ಯವ ಜನ ಮೇಳಕ್ಕೆ ಪ್ರತಿನಿಧಿಗಳಿಗೆ ನೀಡಿದ ಆಹ್ವಾನ: ಖಂಡನೆ

ಲೋಕದರ್ಶನ ವರದಿ

ಗದಗ 14: ಜಿಲ್ಲಾ ಪಂಚಾಯತ ಗದಗ, ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಗದಗ, ತಾಲ್ಲೂಕು ಪಂಚಾಯತ ರೋಣ, ಪುರಸಭೆ ಗಜೇಂದ್ರಗಡ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಯುವ ಜನ ಮೇಳ ಗಜೇಂದ್ರಗಡ ನಗರದಲ್ಲಿ ನಡೆಯುತ್ತಿರುವುದು ಸ್ವಾಗತಾರ್ಹ ಆದರೆ ಈ ಕಾರ್ಯಕ್ರಮಕ್ಕೆ ಸ್ಥಳೀಯ ಚುನಾಯಿತ ಪ್ರತಿನಿಧಿಗಳನ್ನು ಆಹ್ವಾನಿಸದೆ ಹಾಗೂ ಕಾಂಗ್ರೆಸ್ ಪಕ್ಷದ ಚುನಾಯಿತ ಪ್ರತಿನಿಧಿಗಳಿಗೆ ಆಮಂತ್ರಣ ಪತ್ರಿಕೆ ನೀಡದಿರುವುದು ಅಧಿಕಾರಿ ವರ್ಗದ ಕರ್ತವ್ಯ ಲೋಪವಾಗಿದೆ. 

ಚುನಾಯಿತ ಪ್ರತಿನಿಧಿಗಳಿಗೆ ಆಮಂತ್ರಣ ಪತ್ರಿಕೆಯನ್ನು ನೀಡಬೇಕೆನ್ನುವ ಸೌಜನ್ಯ, ಸಂಸ್ಕಾರ ಅಧಿಕಾರಿ ವರ್ಗಕ್ಕೆ ಇಲ್ಲವೆನ್ನವುದಾದರೆ ಅವರು ಮಾಡುವ ಕಾರ್ಯಕ್ಕೆ ಇದೊಂದು ಕನ್ನಡಿ. 

ಸ್ಥಳೀಯ ಚುನಾಯಿತ ಪ್ರತಿನಿಧಿಗಳನ್ನು ಆಮಂತ್ರಿಸುವ ಸೌಜನ್ಯವಿಲ್ಲದ ಅಧಿಕಾರಿಗಳು ಕೆಲವರು ಕೈಗೊಂಬೆಯಾಗಿ ಕೆಲಸ ಮಾಡಿತ್ತಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ.  ಸ್ಥಳೀಯ ಚುನಾಯಿತ ಪ್ರತಿನಿಧಿಗಳಿಗೆ ಆಮಂತ್ರಣ ಪತ್ರಿಕೆ ನೀಡಬೇಕಾಗಿರುವುದು ಆಮಂತ್ರಣ ಪತ್ರಿಕೆ ವಿತರಣಾ ಸಮಿತಿಯ ಕಾರ್ಯ ಸಮಿತಿಯಲ್ಲಿನ ಅಧಿಕಾರಿ ವರ್ಗ ಪ್ರತಿನಿಧಿಗಳಿಗೆ ಆಮಂತ್ರಣವನ್ನು ನೀಡಿದೆ ಇರುವ ಕುರಿತು ಜಿಲ್ಲಾಧಿಕಾರಿಗಳು ವಿಚಾರಿಸಿ ಅವರ ಮೇಲೆ ಶಿಸ್ತಿನ ಕ್ರಮ ಕೈಗೊಂಡ ಬಗ್ಗೆ ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಬೇಕೆಂದು ಶಿವರಾಜ ಘೋರ್ಪಡೆ ಒತ್ತಾಯಿಸಿದ್ದಾರೆ. 

ಸ್ಥಳೀಯ ಕಾಂಗ್ರೆಸ್ ಕಾರ್ಯಲಯದಲ್ಲಿ ಪ್ರೇಸ್ ಮೀಟ್ ಮಾಡಿ ಅವರು ಮಾತನಾಡುತ್ತಾ ಅಧಿಕಾರಿ ವರ್ಗ ಯಾರೋಬ್ಬರ ಕೈಗೊಂಬೆಯಾದರೆ ಈ ರೀತಿಯ ಲೋಪಗಳು ಆಗುತ್ತವೆ. ಸಂಬಂಧಿಸಿದವರು ಎಚ್ಚರವಹಿಸದಿದ್ದರೆ ಹಿಗಾಗುತ್ತದೆ. ಸ್ಥಳೀಯವಾಗಿ ನಡೆಯುವ ರಾಜ್ಯ ಮಟ್ಟದ ಯುವಜನ ಮೇಳ ನಮ್ಮೂರಿನಲ್ಲಿ ನಡೆಯುತ್ತಿವುದು ಎಲ್ಲರಿಗೂ ಸಂತಸ ತಂದಿದೆ. ಆದರೆ ಈ ಕುರಿತು ಕೆಲ ಶಾಲೆ-ಕಾಲೇಜುಗಳಿಗೆ, ಯುವಕ ಮಂಡಳಿಗಳಿಗೆ, ಕಲಾತಂಡಗಳಿಗೆ, ಕಲಾವಿಧರಿಗೆ, ಸಾಹಿತ್ಯಾಸಕ್ತರಿಗೆ ಆಮಂತ್ರಿಕೆಗಳು ಮುಟ್ಟದೆ ಏಕಪಕ್ಷೀಯವಾಗಿ ಆಮಂತ್ರಣ ಪತ್ರಿಕೆಯನ್ನ ನೀಡಿರುವುದು ಕರ್ತವ್ಯಲೋಪವಾಗಿದ್ದು ಇನ್ನೂ ಯುವ ಜನ ಮೇಳ ಎಷ್ಟರ ಮಟ್ಟಿಗೆ ಯಶಸ್ವಿಯಾಗಲು ಸಾಧ್ಯ ಎಂದು ಅವರು ಪ್ರಶಿಸಿದರು. 

ಈ ಸಂದರ್ಭದಲ್ಲಿ (ರಾಜೇಸಾಬ)ರಾಜು ಅಮೀನಸಾಬ  ಸಾಂಗ್ಲಿಕರ, ವೆಂಕಟೇಶ ಕರಿಯಪ್ಪ ಮುದಗಲ್ಲ್, ಮುತರ್ುಜಾ ಎಂ ಡಾಲಾಯತ್, ಸವಿತಾ ಶ್ರೀಧರ ಬಿದರಳ್ಳಿ, ಅನೀಲ್ ( ಪ್ರವೀಣ್) ಕಣರ್ೆ, ಅಸನಸಾಬ ತಟಗಾರ, ಪ್ರಶಾಂತ ರಾಠೋಡ, ಶರಣು ಪೂಜಾರ, ಈಶ್ವರ ದೊಡ್ಡಮನಿ, ವಿರೇಶ ಗಡಾದ, ದಾದು ಹಣಗಿ, ಶ್ರೀಧರ ಗಂಜಿಗೌಡ್ರ ಸೇರಿದಂತೆ ಕಾಂಗ್ರೆಸ್ ಪ್ರಮುಖರು ಉಪಸ್ಥಿತರಿದ್ದರು.