ಅನಂತಪೂರ-ಕೊಕಳಾ ರಸ್ತೆ ಡಾಂಬರೀಕರಣಕ್ಕೆ ಚಾಲನೆ

ಲೋಕದರ್ಶನ ವರದಿ

ಸಂಬರಗಿ 27: 50 ವರ್ಷದಿಂದ ರಸ್ತೆ ದುರಸ್ತಿ ನೆನೆಗುದಿಗೆ ಬಿದ್ದಿದ್ದ ಅನಂತಪೂರ-ಕೊಕಳಾ 3 ಕಿ.ಮೀ ರಸ್ತೆ ಡಾಂಬರೀಕರಣ ಕಾಮಗಾರಿ ಈ ಭಾಗದ ಕಾಂಗ್ರೆಸ್ ಜಿ.ಪಂ ಸದಸ್ಯೆ ಮಾದುರಿ ಶಿಂಧೆ ಹಾಗೂ ಕಾಂಗ್ರೆಸ್ ಮುಖಂಡ ದಾದಾ ಶಿಂಧೆ ಇವರ ಪ್ರಯತ್ನದಿಂದ ಪ್ರಾರಂಭವಾಗಿದೆ. ಇದರಿಂದ ಅತ್ಯಂತ ಕಷ್ಟ ಪಡುತ್ತಿದ್ದ ವಾಹನ ಸವಾರರಿಗೆ, ಪ್ರಯಾಣಿಕರಿಗೆ ಅನುಕೂಲವಾಗಿದೆ. 

ಅನಂತಪೂರ-ಕೊಕಳಾ ರಸ್ತೆ ಗಡಿ ಭಾಗದಲ್ಲಿ ಇದ್ದು ಹಲವಾರು ಬಾರಿ ರಾಜಕೀಯ ಮುಖಂಡರ ಗಮನಕ್ಕೆ ತಂದರೂ ಸಹ ರಸ್ತೆಯಾಗಿರಲಿಲ್ಲ. ಅನಂತಪೂರ-ಕೊಕಳಾ ಮಾರ್ಗವಾಗಿ ಕವಟೆಮಹಾಂಕಾಳ ಮಹಾರಾಷ್ಟ್ರಕ್ಕೆ ಹೋಗಲು ರಸ್ತೆ ಅನುಕೂಲವಾಗಿದೆ. ಈ ಭಾಗದ ಜನರು ದಿನನಿತ್ಯ ತಮ್ಮ ಕೆಲಸಗಳಿಗಾಗಿ ಕವಟೆಮಹಾಂಕಾಳಕ್ಕೆ ಹೋಗುತ್ತಿದ್ದಾರೆ. ಕಾಡಾ ಯೋಜನೆಯಡಿಯಲ್ಲಿ ಒಂದು ಕೋಟಿ ರೂ. ಅನುದಾನ ಮಂಜೂರಾಗಿ ರಸ್ತೆ ಡಾಂಬರೀಕರಣದಿಂದ ಒಳ್ಳೆಯ ಗುಣಮಟ್ಟದಿಂದ ನಡೆಯುತ್ತಿದೆ. 

ಮಾಜಿ ತಾ.ಪಂ ಸದಸ್ಯ ಮಹಾಂತೇಶ ಸಾಲಿಮಠ, ರುದ್ರಗೌಡಾ ಪಾಟೀಲ, ಹುಸೇನ ಅತ್ತಾರ, ಇವರ ಸತತ ಪ್ರಯತ್ನದಿಂದ ಗಡಿ ಭಾಗದ ರಸ್ತೆಗಳು ಡಾಂಬರೀಕರಣ ಆಗುತ್ತಿವೆ. ಅನಂತಪೂರ-ಯಕ್ಕುಂಡಿ ರಸ್ತೆಯನ್ನು ಶೀಘ್ರದಲ್ಲಿ ಡಾಂಬರೀಕರಣ ಮಾಡಲಾಗುವದೆಂದು ದಾದಾ ಶಿಂಧೆ ಹೇಳಿದರು. 

ಫೋಟೋ ಶಿಷರ್ಿಕೆ: ಅನಂತಪೂರ-ಕೋಕಳಾ ರಸ್ತೆ ಡಾಂಬರೀಕರಣ ನಡೆಯುತಿರುವುದು