ಉಪರಾಷ್ಟ್ರಪತಿ ಭೇಟಿ ಮಾಡಿದ ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ

ನವದೆಹಲಿ  ಆಗಸ್ಟ್ 7   ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್ಮೋಹನ್ ರೆಡ್ಡಿ ಅವರು ಬುಧವಾರ ಬೆಳಗ್ಗೆ ಉಪರಾಷ್ಟ್ರಪತಿ  ಎಂ. ವೆಂಕಯ್ಯ ನಾಯ್ಡು ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. 

ಈ ಸಂದರ್ಭದಲ್ಲಿ  ವೈಎಸ್ಆರ್  ಕಾಂಗ್ರೆಸ್   ಸಂಸದರಾದ ವಿಜಯ ಸಾಯಿ ರೆಡ್ಡಿ, ವೆಮಿರೆಡ್ಡಿ ಪ್ರಭಾಕರ್ ರೆಡ್ಡಿ, ಅದಲಾ ಪ್ರಭಾಕರ್ ರೆಡ್ಡಿ, ನಂದಿಗಂ ಸುರೇಶ್ ಮತ್ತು ಬಾಲಾ ಶೌರಿ  ಉಪಸ್ಥಿತರಿದ್ದರು.  

ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ  ಅವರು  ನಿನ್ನೆ  ತಮ್ಮ ದೆಹಲಿ ಭೇಟಿಯ ಸಂದರ್ಭದಲ್ಲಿ  ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ  ಆಂಧ್ರಪ್ರದೇಶ ರಾಜ್ಯಕ್ಕೆ ವಿಶೇಷ ಸ್ಥಾನಮಾನ  ಕಲ್ಪಿಸಬೇಕೆಂದು ರಾಜ್ಯ ಪುನರ್ ವಿಂಗಡನಾ ಕಾಯ್ದೆ  13 ಪರಿಚ್ಛೇದದಲ್ಲಿ  ನೀಡಿರುವ ಭರವಸೆಯನ್ನು ಜಾರಿಗೊಳಿಸಬೇಕೆಂದು  ಮನವಿ ಮಾಡಿದರು  ಎಂದು ತಿಳಿದುಬಂದಿದೆ.    

ಮಂಗಳವಾರ ಸಂಸತ್ತಿನ  ಕಚೇರಿಯಲ್ಲಿ ಪ್ರಧಾನಿ   ಮೋದಿ  ಅವರನ್ನು ಸಂಜೆ  ಭೇಟಿ ಮಾಡಿದ್ದ  ಜಗನ್  ಸುಮಾರು  45 ನಿಮಿಷಗಳ ಕಾಲ ಮಾತುಕತೆ ನಡೆಸಿದರು, ರಾಜ್ಯದಲ್ಲಿ ಬಾಕಿ ಇರುವ ವಿವಿಧ ಯೋಜನೆಗಳ  ಮಂಜೂರಾತಿ ಸಂಬಂಧ  ಪ್ರಧಾನಿಗೆ  ಮನವಿ ಪತ್ರ ಸಲ್ಲಿಸಿದರು.