ಜನರ ಸಂಕಷ್ಟಕ್ಕೆ ಸ್ಪಂದಿಸದ ಅಮಿತ್ ಶಾ: ಖರ್ಗೆ ಟೀಕೆ

ಬೆಂಗಳೂರು, ಜ. 19:     ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಸಿಎಎ ಪರಪ್ರಚಾರ, ಮತಬ್ಯಾಂಕ್  ಉಳಿಸಿಕೊಳ್ಳುವುದು ಮುಖ್ಯವೇ ಹೊರತು ರಾಜ್ಯದ ಜನರ ಸಂಕಷ್ಟ ಅವರಿಗೆ ಬೇಕಿಲ್ಲ ಎಂದು  ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.

ಸುದ್ದಿಗಾರರೊಂದಿಗೆ  ಮಾತನಾಡಿದ ಅವರು, ಅಮಿತ್ ಶಾ ಹುಬ್ಬಳ್ಳಿಯಲ್ಲಿ ರಾಜ್ಯಕ್ಕೆ ಸಂಬಂಧಿಸಿದ  ವಿಚಾರಗಳ್ಯಾವುದನ್ನು ಪ್ರಸ್ತಾಪಿಸಲಿಲ್ಲ. ಕಳಸಾ ಬಂಡೂರಿ ನಾಲೆ ಯೋಜನೆ ಬಗ್ಗೆ  ಮಾತಾಡಲಿಲ್ಲ. ಇದರ ಬಗ್ಗೆ ಮುಖ್ಯಮಂತ್ರಿಗಳು ಅಮಿತ್ ಶಾ ಅವರಿಗೆ ಕೇಳಬೇಕಿತ್ತು ಎಂದರು.

  ಕೆಪಿಸಿಸಿ ಅಧ್ಯಕ್ಷರ ಆಯ್ಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಹೈಕಮಾಂಡ್  ತೀರ್ಮಾನಕ್ಕೆ ನಾವು ಬದ್ಧ. ಅವರ ತೀರ್ಮಾನ ಯಾವಾಗ ಬರುತ್ತದೆ ಎಂಬ ಬಗ್ಗೆ ಭವಿಷ್ಯ ಹೇಳಲು  ತಮಗೆ ಗೊತ್ತಿಲ್ಲ, ಜಾದು ಮಾಡುವುದು ತಿಳಿದಿಲ್ಲ. ನಮಗಿಂತ ಮೊದಲು ಮಾಧ್ಯಮದವರಿಗೆ ಇದು  ಬೇಗನೇ ತಿಳಿಯುತ್ತದೆ ಎಂದು ಮಾರ್ಮಿಕವಾಗಿ ಉತ್ತರಿಸಿದರು.