ಇಂಡಿಯನ್-2‌ ದಲ್ಲಿ‌ಲ್ಲ‌ ಅನಿಲ್ ಕಪೂರ್

ಮುಂಬೈ, ಜ 29   ಬಾಲಿವುಡ್ ಮಿಸ್ಟರ್ ಇಂಡಿಯಾ, ತಾವು ಇಂಡಿಯನ್ -2‌ಚಿತ್ರದಲ್ಲಿ ನಟಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅನಿಲ್‌ ಕಪೂರ್ ಅಭಿನಯಿಸುತ್ತಿರುವ ಮಲಾಂಗ್ ಚಿತ್ರ ಶೀಘ್ರವೇ ತೆರೆಗೆ ಬರಲಿದೆ. ಈ ನಡುವೆ ಇಂಡಿಯನ್ -2 ಚಿತ್ರದಲ್ಲಿ ಖಳನಟನ‌ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಯೊಂದು ಬಿಟೌನ್ ನಲ್ಲಿ ಹರಿದಾಡುತ್ತಿತ್ತು. ಈ ಚಿತ್ರವು  1996ರಲ್ಲಿ ತೆರೆಕಂಡ ಕಂಡಿಯನ್ ಚಿತ್ರದ ಅವತರಣಿಕೆಯಾಗಿದೆ. 

ಚಿತ್ರೀಕರಣದ ವೇಳೆ ನಿರ್ದೇಶಕ ಶಂಕರ್ ಅವರನ್ನು ಭೇಟಿ ಮಾಡಿದ್ದೆ. ಆ ಸಂದರ್ಭದಲ್ಲಿ ಇಬ್ಬರೂ ಕ್ಲಿಕ್ಕಿಸಿಕೊಂಡಿದ್ದ ಫೋಟೋ ವೈರಲ್ ಆಗಿತ್ತು. ಈ‌ ಹಿನ್ನಲೆಯಲ್ಲಿ ತಾವು ಇಂಡಿಯನ್-2 ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿಯೊಂದು ಹರಿದಾಡಿತ್ತು. ಆದರೆ, ತಾವು ಈ ಚಿತ್ರದಲ್ಲಿ ನಟಿಸುತ್ತಿಲ್ಲ ಎಂದು ಅನಿಲ್ ಕಪೂರ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಇಂಡಿಯನ್-2 ಚಿತ್ರದಲ್ಲಿ ಬಹುಭಾಷಾ ನಟ ಕಮಲ್ ಹಾಸನ್ ಮುಖ್ಯಪಾತ್ರದಲ್ಲಿದ್ದಾರೆ. ಇವರ ಹೊರತಾಗಿ ಚಿತ್ರದಲ್ಲಿ ನಟಿ ಕಾಜಲ್ ಅಗರ್ವಾಲ್ ಹಾಗೂ ವಿದ್ಯುತ್ ಜಾಮ್ ವಾಲ್ ಕೂಡ ಇದ್ದಾರೆ.