ಮಾರ್ಚ್‌ 8 ರಂದು ಅಮೀರ್ ಹಮ್ಜಾ ನದಾಫ್ ಗೆ ಪ್ರಶಸ್ತಿ ಪ್ರಧಾನ

Amir Hamza Nadaf was conferred the award on March 8

ಕೊಪ್ಪಳ 27: ಇಲ್ಲಿನ ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ಪ್ರೌಢ ಶಾಲಾ ವಿಭಾಗದ  ನಿವೃತ್ತ ವೃತ್ತಿ ಶಿಕ್ಷಕ ಅಮೀರ್ ಹಮ್ಜಾ ನದಾಫ್ ರವರಿಗೆ ಭಾರತ ವಿಕಾಸರತ್ನ ರಾಷ್ಟ್ರ ಪ್ರಶಸ್ತಿಯನ್ನು ಇದೆ ಮಾರ್ಚ್‌ 8 ರಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದ ನಯನ ಸಭಾಭವನದಲ್ಲಿ ಜರುಗಲಿರುವ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಡೆಯುತ್ತಿರುವ 72 ರಾಷ್ಟ್ರೀಯ ಮಟ್ಟದ ಕಲಾ ಪ್ರತಿಭೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ ಎಂದು ಕಾರ್ಯಕ್ರಮ ಸಂಘಟಕ ಸುವೇ ಕಲ್ಚರಲ್ ಅಕಾಡೆಮಿ ಅಧ್ಯಕ್ಷ ರಮೇಶ್ ಸುವೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

2023- 24-ನೇ ಸಾಲಿನ ಕಾರ್ಯಕ್ರಮದಲ್ಲಿ ಸದರಿಯವರಿಗೆ ಪ್ರಶಸ್ತಿ ಗೆ ಆಯ್ಕೆ ಮಾಡಲಾಗಿತ್ತು  ಕಾರಣಾಂತರಗಳಿಂದ ಸಮಾರಂಭ ಮುಂದೊಡಲಾಗಿತ್ತು ಈಗ ಅವರನ್ನು ಇದೇ ಮಾರ್ಚ್‌ 8 ರಂದು ನಡೆಯುವ ಸಮಾರಂಭದಲ್ಲಿ ಅವರ ವೃತ್ತಿ ಶಿಕ್ಷಣ ಕ್ಷೇತ್ರದ ಉತ್ತಮ ಸೇವೆ ಗಾಗಿ ಮತ್ತು ವಿದ್ಯಾರ್ಥಿ ಬಳಗದಿಂದ ಜನ ಮೆಚ್ಚಿದ ಜನಪ್ರಿಯ ಶಿಕ್ಷಕನೆಂದು ಕರೆಯಲ್ಪಡುತ್ತಿದ್ದ ಅಮೀರ್ ಹಮ್ಜಾ ನದಾಫ್ ರವರ ಸಾಧನೆಗಾಗಿ ಅವರನ್ನು  ಅವರ ಉತ್ತಮ ಸೇವೆಯನ್ನು ಪರಿಗಣಿಸಿ ರಾಷ್ಟ್ರಮಟ್ಟದ ವಿಕಾಸರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು ಸದರಿ ಪ್ರಶಸ್ತಿಯನ್ನು ಮಾರ್ಚ್‌ 8 ರಂದು ಪ್ರಶಸ್ತಿ ಪ್ರಧಾನ ಮಾಡಿ ಸತ್ಕರಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ, ಸದರಿಯವರಿಗೆ ಪ್ರಶಸ್ತಿ ಲಭಿಸಿರೋದಕ್ಕೆ ಇಲ್ಲಿನ ಹಲವು ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿ ಬಳಗದವರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.