ಸರ್ವಧರ್ಮ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ
ಇಂಡಿ 09: ಪಟ್ಟಣದ ಆರಾದ್ಯ ಸದ್ಗುರು ಶಾಂತೇಶ್ವರ ದೇವರ ಜಾತ್ರೆಯ ಅಂಗವಾಗಿ ಶಾಂತೇಶ್ವರ ದೇವಾಸ್ಥಾನದ ಆವರಣದಲ್ಲಿ ಜರುಗಿದ ಸರ್ವಧರ್ಮ ಸರಳ ಸಾಮೂಹಿಕ 12 ಜೋಡಿಗಳ ವಿವಾಹ ಕಾರ್ಯಕ್ರಮನ್ನು ಕಾಶಿ ಪೀಠದ 1008 ಶ್ರೀ ಶ್ರೀ ಶ್ರೀ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದ ಅವರು.
ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನವ ದಂಪತಿಗಳಿಗೆ ಶುಭ ಹಾರೈಸಿ ಸಮಾಜದಲ್ಲಿ ಆಡಂಬರದ ಮದುವೆಗಳು ಕಡಿಮೆಯಾದರೆ ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಸಾಮೂಹಿಕ ವಿವಾಹದಲ್ಲಿ ಮದುವೆಯಾದ ದಂಪತಿ ಅನೋನ್ಯವಾಗಿ ಬಾಳುವ ಮೂಲಕ ಈ ಕಾರ್ಯಕ್ರಮದ ಉದ್ದೇಶವನ್ನು ಸಾರ್ಥಕಪಡಿಸಬೇಕಿದೆ ಇಂಡಿ ತಾಲೂಕು ಭಕ್ತಿಯಿಂದ ಪ್ರಸಿದ್ಧಿ ಪಡೆದ ನಾಡವಾಗಿದೆ, ಇಲ್ಲಿ ಜನರು ದೊಡ್ಡದಾದ ಹೃದಯವಂತಿಕೆಯನ್ನು ಹೊಂದಿರುವ ಜನರು ಇಂಡಿ ತಾಲ್ಲೂಕಿನ ಜನರು ಎಂದರೇ ತಪ್ಪಾಗಲಾರದು, ಸನಾತನ ವೀರಶೈವ ಧರ್ಮ ಅತಿ ಅಂತ್ಯ ದೊಡ್ಡದ್ದಾ ಸಂಸ್ಕಾರವನ್ನು ಉಳ್ಳ ಧರ್ಮವಾಗಿದೆ ಎಂದ ಅವರು ಇಂಡಿ ನಗರದ ಬಿಜೆಪಿ ಮುಖಂಡರಾದ ಕಾಸುಗೌಡ ಬಿರಾದಾರ ಅವರು ವಿಶಾಲ ಮನೋಭಾವ ಉಳ್ಳ ವ್ಯೆಕ್ತಿಯಾಗಿದ್ದಾರೆ, ಅವರು ಸಾಕಷ್ಟು ಶ್ರೀಮಂತರಾಗಿದ್ದರೂ ಕೂಡಾ ತಮ್ಮ ಮಗಳ ಮದುವೆಯನ್ನು ಸರಳವಾಗಿ ಸಾಮೂಹಿಕ ವಿವಾಹ ಮಾಡಿ ಕೊಡುವುದರ ಮೂಲಕ ನಾಡಿಗೆ ಮಾದರಿ ಆಗಿದ್ದಾರೆ ಅವರ ಈ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.
ನಂತರ ಮಾತನಾಡಿದ ಬಿಜೆಪಿ ಮುಖಂಡರಾದ ಕಾಸುಗೌಡ ಬಿರಾದಾರ ಅವರು ಮಾತನಾಡಿ ನನಗೆ ಸದ್ಗುರು ಶಾಂತೇಶ್ವರ ದೇವರು ಆಸ್ತಿ ಅಂತಸ್ತು ಕೊಟ್ಟಿದ್ದರು ಕೂಡಾ ನಾನು ನನ್ನ ಮಗಳ ಮದುವೆಯ ಜೊತೆ ಹನ್ನೊಂದು ಜೋಡಿ ವದು -ವರ ಜೊತೆ ಮದುವೆ ಮಾಡಿದ್ದು ನನಗೆ ತುಂಬಾ ಖುಷಿ ಆಗಿದೆ.ಇಂದು ಮದುವೆ ಆದ ಎಲ್ಲಾ ವದು -ವರರೂ ಕೂಡಾ ನನ್ನ ಮಕ್ಕಳಿದ್ದ ಹಾಗೆ ಎಂದು ಹೇಳಿದರು.ಈ ಸಂದರ್ಭದಲ್ಲಿ ನಾಗಣಸೂರದ ಶ್ರೀಕಂಠ ಶಿವಾಚಾರ್ಯರು, ತಡವಲಗಾದ ಅಭಿನವ ರಾಚೋಟೇಶ್ವರ, ಹತ್ತಹಳ್ಳಿಯ ಗುರುಪಾದೇವಶ್ವರ ಶಿವಾಚಾರ್ಯರು, ಶಿರಶ್ಯಾಡ ಅಭಿನವ ಮುರುಘೇಂದ್ರ ಶಿವಾಚಾರ್ಯರು,ಜೆಡಿಎಸ್ ಮುಖಂಡರಾದ ಬಿ ಡಿ ಪಾಟೀಲ, ಕಾಂಗ್ರೆಸ್ ಮುಖಂಡರಾದ ಜಾವೀದ್ ಮೋಮಿನ್ ಸೇರಿದಂತೆ ಅನೇಕರು ಮಾತನಾಡಿದರು.
ಈ ಸಂದರ್ಭದಲ್ಲಿ ಜೈನಾಪುರದ ರೇಣುಕಾ ಶಿವಾಚಾರ್ಯರು, ಖ್ಯಾತ ಪುರಾಣಿಕರಾದ ಶಿವಾನಂದಯ್ಯ ಶಾಸ್ತ್ರಿಗಳು ಹಿರೇಮಠ ತಡವಲಗಾ,ಗೋಳಸಾರದ ಅಭಿನವ ಪುಂಡಲಿಂಗ ಪೂಜ್ಯರು, ಅಥರ್ಗಾ ಮುರುಘೇಂದ್ರ ಪೂಜ್ಯರು,ಪುರಸಭೆ ಅಧ್ಯಕ್ಷರಾದ ನಿಂಬಾಜೀ ರಾಠೋಡ,ಅನೀಲ ಪ್ರಸಾದ ಏಳಗಿ,ಮಲ್ಲಿಕಾರ್ಜುನ ಕಿವಡೆ,ಅನೀಲ ಜಮಾದಾರ, ರವಿಕಾಂತ ಬಗಲಿ, ರವಿ ಖಾನಾಪುರ, ಮಲ್ಲು ದೇವರ,ಜಗದೀಶ ಕ್ಷೇತ್ರಿ,ದೇವಿಂದ್ರ ಕುಂಬಾರ,ಬಾಳು ಮುಳಜಿ,ವಿ ಎಚ್ ಬಿರಾದಾರ,ಅಶೋಕಗೌಡ ಬಿರಾದಾರ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.