ಹಿಂದಿ ದೇಶದ ಭಾಷೆಯಾಗಬೇಕು:ಅಮಿತ್ ಶಾ ಮನವಿ

ನವದೆಹಲಿ, ಸೆಪ್ಟೆಂಬರ್ 14    ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ಹಿಂದಿ ದಿನದ ಅಂಗವಾಗಿ ದೇಶದ ಜನತೆಗೆ ಶುಭಾಶಯ ಕೋರಿ ಹಿಂದಿ ದೇಶದ ಜನತೆಯನ್ನು ಬೆಸೆಯುವ ಭಾಷೆಯಾಗಬೇಕು ಎಂದೂ ಒತ್ತಿ ಹೇಳಿದ್ದಾರೆ.    ಭಾರತ ಪ್ರತಿನಿಧಿಸಲು ಹಿಂದಿ ಅಗತ್ಯವಿರುವುದರಿಂದ ಪ್ರಾಥಮಿಕ ಭಾಷೆಯನ್ನಾಗಿ ಮಾಡಬೇಕೆಂದು ಮನವಿ ಮಾಡಿದರು.ರಾಷ್ಟ್ರದ ಪಿತಾಮಹ ಮಹಾತ್ಮ ಗಾಂಧಿ ಮತ್ತು ಉಕ್ಕಿನ ಮನುಷ್ಯ ಸರ್ದಾರ್ ಪಟೇಲ್ ಅವರ ಕನಸು ನನಸಾಗಿಸಲು ಹಿಂದಿ ಭಾಷೆಯ ಬಳಕೆ ದೇಶದಲ್ಲಿ ಹೆಚ್ಚಾಗಬೇಕು ಎಂದು ಸಹ ದೇಶವಾಸಿಗಳಿಗೆ ಮನವಿ ಮಾಡಿದರು. ಭಾರತವು ಹಲವು  ಭಾಷೆಗಳ ದೇಶವಾಗಿದೆ ಮತ್ತು ಪ್ರತಿ ಭಾಷೆಗೆ ತನ್ನದೇ ಆದ ಪ್ರಾಮುಖ್ಯತೆ ಇದೆ ಆದರೆ ಪ್ರಪಂಚದಲ್ಲಿ ಭಾರತದ ಗುರುತಾಗಬೇಕಿರುವ ಭಾಷೆಯನ್ನು ಹೊಂದಿರುವುದು ಬಹಳ ಮುಖ್ಯ ಎಂದು ಅವರು ಒತ್ತಿ ಹೇಳಿದರು ಒಂದು ಭಾಷೆ ಒಂದು ದೇಶವನ್ನು ಒಂದುಗೂಡಿಸಲು ಸಾಧ್ಯವಾಗುವುದಾದರೆ ಅದು ಹಿಂದಿಗೆ ಮಾತ್ರ ಸಾಧ್ಯ ಎಂದೂ ಹೇಳಿದರು. ಹಿಂದಿ ದಿನದ ಸಂದರ್ಭದಲ್ಲಿ ಗೃಹ ಸಚಿವಾಲಯವು ಹದಿನೈದು ದಿನ ಕಾರ್ಯಕ್ರಮ ಹಮ್ಮಿಕೊಂಡಿದ್ದು ಈ ಸಮಯದಲ್ಲಿ ಅನೇಕ ಸ್ಪರ್ಧೆಗಳು, ವಿಚಾರ ಸಂಕಿರಣಗಳು, ಸಮಾವೇಶಗಳು, ರಾಜಭಾಷಾ ಸಮ್ಮೇಳನ ಸಹ ಆಯೋಜಿಸಲಾಗುತ್ತದೆ.