿಂದ ಭೂತಾಯಿಗೆ ಹಾಗೂ ಬೆಳೆದ ಪೈರಿಗೆ ಪೂಜೆ ಸಲ್ಲಿಸಿ ಜಮೀನಿನ ತುಂಬ ಚರಗ ಚಲ್ಲಿ ಭೂ ತಾಯಿಗೆ ಒಳ್ಳೆಯ ಫಲವನ್ನು ನೀಡೆಂದು ಬೇಡಿಕೊಂಡರು.

       ತಮ್ಮ ನೆರೆ, ಹೊರೆ, ಬಂಧು ಭಾಂದವರನ್ನು ಸೀಗಿ ಹುಣ್ಣಿಮೆಯ ಸಹ ಭೋಜನದ ಸಂಭ್ರಮಕ್ಕೆ ಆಹ್ವಾನಿಸಿ ಕುಟುಂಬ ಪರಿವಾರ ಸಮೇತ ಒಟ್ಟಾಗಿ ಕುಳಿತು ತರ ತರಹದ ಖಾದ್ಯಗಳಾದ ಜೋಳ ಸಜ್ಜಿ ರೊಟ್ಟಿ, ಚಪಾತಿ, ಪುಂಡಿಪಲ್ಯ, ಕುಚ್ಚಿದ ಮೇಣಸಿನಕಾಯಿ, ಬದನೆಯಾಯಿ ಪಲ್ಯ, ಹಿಟ್ಟಿನ ಪಲ್ಯ ಸೇರಿದಂತೆ ವಿವಿದ ತರಹದ ಚಟ್ನಿಗಳು, ಮೊಸರು, ಖಚರ್ಿಕಾಯಿ, ಸುರಳಿ ಹೋಳಿಗೆ, ಹುರಕ್ಕೀ ಹೋಳಿಗೆ, ಕೊಡುಬಳೆ, ಚಕ್ಕಲಿ, ಒಡೆ, ಕಡಬು, ಅಕ್ಕಿ ಪಾಯಸ, ಮೊಸರು ಬುತ್ತಿ ಕಲಸಬಾನ ಬುತ್ತಿ, ಅನ್ನ ಸಾಂಬಾರು ಸೇರಿದಂತೆ ವಿವಿದ ಬಗೆಯ ಖಾದ್ಯಗಳನ್ನು ಹರಟೆ ಹೊಡೆಯುತ್ತಾ ಸವೆದು ಸೀಗೆ ಹುಣ್ಣಿಮೆಯ ಸಂಭ್ರಮವನ್ನು ಸವಿದರು.