ನವದೆಹಲಿ, ಜ 29 ದೆಹಲಿಯ ಐತಿಹಾಸಿಕ ವಿಜಯ್ ಚೌಕ್‌ನಲ್ಲಿ ನಾಲ್ಕುದಿನಗಳ ಗಣರಾಜ್ಯೋತ್ಸವ ಸಂಭ್ರಮದ ಸಮಾರೋಪದ ಹಿನ್ನೆಲೆಯಲ್ಲಿ ಬೀಟಿಂಗ್ ರಿಟ್ರೇಟ್ ಸಮಾರಂಭ ನಡೆಯಲಿದೆ.ಈ ಬಾರಿಯ ಬೀಟಿಂಗ್ ರಿಟ್ರೇಟ್ ಸಮಾರಂಭದಲ್ಲಿ ಇದೇ ಮೊದಲ ಬಾರಿಗೆ ಸೇನಾ ಬ್ಯಾಂಡ್ ತಂಡಗಳು ವಂದೇ ಮಾತರಂ ಗೀತೆ ನುಡಿಸುವ ಸಂಭವವಿದೆ ಎನ್ನಲಾಗಿದೆ. ವರ್ಣ ರಂಜಿತ ಸಮಾರಂಭಕ್ಕೆ ಎಲ್ಲಾ ರೀತಿಯ ಸಿದ್ಧತೆಗಳು ಪೂರ್ಣಗೊಂಡಿವೆ.
ಸೇನಾ ಪಡೆಯ ಮೈಮನಸೂರೆಗೊಳ್ಳುವ ಸೇನಾಪಡೆಗಳ ಬ್ಯಾಂಡ್ ವಾದ್ಯ, ಸೇನಾಪಡೆಗಳ ಪಥಸಂಚಲನ ಸೇರಿ 24 ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ೧೫ ಮಿಲಿಟರಿ ಬ್ಯಾಂಡ್ಸ್, ೧೬ ಪೈಪ್ ಮತ್ತು ಡ್ರಮ್ಸ್ , ರಿಜಿಮೆಂಟ್, ಬೆಟಾಲಿಯನ್ ತಂಡಗಳಿಂದ ಡ್ರಮ್ಸ್ ವಾದ್ಯ ಗಮನಸೆಳೆಯಲಿದೆ. ಬೀಟಿಂಗ್ ರಿಟ್ರೇಟ್ ದೇಶದ ಹೆಮ್ಮೆಯ ಕಾರ್ಯಕ್ರಮವಾಗಿದ್ದು, ೧೯೫೦ರಲ್ಲಿ ಮೇಜರ್ ರಾಬರ್ಟ್ಸ್ ಅವರು ಭಾರತೀಯ ಸೇನಾಪಡೆಯಲ್ಲಿ ಈ ವಿಶೇಷ ಕಾರ್ಯಕ್ರಮ ರೂಪಿಸಿದ್ದರು.ಬೀಟಿಂಗ್ ರಿಟ್ರೇಟ್ ಅಂಗವಾಗಿ ರಾಜಧಾನಿ ದೆಹಲಿಯ ಸಂಚಾರಿ ವ್ಯವಸ್ಥೆಯನ್ನು ಬದಲಿಸಲಾಗಿದೆ. ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 9.30ರವರೆಗೆ ವಿಜಯ್ ಚೌಕ್ ಬಂದ್ ಮಾಡಲಾಗಿದೆ.