ಲೋಕದರ್ಶನ ವರದಿ
ಧಾರವಾಡ 31: ನಗರದಿಂದ ಅಮ್ಮಿನಬಾವಿ ಗ್ರಾಮಕ್ಕೆ ಸಂಚರಿಸುವ ಬಸ್ಗಳ ಶೆಡ್ಯೂಲ್ಗಳನ್ನು ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಹೆಚ್ಚಿಸಬೇಕೆಂದು ಅಮ್ಮಿನಬಾವಿ ತಾಲೂಕು ಪಂಚಾಯತಿ ಸದಸ್ಯ ಸುರೇಂದ್ರ ದೇಸಾಯಿ ವಿಭಾಗೀಯ ನಿಯಂತ್ರಣಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಈ ಕುರಿತು ವಾಯವ್ಯ ಕನರ್ಾಟಕ ರಸ್ತೆ ಸಾರಿಗೆ ನಿಗಮಕ್ಕೆ ಪತ್ರ ಬರೆದಿರುವ ಅವರು, ಕಟ್ಟಡ ಕಾಮರ್ಿಕರು, ರೈತ ಕಾಮರ್ಿಕರು, ಇತರೇ ದಿನಗೂಲಿ ನೌಕರರು ಹಾಗೂ ವಿದ್ಯಾಥರ್ಿಗಳ ಪ್ರಯಾಣಕ್ಕೆ ಅನುಕೂಲವಾಗುವಂತೆ ಧಾರವಾಡದಿಂದ ಮುಂಜಾನೆ 8.30, ಮಧ್ಯಾಹ್ನ 12.45 ಹಾಗೂ ಸಂಜೆ 7.30 ಗಂಟೆಗೆ ಹೆಚ್ಚುವರಿ ಬಸ್ಗಳನ್ನು ಓಡಿಸಬೇಕೆಂದು ಅವರು ತಮ್ಮ ಪತ್ರದಲ್ಲಿ ಕೋರಿದ್ದಾರೆ. ಈಗಾಗಲೆ ಸಾಕಷ್ಟು ಬಾರಿ ಧಾರವಾಡ ಡೀಪೋ ವ್ಯವಸ್ತಾಪಕರಿಗೆ ಭೇಟಿ ಮಾಡಿ ಹೇಳಿದರೂ ಗ್ರಾಮಸ್ಥೆರೆಲ್ಲರ ಬೇಡಿಕೆ ಈಡೇರಿಲ್ಲ. ಹಾಗಾಗಿ ತಕ್ಷಣ ಹೆಚ್ಚುವರಿ ಬಸ್ ಸಂಚಾರ ಆರಂಭಿಸಬೇಕೆಂದು ಅವರು ಹೇಳಿದ್ದಾರೆ.
ಕೋರಿಕೆ ನಿಲುಗಡೆ : ಸವದತ್ತಿ-ಧಾರವಾಡ ರಾಜ್ಯ ಹೆದ್ದಾರಿಗೆ ಹೊಂದಿಕೊಂಡೇ ಇರುವ ಅಮ್ಮಿನಬಾವಿ ಗ್ರಾಮದ ಅಯ್ಯಪ್ಪಸ್ವಾಮಿ ದೇವಸ್ಥಾನದ ಬಳಿ ಭಕ್ತರ ಅನುಕೂಲಕ್ಕಾಗಿ ಅಧಿಕೃತವಾಗಿ 'ಕೋರಿಕೆ ನಿಲುಗಡೆ' ಮಂಜೂರು ಮಾಡಬೇಕೆಂದು ತಾ.ಪಂ. ಸದಸ್ಯ ಸುರೇಂದ್ರ ದೇಸಾಯಿ ಒತ್ತಾಯಿಸಿದ್ದಾರೆ. ಹುಬ್ಬಳ್ಳಿ-ಧಾರವಾಡ ಮಹಾನಗರ, ಸವದತ್ತಿ, ಬೆಳಗಾವಿ ಮುಂತಾದ ದೂರದ ಊರುಗಳಿಂದ ದೇವಸ್ಥಾನಕ್ಕೆ ಬರುವ ಭಕ್ತಸಮೂಹದ ಸಂಖ್ಯೆ ಈಗ ಅಧಿಕವಾಗಿದ್ದು, ಜೊತೆಗೆ ಈ ದೇವಸ್ಥಾನದ ಸುತ್ತಮುತ್ತ ಜನವಸತಿ ಹೆಚ್ಚಾಗಿ ವಾಸವಾಗಿದ್ದು ಸಾರ್ವಜನಿಕ ಸಂಚಾರಕ್ಕೂ ಈ ನಿಲುಗಡೆಯಿಂದ ಅನುಕೂಲವಾಗಲಿದೆ. ಹಾಗಾಗಿ ಎಲ್ಲ ಡೀಪೋಗಳ ಬಸ್ಗಳನ್ನು ಈ ಅಯ್ಯಪ್ಪಸ್ವಾಮಿ ದೇವಾಲಯದ ಹತ್ತಿರ ನಿಲುಗಡೆ ಮಾಡುವುದಕ್ಕೆ ಪೂರಕವಾಗಿ ಅಧಿಕೃತವಾಗಿ ವಾಯವ್ಯ ಕನರ್ಾಟಕ ರಸ್ತೆ ಸಾರಿಗೆ ನಿಗಮದ ಮೂಲಕ ಕೋರಿಕೆ ನಿಲುಗಡೆಗೆ ಆದೇಶ ಮಾಡಬೇಕೆಂದು ಅವರು ಪತ್ರ ಬರೆದು ಒತ್ತಾಯಿಸಿದ್ದಾರೆ.