ಬಾಗಲಕೋಟೆ೧೧: ರೈತರು ಕೃಷಿ ಜೊತೆ ಕೃಷಿಯೇತರ ಚಟುವಟಿಕೆಗಳಾದ ಪಶು ಸಂಗೋಪನೆಗೆ ಆದ್ಯತೆ ನೀಡಿದರೆ ಆಥರ್ಿಕ ಅಭಿವೃದ್ಧಿ ಸಾಧ್ಯ ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.
ಬುಧವಾರ ನಗರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಭಾರತ ಸರಕಾರದ ನೂತನ ಕಾರ್ಯಕ್ರಮ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಹಾಗೂ ರಾಷ್ಟ್ರೀಯ ಕೃತಕ ಗರ್ಭಧಾರಣೆ ಕಾರ್ಯಕ್ರಮ ಹಾಗೂ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ನಿಧಿ, ಪ್ರಧಾನ ಮಂತ್ರಿ ಕಿಸಾನ್ ಮಾನ-ದನ್ ಯೋಜನೆ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಶುಸಂಗೋಪನೆಯಲ್ಲಿ ಕಡಿಮೆ ಅವಧಿಯಲ್ಲಿ ವರ್ಷವಿಡಿ ಹಾಲು ಕೊಡುವ ಜಾನುವಾರುಗಳು ಲಭ್ಯವಿದ್ದು, ಒಂದು ಆಕಳು ಒಂದು ಕುಟುಂಬವನ್ನು ನಿರ್ವಹಿಸುತ್ತದೆ. ಕೃತಕ ಗರ್ಭಧಾರಣೆ ಮೂಲಕ ನಿರಂತರ ಹಾಲು ಪಡೆಯುವಂತ ರಾಸುಗಳನ್ನು ರೈತರು ಸಾಕಬೇಕು. ಕೆಂಪು ಶಿಂಧಿ, ಜಸರ್ಿ, ಹೆಚ್ಎಪ್, ಮುರ್ರಾ ತಳಿಯ ಜಾನುವಾರುಗಳು ಹೆಚ್ಚಿನ ಬೆಲೆ ಬಾಳುವ ಜಾನುವಾರುಗಳಾಗಿವೆ. ರಾಸುಗಳು ರೋಗ ರುಜುನೆಗಳಿಂದ ಬಳಲಿದಾಗ ಹಾಗೂ ಆಕಸ್ಮಿಕ ಸಾವನ್ನಿಪ್ಪಿದ್ದಾಗ ರೈತರು ಜಾನುವಾರುಗಳಿಗೆ ಕಡ್ಡಾಯವಾಗಿ ವಿಮೆ ಇಳಿಸಿ ನಷ್ಟವನ್ನು ತಪ್ಪಿಸಿಕೊಳ್ಳಬಹುದಾಗಿದೆ ಎಂದರು.
ಹೈನುಗಾರಿಕೆ ಇಂದು ಅವಶ್ಯವಾಗಿದ್ದು, ಹೇರಳವಾದ ಪೌಷ್ಠಿಕತೆ ಹಾಲಿನಲ್ಲಿ ದೊರೆಯುತ್ತಿರುವದರಿಂದ ಇದು ಪ್ರತಿಯೊಬ್ಬರಿಗೂ ಅವಶ್ಯವಾದ ಆಹಾರವಾಗಿದ್ದು, ಇದು ನಿತಂತರವಾದ ಲಾಭದಾಯಕ ಉದ್ಯೋಗವಾಗಿದೆ. ಹೊಲದಲ್ಲಿ ಬೆಳೆದ ಬೆಳೆಗಳ ಜೊತೆ ಅಲ್ಪಾವಧಿಯಲ್ಲಿ ಸ್ವಂಪಾಗಿ ಬೆಳೆಯುವ ಮತ್ತು ಹಾಲು ಉತ್ಪಾದನೆ ಹೆಚ್ಚು ಮಾಡುವ ಮೇವು ಬೆಳೆಸಿ ಹೈನುಗಾರಿಕೆ ಅಬಿವೃದ್ಧಿ ಪಡಿಸಿಕೊಳ್ಳಬೇಕು ಎಂದರು.
ರೈತರ ಹಾಗೂ ಹೈನುಗಾರಿಕೆ ಅಬಿವೃದ್ಧಿಗಾಗಿ ಕೇಂದ್ರ ಸರಕಾರ ವಿನೂತನ ಯೋಜನೆ ಜಾರಿ ತರಲಾಗಿದ್ದು ಇದು ಪ್ರಧಾನ ಮಂತ್ರಿ ಮೋದಿ ಅವರ ಪ್ರಮುಖ ಕಾರ್ಯವಾಗಿದೆ. ಹೆಚ್ಚು ಹಾಲು ಉತ್ಪಾದನೆಗಾಗಿ ತಳಿಗಳ ಅಬಿವೃದ್ಧಿ ಸಾಂಕ್ರಾಮಿಕ ರೋಗಗಳ ತಡೆಗಟ್ಟಲು ಪ್ರದಾನ ಮಂತ್ರಿ ಅವರು ದಿಟ್ಟ ಹೆಜ್ಜೆ ಇಟ್ಟಿದ್ದಾರೆ ಎಂದರು.
ಮಾತನಾಡಿದ ಪಶುಸಂಗೋಪನಾ ಇಲಾಖೆ ಉಪನಿದರ್ೇಶಕ ಆರ್.ಕೆ.ಹೆಗಡೆ ತಳಿ ಸುಧಾರಣೆಗಾಗಿ ಕನರ್ಾಟಕ ರಾಜ್ಯದಲ್ಲಿ 12 ಜಿಲ್ಲೆಗಳನ್ನು ಆಯ್ಕೆಮಾಡಲಾಗಿದ್ದು, ಬಾಗಲಕೋಟೆಯು ಒಂದಾಗಿದೆ. ಜಿಲ್ಲೆಯ 100 ಗ್ರಾಮಗಳನ್ನು ಆಯ್ಕೆ ಮಾಡಲಾಗಿದ್ದು, ಪ್ರತಿ ಗ್ರಾಮದಲ್ಲಿ 200 ಜಾನುವಾರುಗಳನ್ನು ಕೃತಕ ತಳಿ ಅಬಿವೃದ್ಧಿ ಪಡಿಸುವದರ ಮೂಲಕ ಹೆಚ್ಚು ಹೆಚ್ಚು ಹಾಲು ಉತ್ಪಾದಿಸಲು ಸಹಕಾರಿಯಾಗಲಿದೆ ಎಂದರು.
ಕೃಷಿ ಇಲಾಖೆಯ ಉಪ ನಿದರ್ೇಶಕ ಡಾ.ಎಸ್.ಬಿ.ಕೊಂಗವಾಡ ಅವರು ಕಾರ್ಯಕ್ರಮದಲ್ಲಿ ಬಾಗವಹಿಸಿದ್ದ ಜಿಲ್ಲೆಯ ವಿವಿಧ ಬಾಗದ ರೈತರುಗಳಿಗೆ ಸರಕಾರ ಯೋಜನೆಗಳ ಕುರಿತು ಸವಿವರವಾಗಿ ತಿಳಿಯಪಡಿಸಿದರು.
ಇದೇ ಸಂದರ್ಭದಲ್ಲಿ ಉತ್ತರ ಪ್ರದೇಶದಲ್ಲಿ ಪ್ರಧಾನಮಂತ್ರಿಗಳು ಚಾಲನೆ ನೀಡಿದ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದ ನೇರ ಪ್ರಸಾರವನ್ನು ವೀಕ್ಷಿಸಲಾಯಿತು. ಕಾರ್ಯಕ್ರಮದಲ್ಲಿ ಹಿರಿಯ ವಿಜ್ಞಾನಿ ಮತ್ತು ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥೆ ಡಾ. ಮಾನೇಶ್ವರಿ ಕಮ್ಮಾರ, ಬಿ.ಜಿ ಪಾಟೀಲ, ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕಿನ ರೈತರು ಉಪಸ್ಥಿತರಿದ್ದರು.