ಲೋಕದರ್ಶನ ವರದಿ
ಯಮಕನಮರಡಿ: ಉತ್ತರ ಕರ್ನಾಟಕದ ಅಭಿವೃದ್ಧಿಯು ಕೇವಲ ಭಾಷಣದಿಂದ ಮಾತ್ರ ಸಾಧ್ಯವಿಲ್ಲ. ಶಾಸಕ ಸತೀಶ ಜಾರಕಿಹೊಳಿಯವರು ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಬೆಳಕಿಗೆ ತರಲುಸತೀಶ ಪ್ರತಿಭಾ ಪುರಸ್ಕಾರದಂತಹ ವೇದಿಕೆಗಳನ್ನು ಕಲ್ಪಿಸಿಕೊಡುವುದರಿಂದ ಉತ್ತರ ಕರ್ನಾಟಕದ ಅಭಿವೃದ್ಧಿಯಾಗುವುದುಎಂದು ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಅವರು ದಿ 14 ರಂದು ಯಮಕನಮರಡಿಯಲ್ಲಿ ನಡೆದ 9 ನೇ ಸತೀಶ ಪ್ರತಿಭಾ ಪುರಸ್ಕಾರದಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು. ಈ ವೇದಿಕೆ ಮೂಲಕ ಉತ್ತರಕನರ್ಾಟಕದ ಹೆಚ್ಚು ಪ್ರತಿಭೆಗಳು ರಾಷ್ಟ್ರಮಟ್ಟಕ್ಕೆ ಪರಿಚಯವಾಗುತ್ತಿದ್ದಾರೆ. ಶಾಸಕರು ಮಕ್ಕಳ ಮನಸ್ಸಿನಲ್ಲಿ ನಾಯಕರಾಗಿ ಬೆಳೆಯುತ್ತಿದ್ದಾರೆ ಎಂದು ಶ್ರೀಗಳು ಹೇಳಿದರು.
ಚಿಕ್ಕೋಡಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿದರ್ೇಶಕ ಮೋಹನ ಕುಮಾರ ಹಂಚಾಟೆ ಮಾತನಾಡಿ ಸಾಂಸ್ಕೃತಿಕ ಜಗತ್ತಿಗೆ ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸುತ್ತಿರುವ ಕಾರ್ಯ ಶ್ಲಾಘನೀಯವಾದದು ಎಂದರು. ಇನ್ನೋರ್ವ ಶ್ರೀಗಳಾದ ಹತ್ತರಗಿಕಾರೀಮಠದ ಗುರುಸಿದ್ದೇಶ್ವರ ಮಹಾಸ್ವಾಮಿಗಳು ಮಾತನಾಡಿ ಇಂದು ಮೊಬೈಲ, ವಾಟ್ಸಾಪ್ಗಳಲ್ಲಿ ಜನಪರ ಕಲೆಗಳು ಮೂಡಿ ಬರುತ್ತಿದ್ದರು. ಅವುಗಳ ಬಗ್ಗೆ ನಿರ್ಲಕ್ಷ್ಯ ಮಾಡುತ್ತಿದ್ದೇವೆ. ಈ ವೇದಿಕೆಯುಗ್ರಾಮೀಣ ಭಾಗದಲ್ಲಿ ಪ್ರತಿಭೆಗಳನ್ನು ಪರಿಚಯಿಸುವ ಕೇಂದ್ರ ಬಿಂದು ಆಗಿದೆ ಎಂದರು. ಕಾರ್ಯಕ್ರಮದಲ್ಲಿ ಹುಕ್ಕೇರಿಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ ದಂಡಿ, ಹುಕ್ಕೇರಿತಾ.ಪಂ ಅಧ್ಯಕ್ಷದಸ್ತಗೀರ ಬಸ್ಸಾಪೂರಿ, ತಾ.ಪಂ ಸದಸ್ಯೆ ಸುನೀತಾ ಬಿಸಿರೊಟ್ಟಿ, ಹತ್ತರಗಿಗ್ರಾ.ಪಂ ಅಧ್ಯಕ್ಷ ಮಹಾದೇವ ಪಟೋಳಿ, ಯಮಕನಮರಡಿ ಗ್ರಾ.ಪಂ ಅಧ್ಯಕ್ಷೆ ಅವಕ್ಕಾ ಮಾದರ, ಎಸ.ವಿ.ರಾಮಗಾನಟ್ಟಿ, ರವೀಂದ್ರ ಜಿಂಡ್ರಾಳಿ, ಕಿರಣರಜಪೂತ ಮೊದಲಾದವರು ಇದ್ದರು. ಕಳೆದ ಸಾಲಿನ 8 ನೇ ಸತೀಶ ಪ್ರತಿಭಾ ಪುರಸ್ಕಾರದ ಭಾಷಣ ಸ್ಪಧರ್ೆಯಲ್ಲಿ ವಿಜೇತರಾದ ಶ್ವೇತಾಇನಾಮದಾರ ಹಾಗೂ ಶ್ರೇಯಾಜನಾಜ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಿಕ್ಷಕ ಎ.ಜಿ.ಕೊಳಿ ಸ್ವಾಗತಿಸಿದರು.