ಮುಂಬೈ,
ಏ ೧೯, ಎಲ್ಗಾರ್ ಪರಿಷತ್ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ
ಎದುರಿಸುತ್ತಿರುವ ದಲಿತ ಕವಿ ಹಾಗೂ ಮಾನವಹಕ್ಕುಗಳ ಹೋರಾಟಗಾರ ಆನಂದ್ ತೇಲ್ತುಂಬ್ಡೆ
ಅವರ ಪೊಲೀಸ್ ಕಸ್ಟಡಿಯನ್ನು ವಿಶೇಷ ನ್ಯಾಯಾಲಯ ಈ ತಿಂಗಳ ೨೫ ರವರೆಗೆ ವಿಸ್ತರಿಸಿದೆ. ಸುಪ್ರೀಂ
ಕೋರ್ಟ್ ಆದೇಶದ ಮೇರೆಗೆ ಅವರು ಈ ತಿಂಗಳ ೧೪ ರಂದು ರಾಷ್ಟ್ರೀಯ ತನಿಖಾ ಸಂಸ್ಥೆ
(ಎನ್‌ಐಎ) ಮುಂದೆ ಶರಣಾಗಿದ್ದರು. ಆದೇ ದಿನ ಅವರನ್ನು ವಿಶೇಷ ನ್ಯಾಯಾಲಯದ
ಮುಂದೆ ಹಾಜರುಪಡಿಸಿದ್ದಾಗ, ಈ ತಿಂಗಳ ೧೮ ರವರೆಗೆ ಎನ್ ಐ ಎ ಕಸ್ಟಡಿಗೆ ವಹಿಸಿ ಆದೇಶಿಸಿತ್ತು. ಈ ಗಡುವು ಮುಗಿದ ಹಿನ್ನಲೆಯಲ್ಲಿ ಶನಿವಾರ ಮತ್ತೆ ಅವರನ್ನು ವಿಶೇಷ
ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಆನಂದ್ ತೇಲ್ತುಂಬ್ಡೆ ಸಂವಿಧಾನ
ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಮೊಮ್ಮಗ.