ಲೋಕದರ್ಶನ ವರದಿ
ಮುಧೋಳ 20: ಅನಂತಕುಮಾರ ಅವರು ಶ್ರೇಷ್ಠ ವಾಗ್ಮಿಗಳಾಗಿದ್ದರು, ಜಾತ್ಯಾತೀಯ, ಪಕ್ಷಾತೀತ ನಿಲುವು ಹೊಂದಿದ್ದ ಅವರು ಎಲ್ಲ ರಾಜಕೀಯ ಪಕ್ಷದ ಮುಖಂಡರ ಜೊತೆ ಅವಿನಾಭಾವ ಸಂಬಂಧ ಹೊಂದಿದ್ದರಿಂದಲೇ ಸರ್ವ ಜನಾಂಗದವರ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗಿದ್ದರು ಇವರ ನಿಧನದಿಂದಾಗಿ ರಾಜ್ಯ ಮತ್ತು ರಾಷ್ಟ್ರಕ್ಕೆ ತುಂಬಲಾದ ನಷ್ಟವಾಗಿದೆ ಎಂದು ಪ್ರಾಚಾರ್ಯ ಡಾ.ಎನ್.ಬಿ.ಇಂಗನಾಳ ಹೇಳಿದರು.
ಬಾಗಲಕೋಟ ಬಿವ್ಹಿವ್ಹಿ ಸಂಘದ ಸ್ಥಳೀಯ ಎಸ್.ಆರ್.ಕಂಠಿ ಕಾಲೇಜಿನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ಶ್ರೇಷ್ಠ ವಾಕಪಟುವಾಗಿದ್ದ ಅನಂತಕುಮಾರ ಅವರು ರಾಜ್ಯ ಮತ್ತು ರಾಷ್ಟ್ರ ಮಟ್ಟದ ನಾಯಕರ ಜೊತೆ ಉತ್ತಮ ಸಂಬಂಧ ಇರುವದರಿಂದಲೇ ರಾಜ್ಯದ ಹಲವಾರು ಬೇಡಿಕೆಗಳು ಈಡೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇಂದಿನ ಯುವ ಜನಾಂಗಕ್ಕೆ ಮಾದರಿಯಾಗಿದ್ದ ಅನಂತಕುಮಾರ ಅವರು ಬಾಗಲಕೋಟ ಬಸವೇಶ್ವರ ವಿದ್ಯಾವರ್ಧಕ ಸಂಘದ ಮೇಲೆ ಅಪಾರ ಗೌರವ ಮತ್ತು ಅಭಿಮಾನ ಹೊಂದಿದ್ದರು. ಬಿವ್ಹಿವ್ಹಿ ಸಂಘದ ಕಾಯರ್ಾಧ್ಯಕ್ಷರಾಗಿರುವ ಬಾಗಲಕೋಟ ಕ್ಷೇತ್ರದ ಶಾಸಕ ಡಾ. ವೀರಣ್ಣ ಚರಂತಿಮಠ ಅವರ ಜೊತೆ ಉತ್ತಮ ಒಡನಾಟ ಇತ್ತು, ಹೀಗಾಗಿ ಅನಂತಕುಮಾರ ಅವರು ಬಾಗಲಕೋಟ ಹಾಗೂ ಮುಧೋಳಕ್ಕೆ ಹಲವು ಸಲ ಬಂದಿರುವದನ್ನು ನೆನಪಿಸಿಕೊಂಡರು.
ಸಮಾಜ ಸುಧಾರಕರಾಗಿರುವ ಅನಂತಕುಮಾರ ಅವರ ನಿಧನದಿಂದ ಇಡೀ ನಾಡಿಗೆ ಮತ್ತು ರಾಷ್ಟ್ರಕ್ಕೆ ತುಂಬಲಾದ ನಷ್ಟವಾಗಿದೆ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲೆಂದು ತಾವು ಪ್ರಾಥರ್ಿಸುವದಾಗಿ ತಿಳಿಸಿದರು.
ದಿ.ಅನಂತಕುಮಾರ ಅವರ ಭಾವಚಿತ್ರಕ್ಕೆ ಹೂಮಾಲೆ ಹಾಕಿ, ಮೌನಾಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಪ್ರೊ.ಎ.ಜಿ.ಚಪ್ಪಳಗಾಂವ, ಪ್ರೊ.ಜಿ.ಕೆ.ಘೋರ್ಪಡೆ, ಪ್ರೊ.ಜಿ.ಬಿ.ಅನೆಪ್ಪನವರ, ಪ್ರೊ.ಎಸ್.ಎಸ್.ಬಿರಾದಾರ, ಡಾ.ಎಂ.ಆರ್.ಜರಕುಂಟಿ, ಪ್ರೊ.ಎ.ವ್ಹಿ.ಪತ್ತಾರ, ಪ್ರೊ.ಎ.ಎಚ್.ಹಿರೇ ಮಠ, ಪ್ರೊ.ವ್ಹಿ.ಎಸ್.ಮುನವಳ್ಳಿ, ಪ್ರೊ.ಬಿ.ಎಲ್.ಲಿಂಗರಡ್ಡಿ, ಪ್ರೊ.ಎಂ.ಎಚ್.ಜೋಗಿ, ಪ್ರೊ.ಐ.ಎಸ್.ಕಾಂತಿಮಠ ಸೇರಿದಂತೆ ಇತರರು ಇದ್ದರು.