ಲೋಕದರ್ಶನ ವರದಿ
ಯಲ್ಲಾಪುರ,12: ತಾಲೂಕಾ ಹವ್ಯಕರ ಸಂಘ, ತಾಲೂಕಾ ಬ್ರಾಷ್ಮಣ ಪರಿಷತ್, ಅಡಕೆ ವರ್ತಕರ ಸಂಘ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತ ಆಶ್ರಯದಲ್ಲಿ ಕೇಂದ್ರ ಸಚಿವ ಬೆಂಗಳೂರಿನ ದಿ. ಎಚ್.ಎನ್.ಅನಂತಕುಮಾರ್ ಅವರ ಆತ್ಮಕ್ಕೆ ಶಾಂತಿ ಕೋರಿ ಪಟ್ಟಣದ ಏಪಿಎಂಸಿ ಆವಾರದ ಅಡಕೆ ಭವನದಲ್ಲಿ ಸೋಮವಾರ ಶ್ರದ್ಧಾಂಜಲಿ ಸಭೆ ನಡೆಯಿತು. ಈ ಸಭೆಯಲ್ಲಿ ಉಪಸ್ಥಿತರಿದ್ದ ಶಾಸಕ ಶಿವರಾಮ ಹೆಬ್ಬಾರ್ ಅವರು ದಿ.ಅನಂತಕುಮಾರ್ ಅವರ ಭಾವ ಚಿತ್ರಕ್ಕೆ ಪೂಜೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿ, ಅನಂತಕುಮಾರ್ ಅವರು ಒಬ್ಬ ಧೀಮಂತ ನಾಯಕರಾಗಿದ್ದರು. ಕ್ರಿಯಾ ಶೀಲ ನಾಯಕತ್ವ ಹಾಗೂ ಸ್ನೇಹಮಯೀ ವ್ಯಕ್ತಿತ್ವದಿಂದಾಗಿ ಜನರ ಪ್ರೀತಿಗೆ ಪಾತ್ರರಾಗಿದ್ದರು. ಅಕಾಲದಲ್ಲಿ ನಮ್ಮನ್ನೆಲ್ಲ ಅಗಲಿದ ಅನಂತಕುಮಾರ್ ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದರು. ಅವರೊಂದಿಗಿನ ತಮ್ಮ ಒಡನಾಟವನ್ನು ನೆನಪಿಸಿಕೊಂಡರು.
ಸಭೆಯಲ್ಲಿ ಉಪಸ್ಥಿತರಿದ್ದ ತಾಲೂಕಾ ಹವ್ಯಕಸಂಘದ ಅಧ್ಯಕ್ಷ ಡಿ.ಶಂಕರ ಭಟ್ಟ ಮಾತನಾಡಿ, ಕೇಂದ್ರ ಹಾಗೂ ರಾಜ್ಯದ ನಡುವೆ ಕೊಂಡಿಯಾಗಿ ಕಾರ್ಯನಿರ್ವಹಿಸಿ, ಮಾದರಿ ರಾಜಕಾರಣ ಮಾಡಿದ ಅನಂತಕುಮಾರ್ ಅವರ ಸಾಧನೆ ಅನನ್ಯವಾದದ್ದು ಎಂದರು. ಸಂಕಲ್ಪ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಭವಿಷ್ಯದಲ್ಲಿ ದೇಶದ ಪ್ರಧಾನಿ ಆಗುವ ಅರ್ಹತೆ ಉಳ್ಳ ಧೀಮಂತನಾಯಕ ಎಂದು ಅನೇಕರಿಂದ ಕರೆಸಿಕೊಂಡಿದ್ದ ದಿ. ಅನಂತ ಕುಮಾರ್ ಅವರ ಅಕಾಲಿಕ ನಿಧನ ದುಃಖ ತಂದಿದೆ ಎಂದರು. ಅಡಕೆ ವರ್ತಕರ ಸಂಘದ ಅಧ್ಯಕ್ಷ ಎಮ್.ಆರ್.ಹೆಗಡೆ ಕುಂಬ್ರಿಗುಡ್ಡೆ, ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಜಿ.ಎನ್.ಭಟ್ ತಟ್ಟಿಗದ್ದೆ. ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದಶರ್ಿ ನಾಗರಾಜ ಮದ್ಗುಣಿ ಪ್ರಮುಖರಾದ ಜಿ.ಎನ್.ಗಾಂವ್ಕಾರ್, ಟಿ,ಆರ್.ಹೆಗಡೆ, ಎಸ್.ಎನ್.ಭಟ್ಟ ಏಕಾನ್, ಮುಂತಾದವರು ಅನಂತಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಅಡಕೆ ವರ್ತಕರ ಸಂಘದ ನರಸಿಂಹಮೂತರ್ಿ ಭಟ್ಟ ಕೋಣೆಮನೆ, ಕಸಾಪ ಅಧ್ಯಕ್ಷ ವೇಣುಗೋಪಾಲ್ ಮದ್ಗುಣಿ ಮುಂತಾದವರು ಇದ್ದರು.