ಇಸ್ಲಾಮಿಕ್ ಸ್ಟೇಟ್ ಯೋಧರ ವಿಚಾರಣೆಗೆ ಅಂತರರಾಷ್ಟ್ರೀಯ ನ್ಯಾಯಮಂಡಳಿಗೆ ಅಮೆರಿಕಾ ವಿರೋಧ

 ವಾಷಿಂಗ್ಟನ್, ನ 15   :    ಇಸ್ಲಾಮಿಕ್ ಸ್ಟೇಟ್  ಭಯೋತ್ಪಾದಕ   ಗುಂಪಿನ ಸದಸ್ಯರ  ವಿಚಾರಣೆಗಾಗಿ   ಅಂತರರಾಷ್ಟ್ರೀಯ ನ್ಯಾಯಮಂಡಳಿ ಸ್ಥಾಪಿಸಬೇಕೆಂಬ ಆಲೋಚನೆಯನ್ನು  ಅಮೆರಿಕಾ ತೀವ್ರವಾಗಿ ವಿರೋಧಿಸಿದೆ. ಈ ಭಯೋತ್ಪಾದಕ ಸಂಘಟನೆಯ ಸದಸ್ಯರ ವಿಚಾರಣೆಗೆ,  ಆಯಾ ದೇಶಗಳ ರಾಷ್ಟ್ರೀಯ ಮಟ್ಟದ ನ್ಯಾಯಾಲಯಗಳು  ಹೆಚ್ಚು ಪರಿಣಾಮಕಾರಿ ಎಂಬುದು ಅಮೆರಿಕಾದ ನಂಬಿಕೆಯಾಗಿದೆ ಎಂದು ಅಮೆರಿಕಾದ ನಾಗರೀಕರ ಭದ್ರತೆ, ಪ್ರಜಾಪ್ರಭುತ್ವ ಹಾಗೂ ಮಾನವ ಹಕ್ಕುಗಳ  ಹಂಗಾಮಿ ಅಧೀನ ಕಾರ್ಯದರ್ಶಿ  ನಾಥನ್ ಸೇಲ್ಸ್  ಹೇಳಿದ್ದಾರೆ. ತಾತ್ಕಲಿಕ ಅಂತರರಾಷ್ಟ್ರೀಯ ನ್ಯಾಯಮಂಡಳಿ ಸೂಕ್ತ ಹಾಗೂ ಪರಿಣಾಮಕಾರಿ ಎಂದು  ನಾವು ಭಾವಿಸುತ್ತಿಲ್ಲ,  ರಾಷ್ಟ್ರೀಯ ಮಟ್ಟದ ನ್ಯಾಯಾಲಯಗಳು  ನೀಡುವ  ತೀಪುಗಳ ರೀತಿ  ಈ ನ್ಯಾಯಮಂಡಳಿಗಳ ತೀಪುಗಳು ಇರುವುದಿಲ್ಲ  ಎಂದು ಹೇಳಿದ್ದಾರೆ  ವಿವಿಧ  ಮಧ್ಯ ಪ್ರಾಚ್ಯ ದೇಶಗಳ   ವಶದಲ್ಲಿರುವ     ಇಸ್ಲಾಮಿಕ್  ಸ್ಟೇಟ್  ಯೋಧರ  ಹಣೆಬರಹವನ್ನು  ನಿರ್ಧರಿಸುವ ಅಂಶ, ಈ ಭಯೋತ್ಪಾದಕ  ಸಂಘಟನೆಯ  ವಿರುದ್ದ  ಸಮರ ಸಾರಲು  ರೂಪುಗೊಂಡಿರುವ  ಜಾಗತಿಕ ಮೈತ್ರಿ ಕೂಟದ  ಕಾರ್ಯಸೂಚಿಯಲ್ಲಿ ಪ್ರಮುಖ ವಿಷಯವಾಗಿದೆ   ಎಂದು ಸೇಲ್ಸ್  ಹೇಳಿದ್ದಾರೆ. ಬಂಧಿತ ಇಸ್ಲಾಮಿಕ್  ಸ್ಟೇಟ್  ಯೋಧರನ್ನು  ಅವರ ತಾಯ್ನಾಡುಗಳಿಗೆ ಹಸ್ತಾಂತರಿಸಲು  ಅಮೆರಿಕಾದ ಬೆಂಬಲವಿದೆ ಸೇಲ್ಸ್   ಪುನರುಚ್ಛರಿಸಿದರು. ಅಂತರಾಷ್ಟ್ರೀಯ   ನ್ಯಾಯಮಂಡಳಿ ರಚಿಸಬೇಕು ಎಂಬುದು   ಕಾರ್ಯಸಾಧ್ಯವಾದ ಆಯ್ಕೆಯಲ್ಲ ಎಂಬುದು ನಮ್ಮ   ಅಭಿಪ್ರಾಯವಾಗಿದ್ದು,   ವಿದೇಶಿ  ಯೋಧರನ್ನು  ಹಸ್ತಾಂತರಿಸಿಕೊಂಡು  ಅವರ ವಿಚಾರಣೆ ನಡೆಸಿ,  ಶಿಕ್ಷೆ  ವಿಧಿಸಲು  ಇತರ ದೇಶಗಳನ್ನು  ಕೋರುವುದು   ಕಾರ್ಯ ಸಾಧ್ಯವಾದ ಆಯ್ಕೆಯಾಗಿಲ್ಲ" ಎಂದು ಸೇಲ್ಸ್  ಸ್ಪಷ್ಟಪಡಿಸಿದ್ದಾರೆ.