ಪ್ರಾಣಿ ಸಂರಕ್ಷಣೆ: ಹುನಗುಂದದಲ್ಲಿ ನಾಗರಹಾವು ಸುರಕ್ಷಿತವಾಗಿ ಅರಣ್ಯಕ್ಕೆ ಬಿಡುವಿಕೆ

ಪ್ರಾಣಿ ಸಂರಕ್ಷಣೆ: ಹುನಗುಂದದಲ್ಲಿ ನಾಗರಹಾವು ಸುರಕ್ಷಿತವಾಗಿ ಅರಣ್ಯಕ್ಕೆ ಬಿಡುವಿಕೆ Animal Conservation: Cobra safely released into the forest in Hunagunda

 ಲೋಕದರ್ಶನ ವರದಿ 

 ಮುಂಡಗೋಡ  04: ತಾಲೂಕಿನ ಹುನಗುಂದ ಗ್ರಾಮದ ನಿಂಗಪ್ಪ ಪರ್ವಾಪುರ ಅವರ ಮನೆಯಲ್ಲಿ ಒಂದು ನಾಗರಹಾವು ಒಳನುಗ್ಗಿ ಮನೆಯವರಲ್ಲಿ ಭಯ ಹುಟ್ಟಿಸಿತ್ತು. ಘಟನೆಯ ಸುದ್ದಿ ತಿಳಿದ ತಕ್ಷಣ ಮುತ್ತುರಾಜ ಹಳ್ಳಿ ಗಸ್ತು ವನಪಾಲಕರು ಸ್ಥಳಕ್ಕೆ ತಲುಪಿ, ಹಾವನ್ನು ಯಾವುದೇ ಗಾಯಗೊಳಿಸದೆ ಸುರಕ್ಷಿತವಾಗಿ ಹಿಡಿದು ಸಮೀಪದ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಸಮಾಜ ಸೇವಕರೂ ಹಾಗೂ ಪ್ರಾಣಿ ಪ್ರಿಯರೂ ಆದ ನಾಗರಾಜ ಗುಬ್ಬಕ್ಕನವರು ಮತ್ತು ಹುನಗುಂದ ಗ್ರಾಮದ ನಾಗರೀಕರು ಸಕ್ರಿಯವಾಗಿ ಭಾಗವಹಿಸಿದ್ದರು. ವನಪಾಲಕರು ಹಾವನ್ನು ಎಚ್ಚರಿಕೆಯಿಂದ ಹಿಡಿದು, ಅದನ್ನು ಅರಣ್ಯದಲ್ಲಿ ಸುರಕ್ಷಿತ ಸ್ಥಳದಲ್ಲಿ ಬಿಟ್ಟು ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.