ಲಂಡನ್ , ಫೆ 8, ಭಾರತದ ಅತ್ಯಂತ ಸಿರಿವಂತ ಉದ್ಯಮಿ, ವಿಶ್ವದ 8 ನೇ ಕುಬೇರ ಪತಿಗಳ ಪೈಕಿ ಒಬ್ಬರೂ ಎನಿಸಿಕೊಂಡಿರುವ, ಕೀರ್ತಿಗೆ ಭಾಜನರಾಗಿರುವ ಕೋಟ್ಯಧಿಪತಿ ಅನಿಲ್ ಅಂಬಾನಿ ದಿವಾಳಿಯಾಗಿದ್ದಾರೆ ಅವರ ಆಸ್ತಿಯ ಮೌಲ್ಯ ಶೂನ್ಯ ಎಂದರೆ ನೀವಿರಲಿ, ಬೇರೆಯಾರಾದರೂ ನಂಬಲಿದ್ದಾರೆಯೇ? ನಂಬಲು ಸಾಧ್ಯವೇ? ನಿಜ, ಆದರೆ ಈಗ ಇದನ್ನು ನಂಬಲೇಬೇಕು ಈ ಮಾತನ್ನು ಬೇರೆ ಕಡೆ ಯಾರೋ ಹೇಳಿದ್ದರೆ ಸ್ವಲ್ಪ ಅಪನಂಬಿಕೆ ಪಡಬಹುದಿತ್ತು ಆದರೆ ಅನಿಲ್ ಅಂಬಾನಿಯವರೇ ವಕೀಲರ ಮೂಲಕ ಈ ಮಾತನ್ನೂ ಅದೂ ಕೋರ್ಟ್ ಗೆ ಅವರೆ ಹೇಳಿಸಿದ್ದಾರೆ. ನನ್ನ ಆಸ್ತಿಯ ನಿವ್ವಳ ಮೌಲ್ಯ ಇದೀಗ ಶೂನ್ಯ! ನಾನು ದಿವಾಳಿಯಾಗಿದ್ದೇನೆ ಎಂದು ಬ್ರಿಟನ್ ಕೋರ್ಟ್ ಗೆ ಶುಕ್ರವಾರ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಚೀನಾ ಡೆವಲಪ್ಮೆಂಟ್ ಬ್ಯಾಂಕ್ ಮತ್ತು ಎಕ್ಸ್ಪೋರ್ಟ್- ಇಂಪೋರ್ಟ್ ಬ್ಯಾಂಕ್ ಹೈಕೋರ್ಟ್ನಲ್ಲಿ 5,ಸಾವಿರ ಕೋಟಿ ರೂಪಾಯಿ ಪಾವತಿಗಾಗಿ ಅಂಬಾನಿ ವಿರುದ್ಧ ದಾವೆ ಹೂಡಿದೆ , ಈ ಪ್ರಕರಣದ ವಿಚಾರಣೆ ವೇಳೆ ಅಂಬಾನಿ ಪರ ವಕೀಲರು ಈ ರೀತಿಯ ಹೇಳಿಕೆ ಸಲ್ಲಿಸಿದ್ದಾರೆ. ಶುಕ್ರವಾರದ ವಿಚಾರಣೆಗೆ ಅಂಬಾನಿ ಪುತ್ರ ಅನ್ಮೋಲ್ ಹಾಜರಾಗಿದ್ದರು ಎಂದೂ ವರದಿಯಾಗಿದೆ.