ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ವಾಯವ್ಯ ಕನರ್ಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ಬಸವರಾಜ ಅಮ್ಮಣ್ಣವರ ಇತ್ತೀಚೆಗೆ ಅಧಿಕಾರ ವಹಿಸಿಕೊಂಡಿದ್ದಾರೆ.
ಬೀದರ, ಬೆಳಗಾವಿ ಹಾವೇರಿ, ಹುಬ್ಬಳ್ಳಿ, ವಿಜಯಪುರಗಳಲ್ಲಿ ವಿವಿಧ ತಾಂತ್ರಿಕ ಹುದ್ದೆಗಳಲ್ಲಿ ಇವರು ಸೇವೆ ಸಲ್ಲಿಸಿದ್ದಾರೆ.
ಕಳೆದ ವರ್ಷ ವಿಜಯಪೂರಿನಲ್ಲಿ ವಿಭಾಗೀಯ ಮೈಕ್ಯಾನಿಕಲ್ ಇಂಜಿನೀಯರ್ ಆಗಿದ್ದಾಗ ಸುಮಾರು 5.5 ಕೋಟಿ ರೂ.ಗಳ 8 ಲಕ್ಷ ಲೀಟರ್ ಇಂಧನವನ್ನು ಉಳಿತಾಯ ಮಾಡಿ ರಾಜ್ಯದಲ್ಲೇ ಮಾದರಿ ಕಾರ್ಯ ಮಾಡಿದ್ದು, ಬಾಗಲಕೋಟೆ ಜಿಲ್ಲೆಯಲ್ಲಿ ಸಹ ಇಂಧನ ಉಳಿತಾಯಕ್ಕಾಗಿ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದಾಗಿ ತಿಳಿಸಿದ್ದಾರೆ. ವಾಹನ ಚಾಲಕರಲ್ಲಿ ವಿಶೇಷ ವಾಹನ ಚಾಲನಾ ತಂತ್ರಜ್ಞಾನಗಳ ಅರಿವು ಮೂಡಿಸಲು ಕಾರ್ಯಕ್ರಮ ರೂಪಿಸಲಾಗುವುದೆಂದು ತಿಳಿಸಿದ್ದಾರೆ.