ಧಾರವಾಡ, ಮೇ.21 : ಇಹದ ಬದುಕೆಲ್ಲವೂ ಖುಷಿಯಿಂದ ಕೂಡಿರುವಂತೆ, ಹಣತೆಯ ಬೆಳಕಿನಂತೆ ಬೆಳಗುವಂತೆ, ಎಲ್ಲರ ಮನೆ-ಮನಗಳಲ್ಲಿ ಸದಾ ನಗುವಿನ ಕ್ಷಣಗಳು ತುಂಬುವಂತೆ ಮಾಡುವ ಆನಂದವೇ ಬದುಕಿನ ಅಂತಿಮ ವೈಭವವಾಗಿದೆ ಎಂದು ವಿಜಯಪೂರ ಜ್ಞಾನ ಯೋಗಾಶ್ರಮದ ಶ್ರೀಸಿದ್ಧೇಶ್ವರ ಶ್ರೀಗಳು ಪ್ರತಿಪಾದಿಸಿದರು.
ನಗರದ ಸಂಪಿಗೆ ನಗರಕ್ಕೆ ಹೊಂದಿಕೊಂಡಿರುವ ಶ್ರೀಸಿದ್ಧೇಶ್ವರ ಬಡಾವಣೆಯಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ 35 ಸಾವಿರ ಚದುರ ಅಡಿ ವಿಸ್ತೀರ್ಣದಲ್ಲಿ ನಿಮರ್ಾಣಗೊಂಡಿರುವ ಬಿ.ಡಿ.ಪಾಟೀಲ ಸಮಾವೇಶ ಭವನವದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡುತ್ತಿದ್ದರು.
ನಯ, ವಿನಯ, ಮೈತ್ರಿ ಭಾವದ ಸಮಾಧಾನದ ನೆರಳಿನಲ್ಲಿ ಜನರ ಹೃದಯ ಗೆಲ್ಲಬೇಕು. ಆ ಮೂಲಕ ಎಲ್ಲರಿಗೂ ಹಿತವಾಗುವ ಉನ್ನತ ಕಾರ್ಯಗಳನ್ನು ಮಾಡಬೇಕು. ಅದನ್ನು ನೋಡಿ ಎಲ್ಲರೂ ಆನಂದ ಪಡಬೇಕು. ಈ ಆನಂದವೇ ನಿಜವಾದ ಸಂಪತ್ತು ಎಅಂದರು.
ಜಗತ್ತು ಸುಂದರವಾಗಿರುವಂತೆ, ಶಾಂತಿಯಿಂದ ಕೂಡಿರುವಂತೆ ಜೊತೆಗೆ ಅಲ್ಲಿ ಸತ್ಯ ವ್ಯಾಪಕವಾಗಿ ಹರಡುವಂತೆ ನಮ್ಮ ಶ್ರಮ ಕ್ರಿಯಾಶೀಲಗೊಂಡಾಗ ಸಾರ್ಥಕ ಬದುಕು ಪ್ರಾಪ್ತವಾಗುತ್ತದೆ. ಬಹುಕೋಟಿಗಳಲ್ಲಿ ಹಣವನ್ನು ಸಂಪಾದಿಸಿದರೇನು ಅದೆಲ್ಲವೂ ಒಂದು ದಿನ ಇಲ್ಲಿಯೇ ಉಳಿಯುವಂತಹದ್ದು, ಆದರೆ ಎಲ್ಲರೂ ಮೆಚ್ಚುವಂತೆ ಮಾಡುವ ಕೈಂಕರ್ಯಗಳ ಮೂಲಕ ಜನ ಸಂಪತ್ತು ನಮ್ಮದಾಗುತ್ತದೆ. ಜನರ ಹೃದಯ ಗೆಲ್ಲುವುದೇ ನಿಜವಾದ ಸಂಪಾದನೆಯಾಗಿದೆ. ಅದು ಶಾಶ್ವತವಾಗಿ ಉಳಿಯುತ್ತದೆ ಎಂದರು.
ಹಸಿರು ವನ : ಅತ್ಯಂತ ಸುಂದರವಾಗಿ ತೆಲೆ ಎತ್ತಿರುವ ಸಮಾವೇಶ ಭವನದ ಸುತ್ತ ಬಹಳ ವ್ಯವಸ್ಥಿತವಾದ ಒಂದು ಸುಂದರ ಹಸಿರು ವನವನ್ನು ನಿಮರ್ಿಸುವಲ್ಲಿ ಬಿ.ಡಿ.ಪಾಟೀಲ ಅವರು ತೀವ್ರ ಗಮನ ಹರಿಸಬೇಕು. ಕಣ್ಣಿಗೆ ತಂಪು ತುಂಬುವಲ್ಲಿ ಹಸಿರು ಬೇಕು ಎಂದು ಶ್ರೀಸಿದ್ಧೇಶ್ವರ ಶ್ರೀಗಳು ಸಲಹೆ ನೀಡಿದರು.
ಭವನ ಉದ್ಘಾಟಿಸಿದ ಮೈಸೂರಿನ ಸುತ್ತೂರುಮಠದ ಡಾ.ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳು ಮಾತನಾಡಿ, ಮನುಷ್ಯನ ಮನಸ್ಸು ಹಾಗೂ ಜೀವನ ಎಲ್ಲಿಯೂ ಸ್ವೇಚ್ಛಾಚಾರಕ್ಕೆ ಅವಕಾಶ ನೀಡದೇ ನಿಯಮಿತವಾದ ಸುಸಂಸ್ಕೃತವಾದ ದಾರಿಯಲ್ಲಿ ಎಲ್ಲರಿಗೂ ಒಪ್ಪುವ ಸಮಾಜಮುಖಿ ಚಿಂತನೆಯ ಕಾರ್ಯಗಳನ್ನು ಮಾಡಬೇಕು. ಭಾರತೀಯ ಸಂಸ್ಕೃತಿಯ ನೆರಳಿನಲ್ಲಿ ಮನುಷ್ಯ ಉನ್ನತ ಸಂಸ್ಕಾರ ಸಂಪನ್ನತೆಯನ್ನು ಮೈಗೂಡಿಸಿಕೊಂಡಾಗ ಒಂದು ಔನ್ನತ್ಯದ ಸಾರ್ವತ್ರಿಕ ಮುದ್ರೆ ಬೀಳುತ್ತದೆ.
ಬದುಕಿನಲ್ಲಿ ಸನ್ಯಾಸವೇ ಇರಲಿ ಇಲ್ಲವೇ ಗ್ರಹಸ್ಥರೇ ಆಗಿರಲಿ ತಮಗೆ ತಕ್ಕುದಾದ ನಿಯಮ ಬದ್ಧತೆಯನ್ನು ಹೊಂದಿದಾಗ ಅಲ್ಲಿ ಪವಿತ್ರವಾದ ಜೀವನ ವಿಧಾನ ಸಾಧ್ಯವಾಗುತ್ತದೆ. ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೊಂದಿರುವ ಧಾರವಾಡ ನಗರದಲ್ಲಿ ಬಹಳ ವಿಸ್ತೃತವಾಗಿ ತೆಲೆ ಎತ್ತಿರುವ ಬಿ.ಡಿ. ಪಾಟೀಲ ಸಮಾವೇಶ ಭವನ ಸಾರ್ಥಕ ಕ್ಷಣಗಳಿಗೆ ಸಾಕ್ಷಿಯಾಗಲಿ ಎಂದರು.
ಕೊಲ್ಲಾಪೂರ ಕನ್ನೇರಿ ಸಿದ್ಧಗಿರಿಮಠದ ಶ್ರೀಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ, ಧಾರವಾಡ ಮುರುಘಾಮಠದ ಶ್ರೀಮಲ್ಲಿಕಾಜರ್ುನ ಸ್ವಾಮೀಜಿ, ಗದಗ ಶಿವಾನಂದ ಮಠದ ಶ್ರೀಕೈವಲ್ಯಾನಂದ ಸ್ವಾಮೀಜಿ, ಬೆಳಗಾವಿ ರುದ್ರಾಕ್ಷಿಮಠದ ಡಾ.ಸಿದ್ಧರಾಮ ಸ್ವಾಮೀಜಿ, ವಿಜಯಪೂರ ಇಸ್ಲಾಂ ಧರ್ಮಗುರು ಡಾ.ಸಯ್ಯದ ಮುತರ್ುಜಾ ಹುಸೈನಿ ಹಾಷ್ಮಿ ಮುಂತಾದವರು ಸಹ ಸಾನ್ನಿಧ್ಯವಹಿಸಿದ್ದರು.
ಹಿರಿಯ ಸಾಹಿತಿ ಡಾ. ಗುರುಲಿಂಗ ಕಾಪಸೆ, ಮಾಜಿ ಸಂಸದ ಪ್ರೊ.ಐ.ಜಿ. ಸನದಿ, ವಿಧಾನ ಪರಿಷತ್ತಿನ ಮಾಜಿ ಸಭಾಪತಿಗಳಾದ ಡಾ.ವೀರಣ್ಣ ಮತ್ತಿಕಟ್ಟಿ ಹಾಗೂ ಬಸವರಾಜ ಹೊರಟ್ಟಿ, ಶಾಸಕರುಗಳಾದ ಅರವಿಂದ ಬೆಲ್ಲದ, ಆನಂದ ನ್ಯಾಮಗೌಡ (ಜಮಖಂಡಿ), ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಮಾಜಿ ಶಾಸಕರುಗಳಾದ ಚಂದ್ರಕಾಂತ ಬೆಲ್ಲದ, ಎ.ಬಿ.ದೇಸಾಯಿ, ಪಿ.ಸಿ.ಸಿದ್ಧನಗೌಡರ, ಎನ್.ಎಚ್. ಕೋನರಡ್ಡಿ, ಶಂಕರಣ್ಣ ಮುನವಳ್ಳಿ, ಪ್ರಕಾಶ ಕರೆಣ್ಣವರ, ಎಂ.ಕೆ.ಹೆಗಡೆ, ನಿವೃತ್ತ ಐ.ಪಿ.ಎಸ್. ಅಧಿಕಾರಿ ಕುಮಾರ ಕರನಿಂಗ್ ಗೋಕಾಕ, ಬಸವರಾಜ ಬಿಕ್ಕಣ್ಣವರ, ಎಸ್.ಎಂ.ತೂಗಶೆಟ್ಟಿ, ಡಾ. ಎ.ಎಸ್. ಯರಗುಪ್ಪಿ, ಡಾ.ಬಿ.ಬಿ.ಓಣಿ ಇದ್ದರು.
ನಿವೃತ್ತ ಡಿ.ವೈ.ಎಸ್.ಪಿ. ಬಿ.ಡಿ. ಪಾಟೀಲ ಸ್ವಾಗತಿಸಿದರು. ನ್ಯಾಯವಾದಿ ಬಸವಪ್ರಭು ಹೊಸಕೇರಿ ಹಾಗೂ ಡಾ. ವೈ.ಪಿ. ಕಲ್ಲನಗೌಡರ ನಿರೂಪಿಸಿದರು. ವಿಕ್ರಮ ಪಾಟೀಲ ವಂದಿಸಿದರು. ಒಟ್ಟು 35 ಸಾವಿರ ಚದುರ ಅಡಿ ವಿಸ್ತೀರ್ಣವನ್ನು ಹೊಂದಿರುವ ಈ ನೂತನ ಭವನದಲ್ಲಿ 10500 ಚದುರ ಅಡಿಯ ವಿಶಾಲ ಸಭಾ ಭವನ, 900 ಚದುರ ಅಡಿ ವಿಸ್ತೀರ್ಣದ ವೇದಿಕೆ, 10 ಸಾವಿರ ಚದುರ ಅಡಿಯ ಭೋಜನ ಶಾಲೆ, 22 ಹವಾನಿಯಂತ್ರಿತ ಕೊಠಡಿಗಳ ಸೌಲಭ್ಯವನ್ನು ಕಲ್ಪಿಸಲಾಗಿದೆ. ಜೊತೆಗೆ 40 ಸಾವಿರ ಚದುರ ಅಡಿ ವಿಸ್ತೀರ್ಣದಲ್ಲಿ ವಾಹನ ನಿಲುಗಡೆಗೆ ಅವಕಾಶವಿದೆ.