ಬೆಳಗಾವಿ: ಬದಲಾದ ಜೀವನ ಶೈಲಿಯಿಂದ ಸಮಸ್ಯೆಗಳ ಹೆಚ್ಚಳ

ಲೋಕದರ್ಶನ ವರದಿ

ಬೆಳಗಾವಿ 21: ಮಹಿಳಾ ಕಲ್ಯಾಣ ಸಂಸ್ಥೆಯ ನಮ್ಮೂರ ಬಾನುಲಿ ಸಮುದಾಯ ರೇಡಿಯೋ ಕೇಂದ್ರವು 5 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ನಿಮಿತ್ಯ ಫೋನ್ ಇನ್ ಕಾರ್ಯಕ್ರಮವನ್ನು ಬೆಳಗಾವಿಯ ಭಾರತ ಕಾಲನಿ ಸಂಸ್ಥೆಯ ಕೇಂದ್ರದಲ್ಲಿ ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ರಾಷ್ಟ್ರ ಮಠದ ಯೋಗ ಗುರು ನಾಡಿಶಾಸ್ತ್ರಜ್ಞ ಡಾ. ಸಂಗಮೇಶ ಸವದತ್ತಿಮಠರವರು ಭಾಗವಹಿಸಿ ಜಿಲ್ಲೆಯ ವಿವಿಧ ಭಾಗಗಳಿಂದ ಕೇಳುಗರ ಅನೇಕ ಪ್ರಶ್ನೆಗಳಿಗೆ ಉತ್ತರಿಸಿದರು. ಬಹುತೇಕ ಪ್ರಶ್ನೆಗಳು ಆರೋಗ್ಯ ಸಮಸ್ಯೆಗಳಿಗೆ ಯೋಗದ ಮೂಲಕ ಪರಿಹಾರ ಕಂಡುಕೊಳ್ಳುವ ಕುರಿತವುಗಳಾಗಿದ್ದವು. ಸಾಮಾನ್ಯವಾಗಿ ಕಂಡುಬರುತ್ತಿರುವ ರಕ್ತದೊತ್ತಡ, ಸಕ್ಕರೆ ಖಾಯಿಲೆ, ಪೀತ್ತ್, ಮಲಬಧ್ದತೆ, ಹೃದಯವಿಕಾರಗಳು ಮುಂತಾದ ಸಮಸ್ಯೆಗಳಿಗೆ ಯೋಗದ ಮೂಲಕ ಪರಿಹಾರ ಉತ್ತರಿಸಿದರು.                                                                                                                                      ಆಧುನಿಕ ಯುಗದಲ್ಲಿ ಆಧುನಿಕ ಸಮಾಜದಲ್ಲಿ ಮಾನವನು ಜೀವನ ಶೈಲಿಯ ಬದಲಾವಣೆಯಿಂದಾಗಿ ಹಲವಾರು ಖಾಯಿಲೆಗಳಿಗೆ ತುತ್ತಾಗಿ ಆರೋಗ್ಯ ಮತ್ತು ಆಯಷ್ಯು ಅತಂತ್ರವಾಗುತ್ತಿದೆ. ಯೊಗ, ಜ್ಞಾನ ಆಯರ್ುವೇದ ಮತ್ತು ನಿಸರ್ಗ ಚಿಕಿತ್ಸೆ ಮೂಲಕ ಅನೇಕ ಖಾಯಿಲೆಗಳನ್ನು ಗುಣಪಡಿಸಬಹುದೆಂದ್ದರು. ನಿರೂಪಕಿ ಕವಿತಾ ಅಕ್ಕಿ ಸ್ವಾಗತಿಸಿ ಕಾರ್ಯಕ್ರಮ ನಡೆಸಿಕೊಟ್ಟರು. ಸಂಸ್ಥೆಯ ಗೌರವ ಕಾರ್ಯದಶರ್ಿ ವೈಜಯಂತಿ ಚೌಗಲಾ, ಎಂ ಎಸ್. ಚೌಗಲಾ, ಕಾರ್ಯಕ್ರಮದ ಸಂಯೋಜಕ ಸಂತೊಷ ಬಡಿಗೇರ ಹಾಗೂ ಅಕ್ಷಯ ಘೋರ್ಪಡೆ ಉಪಸ್ಥಿತರಿದ್ದರು.