ಲೋಕದರ್ಶನ ವರದಿ
ಬೆಳಗಾವಿ 21: ಭಾರತದ ಪುರಾತನ ಸಂಸ್ಕೃತಿಯ ಪ್ರತಿಬಿಂಬಕವಾಗಿ ತನ್ನದೇ ಆದ ವೈಶಿಷ್ಠತೆಯೊಂದಿಗೆ ಸಮಸ್ತ ಮನುಕುಲದ ರಕ್ಷಣೆಗೆಂದೇ ಹುಟ್ಟಿಕೊಂಡಿರುವ ಯೋಗಾಭ್ಯಾಸವೂ ಇಂದು ಪ್ರಪಂಚದಾದ್ಯಂತ ಭಾರತದ ಸಂಸ್ಕೃತಿಯನ್ನು ಪ್ರಸಾರ ಮಾಡುವಲ್ಲಿ ಮಹತ್ವದ ಪಾತ್ರವಹಿಸಿದೆ ಎಂದು ಪ್ರಾಚಾರ್ಯ ಡಾ.ಆರ್.ಎಂ.ಪಾಟೀಲ ನುಡಿದರು.
ನಗರದ ಕೆ.ಎಲ್.ಇ. ಸಂಸ್ಥೆಯ ಲಿಂಗರಾಜ ಮಹಾವಿದ್ಯಾಲಯದಲ್ಲಿ 5ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ಯ ಆಯೋಜಿಸಿದ್ದ ಯೋಗ ಶಿಬಿರವನ್ನುದ್ದೇಶಿಸಿ ಅವರು ಮಾತನಾಡಿದರು. ಆರೋಗ್ಯವನ್ನು ಕಾಪಾಡುವಲ್ಲಿ ಯೋಗದ ಪಾತ್ರ ಅನನ್ಯವಾದದು. ಯೋಗದಿಂದ ಸದೃಢ ಆರೋಗ್ಯವನ್ನು ಹೊಂದಬಹುದು. ಯೋಗ ಇಂದು ಜಾಗತಿಕ ಮನ್ನಣೆ ಪಡೆದಿದೆ. ಯೋಗ ಕೇವಲ ದೈಹಿಕ ವ್ಯಾಯಾಮವಲ್ಲ, ಶರೀರ, ಬುದ್ಧಿ, ಮನಸ್ಸಿನ ಸಮತೋಲನ ಸಾಧಿಸುವ ಜೀವನ ಸಾಧನವಾಗಿದೆ. ಆದರಿಂದ ಪ್ರತಿಯೊಬ್ಬರು ಉತ್ತಮ ಆರೋಗ್ಯಕ್ಕಾಗಿ ಯೋಗವನ್ನು ಮಾಡಬೇಕು ಎಂದು ಹೇಳಿದರು.
ಕೆಎಲ್ಇ ಸಂಸ್ಥೆಯ ಆರ.ಎಲ್.ವಿಜ್ಞಾನ ಮಹಾವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿದರ್ೆಶಕರಾದ ರಿಚಾರಾವ್ ಅವರು ಯೋಗಶಿಬಿರವನ್ನು ನಡೆಸಿಕೊಟ್ಟರು. ಹಿರಿಯ ಪ್ರಾಧ್ಯಾಪಕರು ಹಾಗೂ ಎನ್.ಎಸ್.ಎಸ್. ಘಟಕದ ಸಂಯೋಜಕರಾದ ಪ್ರೊ.ಎಸ್.ಎನ್.ಮೂಲಿಮನಿ, ದೈಹಿಕ ಶಿಕ್ಷಣ ನಿದರ್ೆಶಕರಾದ ಪ್ರೊ.ಸಿ.ರಾಮಾರಾವ ಶಿಬಿರದಲ್ಲಿ ಉಪಸ್ಥಿತರಿದ್ದರು. ಮಹಾವಿದ್ಯಾಲಯದ, ಎನ್.ಎಸ್.ಎಸ್ ಹಾಗೂ ಎನ್.ಸಿ.ಸಿ ಘಟಕದ ವಿದ್ಯಾಥರ್ಿಗಳು ಮತ್ತು ಕ್ರೀಡಾಪಟುಗಳು ಹಾಗೂ ಮಹಾವಿದ್ಯಾಲಯದ ಎಲ್ಲ ಸಿಬ್ಬಂದಿ ಹಾಗೂ ವಿದ್ಯಾಥರ್ಿಗಳು ಶಿಬಿರದಲ್ಲಿ ಭಾಗವಹಿಸಿದ್ದರು.