ಅಂಗನವಾಡಿ, ಆಶಾ ಕಾರ್ಯಕತರ್ೆಯರಿಂದ ಎರಡನೇದಿನದ ಭಾರತ ಬಂದ್ ಕರೆ

ಲೋಕದರ್ಶನ ವರದಿ

ಬ್ಯಾಡಗಿ:ಕಾಮರ್ಿಕ ಸಂಘಟನೆಗಳು ನೀಡಿದ್ದ ಭಾರತ ಬಂದ್ ಕರೆಗೆ ಎರಡನೇ ದಿನವಾದ ಬುಧವಾರ ತಾಲೂಕಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಅಂಗನವಾಡಿ ಮತ್ತು ಆಶಾ ಕಾರ್ಯಕತರ್ೆಯರ ಪ್ರತಿಭಟನೆ ಹೊರತುಪಡಿಸಿ ಎಂದಿನಂತೆ ಜನ ಜೀವನ ಸಾಗಿತು.

ಅಂಗನವಾಡಿ ಕಾರ್ಯಕತರ್ೆಯರ ಪ್ರತಿಭಟನೆ: ಭಾರತ ಬಂದ್ ಕರೆ ಹಿನ್ನೆಲೆಯಲ್ಲಿ ತಾಲೂಕಿನಲ್ಲಿರುವ ಎಲ್ಲ ಅಂಗನವಾಡಿ ಹಾಗೂ ಆಶಾ ಕಾರ್ಯಕತರ್ೆಯರು ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಬಳಿಕ ತಹಶೀಲ್ದಾರ ಮೂಲಕ ಕೇಂದ್ರ ಸಕರ್ಾರಕ್ಕೆ ಮನವಿ ಸಲ್ಲಿಸಿದರು. ಪಟ್ಟಣದ ಸಿದ್ದೇಶ್ವರ ದೇವಸ್ಥಾನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯು ಹಳೇ ಪುರಸಭೆ, ಬಸ್ ನಿಲ್ದಾಣ ಬಳಿಸಿಕೊಂಡು ವಾಲ್ಮೀಕಿ ಸಮಾಜ ಹಳೇ ಮೆಣಸಿನಕಾಯಿ ಪೇಟೆಯಲ್ಲಿ ಸಂಚರಿಸಿ ರಾಣಿ ಚನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿಮರ್ಿಸಿ ಪ್ರತಿಭಟನೆ ನಡೆಸಿದರಲ್ಲದೇ, ಬಳಿಕ ತಹಶೀಲ್ದಾರ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಿದರು.

28 ಲಕ್ಷ ಅಂಗನವಾಡಿ ಕಾರ್ಯಕತರ್ೆಯರು ಮತ್ತು ಸಹಾಯಕಿಯರು ಬೀದಿಗೆ ಬರುವಂತಾಗಿದೆ ಬಡತನ, ನಿರುದ್ಯೋಗ ಬೆಲೆ ಏರಿಕೆ ಸ್ಥಿತಿಗತಿಗಳಿಗೆ ಹೊಂದಿಕೊಳ್ಳಲಾ ಗದೇ ಬದುಕು ನಶ್ವರ ಎನ್ನುವಷ್ಟರ ಮಟ್ಟಿಗೆ ಜಿಗುಪ್ಸೆ ಹೊಂದಲು ಕಾರಣವಾಗಿದ್ದು ಕೂಡಲೇ ಕೇಂದ್ರ ಹಾಗೂ ರಾಜ್ಯ ಸಕರ್ಾರಗಳು ನಮ್ಮ ಪ್ರಮುಖ ಬೇಡಿಕೆ ಯಾದ ಸಮಾನ ಕೆಲಸಕ್ಕ ಸಮಾನ ವೇತನ ನೀಡುವಂತೆ ಈಡೇರಿಸುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕತರ್ೆಯರ ತಾಲೂಕಾಧ್ಯಕ್ಷೆ ಹೇಮಾ ಅಸಾದಿ, ಮಹಾಂತೇಶ ಎಲಿ, ರಾಜೇಶ್ವರಿ ಹಿರೇಮಠ, ಜಿಲ್ಲಾ ಸಂಚಾಲಕ ವಿನಯ್ ಕುರುಬರ, ರತ್ನಾ ಕಲ್ಕಣಿ, ವಿನೋದಾ ಪಾಟೀಲ, ಮಲ್ಲಮ್ಮ ಪಾಟೀಲ, ಲೀಲಾವತಿ ಸಾತನವರ, ಶಾಂತಾ ಕೂನಬೇವು, ಪರಮೇಶ್ವರಿ ಮದ್ಯಾಹ್ನದ, ಲೀಲಾ ಆಲದಗೇರಿ, ಸುಧಾ ಅಂಗಡಿ, ಕವಿತಾ ನಾಡಿಗೇರ, ಶಕುಂತಲ ದಾನಣ್ಣನವರ, ಗೋಜಾ ನಾಯಕ್, ಮುತ್ತಕ್ಕ ಪೂಜಾರ, ಮಮತಾ ಯತ್ನಳ್ಳಿ, ಗಂಗಮಾಳವ್ವ ಆನವೇರಿ, ಮಲ್ಲಮ್ಮ ಛಲವಾದಿ, ರತ್ನ ಕಚವಿ, ಸುಮಿತ್ರ ಓಲೇಕಾರ, ಉಮಾ ಪಾಟೀಲ, ಸಾವಿತ್ರಿ ಮೂಡಿ, ಗಿರಿಜವ್ವ ಹುಬ್ಬಳ್ಳಿ, ಫಾತೀಮಾ ಹುಬ್ಬಳ್ಳಿ ಶಶಿಕಲಾ ಪುರಾಣಿಕಮಠ ಇನ್ನಿತರರು ಉಪಸ್ಥಿತರಿದ್ದರು.