ಆನೆಗೊಂದಿ ಉತ್ಸವ: ಸಿದ್ಧತೆಗಳು ಪೂರ್ಣAnegodi Festival: Preparations Full
Lokadrshan Daily
1/4/25, 3:23 AM ಪ್ರಕಟಿಸಲಾಗಿದೆ
ಕೊಪ್ಪಳ 08: ಕೊಪ್ಪಳ ಜಿಲ್ಲೆಯ ಐತಿಹಾಸಿಕ ಕ್ಷೇತ್ರವಾದ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಉತ್ಸವದ ಅಂಗವಾಗಿ ಜನವರಿ 9ಹಾಗೂ 10 ರಂದು ನಡೆಯಲಿರುವ ಆನೆಗೊಂದಿ ಉತ್ಸವದ ತಳವಾರಘಟ್ಟಕ್ಕೆ ತೆರಳುವ ಮಾರ್ಗದ ವಿಶಾಲ ಬಯಲಿನಲ್ಲಿ ಪ್ರಖ್ಯಾತ ಗಗನ ಮಹಲ್ನ ಪ್ರತಿರೂಪದಂತೆ ತಲೆ ಎತ್ತಿರುವ ಶ್ರೀ ಕೃಷ್ಣದೇವರಾಯ ಮುಖ್ಯ ವೇದಿಕೆ ವಿಜಯನಗರದ ಸಾಮ್ರಾಜ್ಯದ ಮಾತೃನೆಲದ ಭವ್ಯತೆ ಸಾರುವಂತಿದೆ. ಮುಖ್ಯ ವೇದಿಕೆ ಬಳಿ ಎಂಟು ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ.ಎಡಭಾಗದಲ್ಲಿ ಮಾಧ್ಯಮ ಕೇಂದ್ರ, ಸಕರ್ಾರದ ಯೋಜನೆ ಮತ್ತು ಸಾಧನೆಗಳನ್ನು ಪ್ರದಶರ್ಿಸುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಳಿಗೆ, ವಿವಿಧ ವಸ್ತು ಪ್ರದರ್ಶನ ಮಳಿಗೆಗಳನ್ನು ನಿಮರ್ಿಸಲಾಗಿದೆ. ಬೆಟ್ಟಗುಡ್ಡಗಳಿಗೆ ಆಕರ್ಷಕ ವಿದ್ಯುದ್ದೀಪಾಲಂಕಾರ ಮಾಡಲಾಗಿದ್ದು, ಕಲ್ಲುಗಳಿಗೆ ಜೀವಕಳೆ ಬಂದಿದೆ.
ಆನೆಗೊಂದಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶ್ರೀವಿದ್ಯಾರಣ್ಯ ವೇದಿಕೆಯೂ ಸಿದ್ಧವಾಗಿದೆ. ಕೊಪ್ಪಳ ಮತ್ತು ಗಂಗಾವತಿಯಿಂದ ಆನೆಗೊಂದಿಗೆ ತಲುಪುವ ಎಲ್ಲಾ ರಸ್ತೆಗಳನ್ನು ಸಿಂಗರಿಸಲಾಗಿದೆ. ಬಾನಂಗಳದಲ್ಲಿ ಹಾರಿ ಬಿಟ್ಟಿರುವ ಬಲೂನುಗಳು ಕಲಾಸಕ್ತರನ್ನು ವೈಭವರಿಂದ ಉತ್ಸವಕ್ಕೆ ಕೈಬೀಸಿ ಕರೆಯುತ್ತಿವೆ. ಐತಿಹಾಸಿಕ ಪಾರಂಪರಿಕ ಸ್ಮಾರಕಗಳಿಗೆ ತಳಿರು ತೋರಣ ಅಲಂಕಾರ ಮಾಡಲಾಗಿದ್ದು, ಸಹಜ ಕಳೆ ಪ್ರಾಪ್ತಿಯಾಗಿದೆ.
ಅಂತಿಮ ಹಂತದ ಸಿದ್ಧತೆಗಳನ್ನು ಇಂದು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ್, ಜಿಪಂ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ರಘುನಂದನ ಮೂತರ್ಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತ, ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್, ಗಂಗಾವತಿ ತಹಸೀಲ್ದಾರ ಚಂದ್ರಕಾಂತ ಮಾಲಗತ್ತಿ, ತಾ.ಪಂ ಕಾರ್ಯನಿವರ್ಾಹಕ ಅಧಿಕಾರಿ ಡಾ. ಮೋಹನ್, ಆಹಾರ ಇಲಾಖೆ ಉಪನಿದರ್ೇಶಕ ನಾರಾಯಣರೆಡ್ಡಿ ಕನಕರೆಡ್ಡಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸಿದ್ಧರಾಮೇಶ್ವರ, ನಿಮರ್ಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಶಶಿಧರ ಸೇರಿದಂತೆ ಮತ್ತಿತರರು ಪರಿಶೀಲಿಸಿದರು.