ವಿಧಾನಸಭಾ ಚುನಾವಣೆ: ಸಚಿವರಿಗೆ ಹೊಣೆಗಾರಿಕೆ ವಹಿಸಿದ ಅಮಿತ್ ಶಾ

ನವದೆಹಲಿ, ಆಗಸ್ಟ್ 9     ದೆಹಲಿ, ಮಹಾರಾಷ್ಟ್ರ, ಹರಿಯಾಣ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಗೆ   ಬಿಜೆಪಿ ಈಗಿನಿಂದಲೇ ಭರ್ಜರಿ ತಯಾರಿ ನಡೆಸಿದ್ದು  ಕೇಂದ್ರ  ಸಚಿವರು, ರಾಜ್ಯ ಸಚಿವರಿಗೆ ಪಕ್ಷದ ಅಧ್ಯಕ್ಷ ಅಮಿತ್ ಶಾ ಚುನಾವಣಾ ಉಸ್ತುವಾರಿ  ಜೊತೆಗೆ   ಹೊಣೆಗಾರಿಕೆ ವಹಿಸಿಕೊಟ್ಟಿದ್ದಾರೆ.   

ಎಲ್ಲಾ ಜವಾಬ್ದಾರಿಗಳನ್ನು ಸಚಿವರು ಕೂಡಲೇ ನಿರ್ವಹಣೆ ಮಾಡಬೇಕು ಎಂದು ಅವರು ತಾಕೀತು ಮಾಡಿದ್ದಾರೆ.   

ಮಹಾರಾಷ್ಟಕ್ಕೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬೂಪೇಂದ್ರ ಯಾದವ್ ಅವರಿಗೆ ಜವಬ್ದಾರಿ  ವಹಿಸಲಾಗಿದ್ದು ಇವರ ಜೊತೆಗೆ ಉತ್ತರಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಮತ್ತು ಕನರ್ಾಟಕದ ಮಾಜಿ ಶಾಸಕ ಲಕ್ಷ್ಮಣ ಸವಧಿ ಅವರನ್ನು ಸಹ ಉಸ್ತುವಾರಿಯನ್ನಾಗಿ ಮಾಡಲಾಗಿದೆ. 

ರಾಜ್ಯ ಸಂಘಟನಾ ಉಸ್ತುವಾರಿಯಾಗಿದ್ದ ಸರೋಜ್ ಪಾಂಡೆ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ತಕ್ಷಣದಿಂದಲೇ ಜಾರಿಗೆ ಬರುವಂತೆ ನೇಮಿಸಲಾಗಿದೆ.  

ದೆಹಲಿಗೆ ಕೇಂದ್ರ ಸಚಿವ ಪ್ರಕಾಶ್  ಜಾವಡೇಕರ್ ಅವರನ್ನು ಉಸ್ತುವಾರಿಯನ್ನಾಗಿ ಮಾಡಿದ್ದು ಮತ್ತೊಬ್ಬ ಸಚಿವ ಹರ್ದೇ ಪ್ ಸಿಂಗ್ ಪುರಿ ಮತ್ತು ಗೃಹ ಖಾತೆ ಸಹಾಯಕ ಸಚಿವ ನಿತ್ಯಾನಂದ್ ರೈ ಅವರುಗಳು ಸಹ ಉಸ್ತುವಾರಿಯಾಗಿದ್ದಾರೆ.  

ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ಹರಿಯಾಣಕ್ಕೆ ಉಸ್ತುವಾರಿಯಾಗಿ ಆಯ್ಕೆ ಮಾಡಲಾಗಿದ್ದು ಉತ್ತರ ಪ್ರದೇಶದ ಸಚಿವ  ಭೂಪೇಂದ್ರ ಸಿಂಗ್ ಅವರ ಚುನಾವಣಾ ಸಹ-ಉಸ್ತುವಾರಿಯಾಗಿದ್ದಾರೆ.  

ಜಾರ್ಖಂಡ್ನಲ್ಲಿ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಓಂ ಪ್ರಕಾಶ್ ಮಾಥುರ್ ಅವರು ಚುನಾವಣೆಯ ಉಸ್ತುವಾರಿ ವಹಿಸಿಕೊಂಡಿದ್ದರೆ, ಬಿಹಾರ ಸಚಿವ ನಂದ್ ಕಿಶೋರ್ ಯಾದವ್ ಅವರನ್ನು ಸಹ ಉಸ್ತುವಾರಿಯನ್ನಾಗಿ ಮಾಡಲಾಗಿದೆ.   

ದೆಹಲಿಯಲ್ಲಿ  ಫೆಬ್ರವರಿ ವೇಳೆಗೆ ಚುನಾವಣೆ ನಡೆಯಲಿದ್ದು ಇತರ ಮೂರು ರಾಜ್ಯಗಳಲ್ಲಿ, ಈ ವರ್ಷದ ಕೊನೆಯಲ್ಲಿ ಚುಣಾವಣೆ ನಡೆಯಲಿದೆ ಎಂದೂ ಹೇಳಲಾಗಿದೆ.