ಮಕ್ಕಳಲ್ಲಿ ಮಾನವೀಯ ಬಾಂಧವ್ಯ ವೃದ್ದಿಸಲು ಅಂಗನವಾಡಿ ಪೂರಕ: ಶಾಸಕ ರಾಜುಗೌಡ

ದೇವರಹಿಪ್ಪರಗಿ 17: ಮಕ್ಕಳಲ್ಲಿ ಮಾನವೀಯ ಬಾಂಧವ್ಯ ವೃದ್ದಿಸಲು ಅಂಗನವಾಡಿ ಕೇಂದ್ರಗಳು ಪೂರಕವಾಗಲಿದೆ ಎಂದು ಶಾಸಕ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ನುಡಿದರು. 

ತಾಲ್ಲೂಕಿನ ಭೈರವಾಡಗಿ ಗ್ರಾಮದಲ್ಲಿ ಶುಕ್ರವಾರದಂದು 2023-24ನೇ ಸಾಲಿನ ಜಿ.ಪಂ ವಿಜಯಪುರ ಶಿಶು ಅಭಿವೃದ್ಧಿ ಯೋಜನೆಯಡಿ ತಲಾ 15ಲಕ್ಷ  ರೂ ವೆಚ್ಚದಲ್ಲಿ ನಂ-02 ಹಾಗೂ 04 ನೂತನ ಅಂಗನವಾಡಿ ಕಟ್ಟಡದ ಕೇಂದ್ರಗಳನ್ನು ಉದ್ಘಾಟಿಸಿ ಮಾತನಾಡಿದ ಅವರು,ಇಂದಿನ ಈ ಕಾಲಘಟ್ಟದಲ್ಲಿ ಮಕ್ಕಳು ಮಾನವೀಯ ಬಾಂಧವ್ಯ ಕಡಿಮೆಗೊಳಿಸುತ್ತಿದ್ದಾರೆ. ಇದರಿಂದ ಮಕ್ಕಳಲ್ಲಿ ಸಮಾಜ ಗೌರವಿಸುವ ಗುಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಇದು ಸಮಾಜಕ್ಕೆ ಮಾರಕವಾಗುವ ದಿನಗಳು ದೂರವಿಲ್ಲ. ಈ ನಿಟ್ಟಿನಲ್ಲಿ ಅಂಗನವಾಡಿ ಕೇಂದ್ರಗಳು ಎಚ್ಚೆತ್ತುಕೊಂಡು ಗುಣಾತ್ಮಕ ಸಂಸ್ಕಾರ ಕಲಿಸುವ ಕೇಂದ್ರಗಳಾಗಿ ಭವಿಷ್ಯದ ದಿನದಲ್ಲಿ ಅಂಗನವಾಡಿ ಕೇಂದ್ರಗಳು ಸಮಾಜ ಗಟ್ಟಿಗೊಳಿಸುವ ಮಕ್ಕಳನ್ನು ರೂಪಿಸುವ ಕೇಂದ್ರಗಳಾಗಿ ಮೂಡಿಬರಲಿ ಎಂದು ಶುಭ ಹಾರೈಸಿದರು. *ಬೇಡಿಕೆಯ ಮನವಿಗಳು ಅಗತ್ಯವಿಲ್ಲ*ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ರಸ್ತೆ, ಕುಡಿಯುವ ನೀರು,ಶಿಕ್ಷಣ, ಆರೋಗ್ಯ ಹಾಗೂ ಗ್ರಾಮದಲ್ಲಿನ ಮೂಲಭೂತ ಸೌಕರ್ಯಗಳನ್ನು ಒದಗಿಸುವುದ ನನ್ನ ಕರ್ತವ್ಯವಾಗಿದೆ. ಪ್ರತೀ ಗ್ರಾಮದ ಅಭಿವೃದ್ಧಿಗೆ ನನ್ನದೇ ಆದ ಕನಸಿನ ಯೋಜನೆಗಳ ಮೂಲಕ ಅಭಿವೃದ್ಧಿಪಡಿಸಲಾಗುವುದು, ಕ್ಷೇತ್ರದ ಅಭಿವೃದ್ಧಿಗೆ ಅನುದಾನಗಳನ್ನು ಬಿಡುಗಡೆ ಮಾಡಬೇಕಾಗಿರುವುದು ಸರಕಾರದ ಕರ್ತವ್ಯವಾಗಿದೆ. ಬಿಡುಗಡೆಯಾದ ಅನುದಾನವನ್ನು ಸಮರ​‍್ಕವಾಗಿ ತಮ್ಮ ಗ್ರಾಮಗಳಿಗೆ ತಲುಪಿಸುವ ಕರ್ತವ್ಯ ಕ್ಷೇತ್ರದ ಶಾಸಕರ ದಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಯಾವುದೇ ಬೇಡಿಕೆಯ ಮನವಿಗಳು ಅಗತ್ಯವಿಲ್ಲ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷೆ ನೀಲಮ್ಮ ಶಾಂತಪ್ಪ ಬಿರಾದಾರ ವಹಿಸಿದ್ದರು. ಸಂದರ್ಭದಲ್ಲಿ ನೂತನವಾಗಿ ಆಗಮಿಸಿದ ಸಿಡಿಪಿಓ ಶಿಲ್ಪಾ ಹಿರೇಮಠ ಹಾಗೂ ವರ್ಗಾವಣೆಗೊಂಡ ನಿರ್ಮಲಾ ಸುರಪುರ ಅವರನ್ನು ಬಿಳ್ಕೊಡುವ ಕಾರ್ಯಕ್ರಮ ಹಾಗೂ ಅಂಗನವಾಡಿ ಕೇಂದ್ರಕ್ಕೆ 2 ಪ್ಲಾಟ್ ಭೂದಾನ ಮಾಡಿದ ಶರಣಬಸವ ಬಸವರೆಡ್ಡಿ ಅವರನ್ನು ಸನ್ಮಾನಿಸಿ ಗೌರವಿಸಿದ್ದು ವಿಶೇಷವಾಗಿತ್ತು.ಇದೇ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ಹಣಮಂತ್ರಾಯಗೌಡ ಬಿರಾದಾರ, ಸಿದ್ದಪ್ಪ ಸೌಕಾರ ಉತ್ನಾಳ, ರಾಜಶೇಖರ ಪಾಟೀಲ,ಗ್ರಾ.ಪಂ ಸದಸ್ಯರಾದ ಅಬ್ದುಲ್ ಬಳಗಾನೂರ, ಮುಖಂಡರುಗಳಾದ ಶರಣಗೌಡ ಅಂಗಡಿ, ಮಾಂತೇಶ ನಾಗರಬೆಟ್ಟ, ಸುನಿಲ ಮಾಗಿ, ಪಿಡಿಒ ಎಂ. ಎನ್‌. ಕತ್ತಿ,ಜಿ.ಪಂ.ಎಇಇ ವಿಲಾಸ ರಾಠೋಡ,ಎಇ ಅಶೋಕ ತೇಲಿ ಸೇರಿದಂತೆ ಗಣ್ಯರು, ಹಾಗೂ ಸುತ್ತಮುತ್ತಲಿನ ಗ್ರಾಮದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಇತರರು ಉಪಸ್ಥಿತರಿದ್ದರು. ಗ್ರಾಮದ ಪ್ರಮುಖರು, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಚೆನ್ನಾರಡ್ಡಿ ನ್ಯಾಮಣ್ಣವರ, ಗ್ರಾಮದಪ್ರಮುಖರುಗಳಾದದ ಕೆ.ಎಂ.ಶೆಟ್ಟಿ, ಅಪ್ಪಣ್ಣ ಚಾಂದಕೊಠಗಿ, ಪಿಡಿಒ ಮಲ್ಲು ಮಸಳಿ, ಭೂ ಸೇನಾಧಿಕಾರಿ ಆನಂದ ಸೇರಿದಂತೆ ಗ್ರಾಮ ಪಂಚಾಯಿತಿ ಸರ್ವ ಸದಸ್ಯರು, ಸಿಬ್ಬಂದಿ ವರ್ಗ, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು

ಯಾಳವಾರ ಗ್ರಾಮದಲ್ಲಿ ಅಂಗನವಾಡಿ ಕೇಂದ್ರದ ಭೂಮಿ ಪೂಜೆ: ತಾಲೂಕಿನ ಯಾಳವಾರ ಗ್ರಾಮದಲ್ಲಿ 2023-34ನೇ ಸಾಲಿನ ತಾ.ಪಂ ಆನಿರ್ಬಂಧಿತ ಅನುದಾನದಲ್ಲಿ ಸುಮಾರು 18 ಲಕ್ಷ ರೂ ವೆಚ್ಚದ ನೂತನವಾಗಿ ನಿರ್ಮಿಸಲಿರುವ ಅಂಗನವಾಡಿ ಕೇಂದ್ರದ ಭೂಮಿ ಪೂಜೆಯನ್ನು ಶಾಸಕ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ನೆರವೇರಿಸಿದರು.